ಗುರುವಾರ ಸಂಜೆ ತಿರುಪತಿಗೆ ತೆರಳಲಿದ್ದಾರೆ ಯಡಿಯೂರಪ್ಪ, ಸಿಎಮ್ ಬೊಮ್ಮಾಯಿ ಮತ್ತು ಅಶೋಕ ಸಹ ಹೋಗಲಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 18, 2022 | 10:52 AM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್ ಅಶೋಕ್ ಸಹ ಯಡಿಯೂರಪ್ಪನವರೊಂದಿಗೆ ತಿರುಪತಿಗೆ ಹೋಗಲಿದ್ದಾರೆ.

ಬೆಂಗಳೂರು: ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ (Parliamentary Committee) ಮತ್ತು ಚುನಾವಣಾ ಸಮಿತಿಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರಿಗೆ (BS Yediyurappa) ಸ್ಥಾನ ಸಿಕ್ಕ ಬಳಿಕ ಕರ್ನಾಟಕದ ಬಿಜೆಪಿ ಘಟಕದಲ್ಲಿ ಹೊಸ ಚೇತನ ಮೂಡಿದೆ. ಇದೇ ಸಂತಸದಲ್ಲಿ ಯಡಿಯೂರಪ್ಪನವರು ಗುರುವಾರ ಸಂಜೆ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮತ್ತು ಕಂದಾಯ ಸಚಿವ ಆರ್ ಅಶೋಕ್ ಸಹ ಯಡಿಯೂರಪ್ಪನವರೊಂದಿಗೆ ತಿರುಪತಿಗೆ ಹೋಗಲಿದ್ದಾರೆ.