International Yoga Day 2023: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ: ಈ ಬಾರಿಯ ಥೀಮ್​ “ವಸುಧೈವ ಕುಟುಂಬಕಂ”

ನಮ್ಮೆಲ್ಲರ ಜೀವನದಲ್ಲಿ ಆರೋಗ್ಯವಾಗಿರಲು ಮತ್ತು ಸದಾ ಸಕ್ರಿಯವಾಗಿರಲು ಯೋಗಾಭ್ಯಾಸ ಬಹಳ ಸಹಾಯಕವಾಗುತ್ತದೆ. ಆಧುನಿಕ ಪ್ರಪಂಚದಲ್ಲಿ ಅತಿ ಹೆಚ್ಚು ಮನ್ನಣೆ ಗಳಿಸಿಕೊಳ್ಳುತ್ತಿರುವ ಯೋಗವನ್ನು ಆಧ್ಯಾತ್ಮಿಕ, ದೈಹಿಕ ಸಾಮರ್ಥ್ಯ, ಸಂಯಮ ಕಾಯ್ದುಕೊಳ್ಳಲು ಸಾಧನೆ ಮಾಡಲಾಗುವ ಉನ್ನತ ಜೀವನ ಶಿಕ್ಷಣ ಎಂದು ಗುರುತಿಸಲಾಗುತ್ತದೆ. ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಇತಿಹಾಸ, ಮಹತ್ವ ಇಲ್ಲಿದೆ

International Yoga Day 2023: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ: ಈ ಬಾರಿಯ ಥೀಮ್​ ವಸುಧೈವ ಕುಟುಂಬಕಂ
ಯೋಗ
Follow us
|

Updated on:Jun 21, 2023 | 7:40 AM

ನಮ್ಮೆಲ್ಲರ ಜೀವನದಲ್ಲಿ ಆರೋಗ್ಯವಾಗಿರಲು ಮತ್ತು ಸದಾ ಸಕ್ರಿಯವಾಗಿರಲು ಯೋಗಾಭ್ಯಾಸ (Yoga) ಬಹಳ ಸಹಾಯಕವಾಗುತ್ತದೆ. ಆಧುನಿಕ ಪ್ರಪಂಚದಲ್ಲಿ ಅತಿ ಹೆಚ್ಚು ಮನ್ನಣೆ ಗಳಿಸಿಕೊಳ್ಳುತ್ತಿರುವ ಯೋಗವನ್ನು ಆಧ್ಯಾತ್ಮಿಕ, ದೈಹಿಕ ಸಾಮರ್ಥ್ಯ, ಸಂಯಮ ಕಾಯ್ದುಕೊಳ್ಳಲು ಸಾಧನೆ ಮಾಡಲಾಗುವ ಉನ್ನತ ಜೀವನ ಶಿಕ್ಷಣ ಎಂದು ಗುರುತಿಸಲಾಗುತ್ತದೆ. ಪ್ರಸ್ತುತ ವಿಶ್ವಾದ್ಯಂತ ನಾನಾ ರೂಪಗಳಲ್ಲಿ ಹರಡಿಕೊಂಡಿರುವ ಯೋಗ ವಿದ್ಯೆ ಮೂಲ ಇರುವುದು ಭಾರತದ ಮಣ್ಣಿನಲ್ಲಿ, ಮಹಾಯೋಗಗುರು ಎಂದು ಕರೆಯಲ್ಪಡುವ ಪತಂಜಲಿ ಮಹರ್ಷಿ (Patanjali Maharshi) ಇದರ ಪ್ರವರ್ತಕರು, ಋಷಿ ಮುನಿಗಳಿಂದ ಆರಂಭವಾಗಿ ಇಂದಿನವರೆಗೆ ನಾನಾ ಮಾರ್ಪಟುಗಳೊಂದಿಗೆ ಯೋಗ ಅನೇಕರ ಜೀವನದ ಅವಿಭಾಜ್ಯ ಅಂಗವಾಗಿದೆ.

ದಿನ

ಜೂನ್ 21, 2023 ಅಂತರರಾಷ್ಟ್ರೀಯ ಯೋಗ ದಿನ (International Yoga Day) ಅಂತ ನಮಗೆಲ್ಲಾ ಈಗಾಗಲೇ ತಿಳಿದೇ ಇದೆ. 2015 ರಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಅಂತ ಘೋಷಣೆ ಮಾಡಿದಾಗಿನಿಂದ ಪ್ರತಿವರ್ಷದ ಜೂನ್ ತಿಂಗಳಿನ 21ನೇ ತಾರೀಖನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿದೆ. ಇಂದು ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನರು ಪಾಲಿಸುತ್ತಿರುವ ಜೀವನಕ್ರಮವಾಗಿದೆ.

ಇದು ಪ್ರಾಚೀನ ಅಭ್ಯಾಸವಾದ ಯೋಗದ ಪ್ರಯೋಜನಗಳನ್ನು ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ. ಈ ವರ್ಷ ಒಂಬತ್ತನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮೊದಲ ಬಾರಿಗೆ ಯೋಗಾಭ್ಯಾಸವನ್ನು ಮುನ್ನಡೆಸಲಿದ್ದಾರೆ. ಈ ಬಾರಿ ಜಗತ್ತಿನಾದ್ಯಂತ 25 ಕೋಟಿ ಜನರು ಯೋಗಾಭ್ಯಾಸದಲ್ಲಿ ಭಾಗಿಯಾಗುತ್ತಾರೆ. 180 ದೇಶಗಳ ಗಣ್ಯರು ಯೋಗಾಭ್ಯಾಸ ಮಾಡಲಿದ್ದಾರೆ.

ಈ ವರ್ಷದ ಯೋಗ ಥೀಮ್​ “ವಸುಧೈವ ಕುಟುಂಬಕಂ”

ಇತಿಹಾಸ

2014ರ ಸೆಪ್ಟೆಂಬರ್‌ 27ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯೋಗ ದಿನಾಚರಣೆಗೆ ಸಂಬಂಧಿಸಿದ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಮೋದಿಯವರ ಈ ಪ್ರಸ್ತಾವನೆಯು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ಅಗಾಧ ಬೆಂಬಲವನ್ನು ಪಡೆಯಿತು. ಅಲ್ಲದೆ, ಡಿಸೆಂಬರ್‌ 11, 2014ರಂದು ಈ ನಿರ್ಣಯವನ್ನು ಅಂಗೀಕರಿಸಲಾಯಿತು.

2015ರ ಜೂನ್‌ 21 ರಂದು ಮೊದಲ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿತ್ತು. ಅಂತರರಾಷ್ಟ್ರೀಯ ಯೋಗ ದಿನವು ಯೋಗಾಭ್ಯಾಸದ ಹಲವಾರು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಪಂಚದಾದ್ಯಂತ ಜನರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಭಾರತದ ಮಣ್ಣಿನಲ್ಲಿ ಉದಯ

ಯೋಗವು ಭಾರತದಲ್ಲಿ ಹುಟ್ಟಿಕೊಂಡ ಪ್ರಾಚೀನ ದೈಹಿಕ, ಮಾನಸಿಕ ಹಾಗೂ ಆಧ್ಮಾತಿಕ ಅಭ್ಯಾಸ. ಇದು ಹಲವಾರು ವ್ಯಾಯಾಮಗಳು, ಭಂಗಿಗಳು (ಆಸನಗಳು) ಮತ್ತು ಉಸಿರಾಟ ತಂತ್ರಗಳು (ಪ್ರಾಣಾಯಾಮ) ಮತ್ತು ಧ್ಯಾನವನ್ನು ಒಳಗೊಂಡಿದೆ.

ಯೋಗಮಂತ್ರ

ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ| ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿಂರಾನತೋಸ್ಮಿ||

ಅಂತರಂಗದ ದೋಷಗಳನ್ನು ಯೋಗದರ್ಶನದ ಮೂಲಕ, ಶಬ್ದಪ್ರಯೋಗದ ದೋಷಗಳನ್ನು ವ್ಯಾಕರಣ ಮಹಾಭಾಷ್ಯದ ಮೂಲಕ, ಜಗತ್ತಿಗೆ ಶರೀರದ ದೋಷಗಳನ್ನು ವೈದ್ಯಶಾಸ್ತ್ರದ ಮೂಲಕ ದೂರಗೊಳಿಸಿದ ಶ್ರೇಷ್ಠ ಮುನಿ ಪತಂಜಲಿಯವರಿಗೆ ಕೈಮುಗಿದು ನಮಿಸುವೆ ಎಂಬುದು ಮಂತ್ರದ ಅರ್ಥ.

ಯೋಗ ಬಲ್ಲವನಿಗೆ ರೋಗವಿಲ್ಲ!

ಯೋಗ ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲದೇ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಯೋಗದ ಮೂಲಕ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ರಕ್ತಪರಿಚಲನೆ ಉತ್ತಮಗೊಂಡು ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಅಧಿಕ ರಕ್ತದೊತ್ತಡ, ದೇಹದ ತೂಕ ನಿಯಂತ್ರಣ, ದೈಹಿಕ ಸಾಮರ್ಥ್ಯ ಹೆಚ್ಚಳ ಮುಂತಾದವುಗಳಿಗೆ ಸಹಾಯ ಮಾಡುವುದಲ್ಲದೇ ಪದೇ ಪದೇ ಕಾಡುವ ಸ್ನಾಯುಸೆಳೆತ ಸಮಸ್ಯೆ ನಿವಾರಿಸಿಕೊಳ್ಳಬಹುದು. ಯೋಗದ ಮೂಲಕ ಏಕಾಗ್ರತೆ ಹಲವು ಮಾನಸಿಕ ಸಮಸ್ಯೆ ನಿವಾರಣೆಗೆ ದಾರಿ. ಹಾಗಾಗಿ ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಹೇಳಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 am, Wed, 21 June 23