T20 Blast: ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ 17 ವರ್ಷದ ಯುವ ಸ್ಪಿನ್ನರ್; ವಿಡಿಯೋ
T20 Blast: 2025ರ ಟಿ20 ಬ್ಲಾಸ್ಟ್‌ನಲ್ಲಿ, ಪಾಕಿಸ್ತಾನ ಮೂಲದ 17 ವರ್ಷದ ಫರ್ಹಾನ್ ಅಹ್ಮದ್ ಅವರು ನಾಟಿಂಗ್‌ಹ್ಯಾಮ್‌ಶೈರ್ ಪರ ಲಂಕಾಷೈರ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದ ಅವರು ನಾಟಿಂಗ್‌ಹ್ಯಾಮ್‌ಶೈರ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
2025 ರ ಟಿ20 ಬ್ಲಾಸ್ಟ್‌ನಲ್ಲಿ, ಪಾಕಿಸ್ತಾನಿ ಮೂಲದ 17 ವರ್ಷದ ಯುವ ಸ್ಪಿನ್ನರ್ ಫರ್ಹಾನ್ ಅಹ್ಮದ್ ಲಂಕಾಷೈರ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ನಾಟಿಂಗ್‌ಹ್ಯಾಮ್‌ಶೈರ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಂಕಾಷೈರ್ ವಿರುದ್ಧದ ಈ ಪಂದ್ಯದಲ್ಲಿ, ಫರ್ಹಾನ್ ಅಹ್ಮದ್ ಐದು ವಿಕೆಟ್‌ಗಳನ್ನು ಕಬಳಿಸಿ ತಮ್ಮ ತಂಡಕ್ಕೆ 4 ವಿಕೆಟ್‌ಗಳ ಅದ್ಭುತ ಜಯ ತಂದುಕೊಟ್ಟರು. ಫರ್ಹಾನ್ ಅಹ್ಮದ್ ಇಂಗ್ಲೆಂಡ್‌ನ ಉದಯೋನ್ಮುಖ ಸ್ಟಾರ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರ ಕಿರಿಯ ಸಹೋದರನಾಗಿದ್ದು 2024 ರ ಅಂಡರ್-19 ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು.
ಫರ್ಹಾನ್ ಅಹ್ಮದ್ ಹ್ಯಾಟ್ರಿಕ್ ವಿಕೆಟ್
ಲಂಕಾಷೈರ್ ಇನ್ನಿಂಗ್ಸ್‌ನ ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ ಫರ್ಹಾನ್, ಲ್ಯೂಕ್ ವುಡ್ ಅವರನ್ನು ಔಟ್ ಮಾಡಿದರು. ಮುಂದಿನ ಎಸೆತದಲ್ಲಿ, ಅವರು ಥಾಮಸ್ ಆಸ್ಪಿನ್‌ವಾಲ್ ಅವರನ್ನು ಪೆವಿಲಿಯನ್ಗಟ್ಟಿದರು. ಕೊನೆಯ ಎಸೆತದಲ್ಲಿ, ಮಿಚೆಲ್ ಸ್ಟಾನ್ಲಿ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಈ ಮೂರು ವಿಕೆಟ್‌ಗಳ ಜೊತೆಗೆ ಅಹ್ಮದ್, ಕ್ರಿಸ್ ಗ್ರೀನ್ ಮತ್ತು ನಾಯಕ ಕೀಟನ್ ಜೆನ್ನಿಂಗ್ಸ್ ಅವರನ್ನು ಸಹ ಔಟ್ ಮಾಡಿದರು. ಈ ರೀತಿಯಾಗಿ, ಅವರು ಈ ಪಂದ್ಯದಲ್ಲಿ 4 ಓವರ್‌ಗಳಲ್ಲಿ 25 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು.

