ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಯೋಗೇಶ್ವರ್ರಿಂದ ಗುರುವಾರ ನಾಮಪತ್ರ ಸಲ್ಲಿಕೆ
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಯೋಗೇಶ್ವರ್ಗೆ ಒಂದು ಚಿಹ್ನೆಯಂತೂ ಬೇಕೇಬೇಕು, ಆದರೆ ಯಾವುದೆಂದು ಅವರಿನ್ನೂ ನಿರ್ಧರಿಸಿಲ್ಲ. ಅಷ್ಟಕ್ಕೂ ಬೆಂಬಲಿಗರು ಚಿಹ್ನೆ ಯಾವುದೆಂದು ಅವರನ್ನು ಪ್ರಶ್ನಿಸಿದಾಗ ಇನ್ನೂ ಕೆಲದಿನಗಳ ಕಾಯುವಂತೆ ಹೇಳಿದರು. ಚಿಹ್ನೆ ಆಯ್ಕೆ ಮಾಡೋದು ಸುಲಭದ ಕೆಲಸವಲ್ಲ.
ರಾಮನಗರ: ಬೆಳಗ್ಗೆ ಬೆಂಗಳೂರುನಲ್ಲಿ ಹೇಳಿದಂತೆ ಚನ್ನಪಟ್ಟಣಕ್ಕೆ ತೆರಳಿ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರೊಡನೆ ಸಭೆ ನಡೆಸಿದ ಬಳಿಕ ಅವರನ್ನು ಉದ್ದೇಶಿಸಿ ಮಾತಾಡಿದ ಸಿಪಿ ಯೋಗೇಶ್ವರ್, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮತ್ತು ಗುರುವಾರದಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸುವ ಘೋಷಣೆ ಮಾಡಿದರು. ಅವರು ಸ್ಪರ್ಧಿಸುವುದು ನಿಶ್ಚಿತವಾಗಿತ್ತು ಅದರೆ ಯಾವ ಪಕ್ಷದಿಂದ ಅನ್ನೋದು ತೀರ್ಮಾನವಾಗಿರಲಿಲ್ಲ. ಅವರ ಘೋಷಣೆ ಎಲ್ಲ ಊಹಾಪೋಹಗಳಿಗೆ ತೆರೆ ಹಾಕಿದಂತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ನಿಂದ ಸ್ಪರ್ಧಿಸಬೇಕೆಂದು ಸಿದ್ದರಾಮಯ್ಯ ಬಯಸಿದರೆ ಅದು ಅವರ ದೊಡ್ಡ ಗುಣ: ಯೋಗೇಶ್ವರ್
Published on: Oct 22, 2024 02:22 PM
Latest Videos