‘ಇಂಥ ಚಿತ್ರದ ಅವಶ್ಯಕತೆ ಬಹಳ ಇತ್ತು, ಸೂಕ್ತ ಸಮಯಕ್ಕೆ ಇದು ಬಂದಿದೆ’: ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಯೋಗರಾಜ್​ ಭಟ್​ ಹೊಗಳಿಕೆ

|

Updated on: Jul 28, 2023 | 5:03 PM

Kausalya Supraja Rama Movie: ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ನೋಡಿ ಯೋಗರಾಜ್​ ಭಟ್​ ಅವರು ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಬೃಂದಾ ಆಚಾರ್ಯ, ಮಿಲನಾ ನಾಗರಾಜ್​, ಡಾರ್ಲಿಂಗ್​ ಕೃಷ್ಣ ಮುಂತಾದವರು ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾದ ಪ್ರೀಮಿಯರ್​ ಶೋ ಬೆಂಗಳೂರಿನಲ್ಲಿ ನಡೆದಿದೆ. ಶಶಾಂಕ್​ ನಿರ್ದೇಶನದ ಈ ಸಿನಿಮಾ ನೋಡಿ ಯೋಗರಾಜ್​ ಭಟ್​ (Yogaraj Bhat) ಅವರು ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಇಂಥ ಒಂದು ಕೌಟುಂಬಿಕ ಕಥಾಹಂದರ ಇರುವ ಸಿನಿಮಾದ ಅವಶ್ಯಕತೆ ಬಹಳ ಇತ್ತು. ಸರಿಯಾದ ಸಮಯಕ್ಕೆ ಈ ಸಿನಿಮಾ ಬಂದಿದೆ. ಕೃಷ್ಣ ಮತ್ತು ಮಿಲನಾ ದಂಪತಿಯ ನಟನೆಗೆ ರಾಯಲ್​ ಸೆಲ್ಯೂಟ್​. ಇನ್ನುಳಿದ ಎಲ್ಲರ ಅಭಿನಯವೂ ಚೆನ್ನಾಗಿದೆ. ಈ ಸಿನಿಮಾವನ್ನು ಎಲ್ಲರೂ ನೋಡಿ ಹರಸಿ. ಜೈ ಕೌಸಲ್ಯ’ ಎಂದು ತಮ್ಮದೇ ಶೈಲಿಯಲ್ಲಿ ವಿಮರ್ಶೆ ತಿಳಿಸಿದ್ದಾರೆ ಯೋಗರಾಜ್​ ಭಟ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.