ಯಡಿಯೂರಪ್ಪ ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡುತ್ತಾರೆ, ವಿಜಯೇಂದ್ರರನ್ನು ಸಿಎಂ ಮಾಡಲಲ್ಲ: ರೇಣುಕಾಚಾರ್ಯ

|

Updated on: Jan 16, 2025 | 5:08 PM

ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರೆಲ್ಲ ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ಮುಂದುವರಿಯಬಾರದು ಎನ್ನುತ್ತಿದ್ದಾರೆ, ಮಹಾ್ ನಾಯಕ ಮತ್ತು ಒಂದಷ್ಟು ಜನ ವಕಾಫ್ ವಕಾಫ್ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ, ನಾಚಿಕೆಯಾಗ್ಬೇಕು ಇವರಿಗೆ, ನಾವು ಸೋತಿರಬಹುದು ಆದರೆ ಸಾಮರ್ಥ್ಯ ಮಾತ್ರ ಕುಗ್ಗಿಲ್ಲ ಎಂದು ಹೇಳಿದ ರೇಣುಕಾಚಾರ್ಯ ವಿಜಯೇಂದ್ರರನ್ನು ಸಿಎಂ ಮಾಡುವುದರಿಂದ ನಮ್ಮನ್ನು ಯಾರೂ ತಡೆಯಲಾರರು ಎಂದರು.

ದಾವಣಗೆರೆ: ನಗರದಲ್ಲಿಂದು ಮಾಧ್ಯಮದವರೊಡನೆ ಮಾತಾಡಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿಯನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಯನ್ನು ಸಂಘಟಿಸಲು ಮತ್ತು ಪುನಃ ಅಧಿಕಾರಕ್ಕೆ ತರಲು ಬಿಎಸ್ ಯಡಿಯೂರಪ್ಪನವರು ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಲಿದ್ದಾರೆಯೇ ಹೊರತು ಬಿವೈ ವಿಜಯೇಂದ್ರರನ್ನು ಮುಖ್ಯಮಂತ್ರಿ ಮಾಡಲು ಅಲ್ಲ, ಅವರನ್ನು ಸಿಎಂ ಮಾಡಬೇಕೆನ್ನುವುದು ರಾಜ್ಯದ ಕಾರ್ಯಕರ್ತರ ಮತ್ತು ಜನರ ಸಂಕಲ್ಪವಾಗಿದೆ, ಅವರನ್ನು ಮುಖ್ಯಮಂತ್ರಿ ಮಾಡೇ ಮಾಡುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು. ಮಹಾನ್ ನಾಯಕನೊಬ್ಬ ಸೋತ ಶಾಸಕರ ಸಭೆಯ ನಂತರ 17 ಜನ ತನಗೆ ಫೋನ್ ಮಾಡಿ ವಿಜಯೇಂದ್ರನ ಒತ್ತಾಯಕ್ಕೆ ಮಣಿದು ಸಭೆಗೆ ಹೋಗಿದ್ದೆವು ಅಂದಿದ್ದಾನೆ, ಬೇರೆ ಪಕ್ಷದಲ್ಲಿದ್ದ ಅವನು ಯಡಿಯೂರಪ್ಪನವರ ಕಾಲು ಹಿಡಿದು ಬಿಜೆಪಿ ಸೇರಿದ್ದು ತನಗೆ ಗೊತ್ತಿಲ್ಲವೇ ಎಂದು ರೇಣುಕಾಚಾರ್ಯ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿಜಯೇಂದ್ರ ಭ್ರಷ್ಟ, ಆತನ ನಾಯಕತ್ವಕ್ಕೆ ನನ್ನ ವಿರೋಧ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ರಮೇಶ್ ಜಾರಕಿಹೊಳಿ ಕಿಡಿ 

Published on: Jan 16, 2025 05:07 PM