International Yoga Day 2023: ಬಾಗಲಕೋಟೆಯ 72-ವರ್ಷ ವಯಸ್ಸಿನ ವೃದ್ಧೆ ದಾಕ್ಷಾಯಿಣಿ ಯೋಗಾಭ್ಯಾಸ ಬೆರಗು ಮೂಡಿಸುತ್ತದೆ

International Yoga Day 2023: ಬಾಗಲಕೋಟೆಯ 72-ವರ್ಷ ವಯಸ್ಸಿನ ವೃದ್ಧೆ ದಾಕ್ಷಾಯಿಣಿ ಯೋಗಾಭ್ಯಾಸ ಬೆರಗು ಮೂಡಿಸುತ್ತದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 21, 2023 | 6:01 PM

ದಾಕ್ಷಾಯಿಣಿ ಅವರ ಯೋಗಾಭ್ಯಾಸ ಎಲ್ಲರಿಗೂ ಸ್ಫೂರ್ತಿದಾಯಕ ಅನ್ನೋದು ನಿರ್ವಿವಾದಿತ

ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ನಿವಾಸಿಯಾಗಿರುವ 72-ವರ್ಷ ವಯಸ್ಸಿನ ಈ ಹಿರಿಮಹಿಳೆಯ ಹೆಸರು ದಾಕ್ಷಾಯಿಣಿ ವಡಗೇರಿ (Dakshayani Wadgeri). ಇವರಿಗೆ ಇಂದು ವಿಶ್ವದೆಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನವನ್ನು (International Yoga Day 2023) ಆಚರಿಸಲಾಗುತ್ತದೆ ಅನ್ನೋದು ಗೊತ್ತಿದೆಯೋ ಇಲ್ವೋ? ಆದರೆ, ಯೋಗದಲ್ಲಿ ಅವರು ಸಾಧಿಶಿರುವ ಪರಿಣಿತಿಯನ್ನು ಗಮನಿಸಿ. ಹಲವಾರು ವರ್ಷಗಳ ಹಿಂದೆ ದಾಕ್ಷಾಯಿಣಿ ಅವರಿಗೆ ಅನಾರೋಗ್ಯ (sickness) ಉಂಟಾದಾಗ ಯೋಗ ಮಾಡುವ ಸಲಹೆ ನೀಡಲಾಗುತ್ತಂತೆ. ಅಲ್ಲಿಂದೀಚೆಗೆ ಇವರು ಪ್ರತಿನಿತ್ಯ ಬೆಳಗಿನ ಜಾವದಲ್ಲೇ ಯೋಗಭ್ಯಾಸದಲ್ಲಿ ನಿರತರಾಗಿ ಅಸ್ವಸ್ಥತೆಯನ್ನು ಹೊಡೆದೋಡಿಸಿ ಸಂಪೂರ್ಣ ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ. ದಾಕ್ಷಾಯಿಣಿ ಅವರ ಯೋಗಾಭ್ಯಾಸ ಎಲ್ಲರಿಗೂ ಸ್ಫೂರ್ತಿದಾಯಕ ಅನ್ನೋದು ನಿರ್ವಿವಾದಿತ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ