Belagavi: ಸ್ಕೂಟರ್ನಿಂದ ಸ್ಕಿಡ್ ಆಗಿ ಬೀಳುವ ಯುವತಿ ಲಾರಿಯ ಚಕ್ರದಡಿಗೆ ಸಿಲುಕದಿರುವುದು ಪವಾಡವೇ ಸರಿ!
ಆಕೆಯ ಹಿಂದೆ ವೇಗವಾಗಿ ಬರುತ್ತಿದ್ದ ಲಾರಿಯ ಚಾಲಕ ಕೂಡಲೇ ಬ್ರೇಕ್ ಹಾಕಿ ಲಾರಿಯನ್ನು ನಿಲ್ಲಿಸದೇ ಹೋಗಿದ್ದರೆ ಯುವತಿ ಅದರ ಮುಂದಿನ ಚಕ್ರದ ಅಡಿಗೆ ಸಿಕ್ಕು ಅಪ್ಪಚ್ಚಿಯಾಗಿರುತ್ತಿದ್ದಳು.
Belagavi: ಇದು ಯುವತಿಯ ಅದೃಷ್ಟವಲ್ಲದೆ ಮತ್ತೇನೂ ಅಲ್ಲ ಮಾರಾಯ್ರೇ. ಟ್ರಕ್ ಚಾಲಕನ ಸಮಯ ಪ್ರಜ್ಞೆಯನ್ನು (presence of mind) ಕೂಡ ನಾವು ಶ್ಲಾಘಿಸಲೇಬೇಕು. ವಿಡಿಯೋ ನಮಗೆ ಬೆಳಗಾವಿ (Belagavi) ತಾಲ್ಲೂಕಿನ ಗಣೇಶಪುರದಿಂದ ಲಭ್ಯವಾಗಿದೆ. ಯುವತಿ ಸ್ಕೂಟರ್ (Scooter) ಮೇಲೆ ಹೋಗುತ್ತಿರುವಾಗ ಅವಳ ವಾಹನದ ಮುಂದೆ ಒಂದು ನಾಯಿ ಬಂದು ಬಿಡುತ್ತದೆ. ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಆಕೆ ಜೋರಾಗಿ ಬ್ರೇಕ್ ಅದುಮಿದಾಗ ಸ್ಕೂಟರ್ ಸ್ಕಿಡ್ ಆಗಿ ರೋಡಿನ ಮೇಲೆ ಬೀಳುತ್ತಾಳೆ. ಆಕೆಯ ಹಿಂದೆ ವೇಗವಾಗಿ ಬರುತ್ತಿದ್ದ ಲಾರಿಯ ಚಾಲಕ ಕೂಡಲೇ ಬ್ರೇಕ್ ಹಾಕಿ ಲಾರಿಯನ್ನು ನಿಲ್ಲಿಸದೇ ಹೋಗಿದ್ದರೆ ಯುವತಿ ಅದರ ಮುಂದಿನ ಚಕ್ರದ ಅಡಿಗೆ ಸಿಕ್ಕು ಅಪ್ಪಚ್ಚಿಯಾಗಿರುತ್ತಿದ್ದಳು. ಬೇರೆ ದಾರಿಹೋಕರು ಆಕೆಯ ನೆರವಿಗೆ ಧಾವಿಸುತ್ತಾರೆ. ರಸ್ತೆ ಬದಿಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: Viral Video: ಕಾಶ್ಮೀರದ ದಾಲ್ ಸರೋವರದಲ್ಲಿ ಶ್ವಾನಗಳ ಶಿಕಾರಾ ಸವಾರಿ