ಪೊಲೀಸ್ ತಪಾಸಣೆ ವೇಳೆ ತಪ್ಪಿಸಿಕೊಂಡು ಹೋಗಲು ಯತ್ನ: ಆಯತಪ್ಪಿ ಬಿದ್ದ ಯುವತಿ, ಗಂಭೀರ ಗಾಯ
ದ್ವಿಚಕ್ರ ವಾಹನ ಸವಾರರ ತಪಾಸಣೆ ವೇಳೆ ಹೆಲ್ಮೆಟ್ ಧರಿಸದ ಯುವತಿ ತಪ್ಪಿಸಿಕೊಂಡು ಹೋಗುವಾಗ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿರುವಂತಹ ಘಟನೆ ಅಶೋಕಪುರಂ ಪೊಲೀಸ್ ಠಾಣೆ ಬಳಿಯ ಜಯನಗರದಲ್ಲಿ ನಡೆದಿದೆ.
ಮೈಸೂರು: ದ್ವಿಚಕ್ರ ವಾಹನ ಸವಾರರ ತಪಾಸಣೆ ವೇಳೆ ಹೆಲ್ಮೆಟ್ ಧರಿಸದ ಯುವತಿ (woman) ತಪ್ಪಿಸಿಕೊಂಡು ಹೋಗುವಾಗ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿರುವಂತಹ ಘಟನೆ ಅಶೋಕಪುರಂ ಪೊಲೀಸ್ ಠಾಣೆ ಬಳಿಯ ಜಯನಗರದಲ್ಲಿ ನಡೆದಿದೆ. ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಪೊಲೀಸರಿಂದ ಯುವತಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಸಂಚಾರ ಪೊಲೀಸರು ತಡೆಯಲು ಯತ್ನಿಸಿದ್ದು, ಸ್ಕೂಟರ್ನಿಂದ ಬಿದ್ದು ಗಾಯಗೊಂಡಿದ್ದಾರೆ. ಸದ್ಯ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕುವೆಂಪುನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos