ಕಾಂಗ್ರೆಸ್ ನೀಡಿರಬಹುದಾದ ಆಫರ್ ಬಗ್ಗೆ ಏನನ್ನೂ ಹೇಳದೆ ಹಾರಿಕೆ ಉತ್ತರ ನೀಡಿದ ಯೋಗೇಶ್ವರ್

ಅರುಣ್​ ಕುಮಾರ್​ ಬೆಳ್ಳಿ

Updated on: Oct 22, 2024 | 3:48 PM

ಚನ್ನಪಟ್ಟಣ ಡಿಕೆ ಶಿವಕುಮಾರ್​ಗೆ ಪ್ರತಿಷ್ಠೆಯ ಕಣವಾಗಿದೆ, ಜೆಡಿಎಸ್/ಎನ್​ಡಿಎ ಅಭ್ಯರ್ಥಿಯನ್ನು ಸೋಲಿಸಲೇಬೇಕೆಂಬ ಛಲ ಅವರಲ್ಲಿದೆ. ಹಾಗಾಗೇ, ಕಾಂಗ್ರೆಸ್ ಪಕ್ಷದಿಂದ ಯೋಗೇಶ್ವರ್ ಅವರನ್ನು ಸ್ಪರ್ಧೆಗಿಳಿಸುವ ಯೋಚನೆ ಶಿವಕುಮಾರ್​ಗಿದೆ. ಯೋಗೇಶ್ವರ್ ಗೆದ್ದರೆ ಮಂತ್ರಿ ಮಾಡುವ ಆಫರ್ ಕೊಟ್ಟಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ರಾಮನಗರ: ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಪಿ ಯೋಗೇಶ್ವರ್, ಇಲ್ಲೂ ಅದನ್ನೇ ಹೇಳಿದರು. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಜವಾದರೂ ಕಾಂಗ್ರೆಸ್​ನಿಂದ ಬರಬಹುದಾದ ಆಫರ್ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವಂತಿದೆ. ಕಾಂಗ್ರೆಸ್ ನಾಯಕರ ಜೊತೆ ನಡೆದಿರಬಹುದಾದ ಮಾತುಕತೆಯ ಬಗ್ಗೆ ಅವರು ಏನನ್ನೂ ಹೇಳದೆ ಗೌಪ್ಯತೆ ಕಾಪಾಡಿದರು. ಚುನಾವಣೆ ಎಂದ ಮೇಲೆ ಎಲ್ಲ ಪಕ್ಷಗಳ ಆಫರ್ ಇದ್ದೇ ಇರುತ್ತದೆ ಎಂದಷ್ಟೇ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಯೋಗೇಶ್ವರ್​ರಿಂದ ಗುರುವಾರ ನಾಮಪತ್ರ ಸಲ್ಲಿಕೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.