International Yoga Day 2023; ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ
ಕಾಪಿರೈಟ್, ಪೇಟೆಂಟ್, ರಾಯಲ್ಟಿ ಮೊದಲಾವುಗಳಿಂದ ಯೋಗ ಮುಕ್ತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಂತಾರಾಷ್ಟ್ರೀಯ ಯೋಗ ದಿನವಾದ (International Yoga Day 2023) ಇಂದು ನ್ಯೂಯಾರ್ಕ್ ನಗರದಲ್ಲಿ ಭಾರತೀಯ ಸಂಜಾತರು (Indian diaspora) ಮತ್ತು 190 ದೇಶಗಳ ಗಣ್ಯರ ಜೊತೆ ಯೋಗ ಮಾಡಿದರು. ಬಳಿಕ ಅಲ್ಲಿ ನೆರೆದವರನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ಮೋದಿ ಸಿರಿಧಾನ್ಯ ಮತ್ತು ಯೋಗದ ಇತಿಹಾಸ ಹಾಗೂ ಮಹತ್ವವನ್ನು ವಿವರಿಸಿದರು. ಸಿರಿಧಾನ್ಯಗಳ ಸೇವನೆ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಒಳ್ಳೆಯದು ಎಂದು ಅವರು ಹೇಳಿದರು. ಯೋಗ ಭಾರತ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿದೆ ಎಂದು ಹೇಳಿದ ಮೋದಿ ಇದನ್ನು ಯಾವುದೇ ವರ್ಗ, ಲಿಂಗ, ಧರ್ಮ, ಪ್ರಾಯದವರು ಮುಕ್ತವಾಗಿ ಮಾಡಬಹುದು ಎಂದು ಹೇಳಿದರು. ಹಾಗೆಯೇ ಯೋಗ ಮಾಡಲು ನಿರ್ದಿಷ್ವವಾದ ಸ್ಥಳ ಬೇಕು ಅಂತೇನಿಲ್ಲ; ಮನೆ, ಕಚೇರಿಗಳಲ್ಲಿ, ಪ್ರಯಾಣ ಮಾಡುವಾಗ ಇದನ್ನು ಮಾಡಬಹುದು. ಕಾಪಿರೈಟ್, ಪೇಟೆಂಟ್, ರಾಯಲ್ಟಿ ಮೊದಲಾವುಗಳಿಂದ ಯೋಗ ಮುಕ್ತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ