AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗೇಶ್ವರ್ ಒಬ್ಬ ಫ್ರಾಡ್, ಸೈನಿಕ ಅಂತ ಕರೆಯೋದು ಆ ಸಮುದಾಯಕ್ಕೆ ಅವಮಾನ: ಹೆಚ್ ವಿಶ್ವನಾಥ್

ಯೋಗೇಶ್ವರ್ ಒಬ್ಬ ಫ್ರಾಡ್, ಸೈನಿಕ ಅಂತ ಕರೆಯೋದು ಆ ಸಮುದಾಯಕ್ಕೆ ಅವಮಾನ: ಹೆಚ್ ವಿಶ್ವನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 23, 2024 | 5:08 PM

Share

ಹುಣಸೂರು ವಿಧಾನಸಭಾ ಕ್ಷೇತ್ರದಿಂದ ತಾನು ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಧಿಸಿದಾಗ, ಚುನಾವಣೆಗೆ ಅಗತ್ಯವಿರುವ ಹಣ ಮತ್ತು ಇತರ ಸಾಮಗ್ರಿಗಳನ್ನು ಬಿಎಸ್ ಯಡಿಯೂರಪ್ಪನವರು ಯೋಗೇಶ್ವರ್ ಮುಖಾಂತರ ಕಳಿಸಿದ್ದರು, ಅದರೆ ಅವನು ಅವನ್ನೆಲ್ಲ ಹೊತ್ತುಕೊಂಡು ಪರಾರಿಯಾಗಿದ್ದ ಎಂದು ವಿಶ್ವನಾಥ್ ಹೇಳಿದರು.

ಮೈಸೂರು: ಸಿಪಿ ಯೋಗೇಶ್ವರ್​ನನ್ನು ಸೈನಿಕ ಅಂತ ಕರೆಯೋದು ಆ ಸಮುದಾಯಕ್ಕೆ ಅವಮಾನ ಎಂದು ಹಿರಿಯ ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ತಾನು 40 ವರ್ಷ ಇದ್ದೋನು, ಆ ಪಕ್ಷ ನಾಡಿನ ಸ್ವಾತಂತ್ರ್ಯ, ಜನರ ರಕ್ಷಣೆ, ಆಡಳಿತ, ಅಭಿವೃದ್ಧಿ ಮೊದಲಾದವುಗಳಿಗಾಗಿ ಹೋರಾಡಿರುವಂಥದ್ದು, ಅಂಥ ಇತಿಹಾಸದ ಕಾಂಗ್ರೆಸ್ ಗೆ ಒಬ್ಬ ವಂಚಕ ಅನಿವಾರ್ಯ ಆದನೇ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮುಂತಾದವರು ಸೇರಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವರ್ಣರಂಜಿತ ರಾಜಕಾರಣಿ: 3 ಪಕ್ಷ ಬದಲಿಸಿರುವ ಯೋಗೇಶ್ವರ್ ರಾಜಕೀಯ ಹಾದಿ ಇಲ್ಲಿದೆ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More