ಉಡುಪಿಯಲ್ಲಿ ಕಂಠಮಟ್ಟ ಕುಡಿದ ಯುವತಿಯೊಬ್ಬಳು ಬೀದಿ ರಂಪಾಟ ಮಾಡಿದ್ದು ಸಾರ್ವಜನಿಕರಿಗೆ ತಮಾಷೆಯ ವಸ್ತುವಾಯಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 05, 2022 | 2:56 PM

ಒಬ್ಬ ಸಿಬ್ಬಂದಿ ಅವಳ ಮೇಲೆ ಕೈಮಾಡಲು ಮುಂದಾಗುತ್ತಾನೆ. ಅವನದ್ದೂ ತಪ್ಪು. ಯುವತಿ ಕುಡಿದಿರಬಹುದು, ಆದರೆ ಅವಳೊಬ್ಬ ಹೆಣ್ಣುಮಗಳು ಅನ್ನೋದನ್ನು ಅವನು ಮರೆತಂತಿದೆ.

ಉಡುಪಿ: ಕುಡಿದ ಮತ್ತಿನಲ್ಲಿ ಉಡುಪಿ ಜಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ಪಿಜ್ಜಾ ಶಾಪೊಂದರ (Pizza Centre) ಮುಂದೆ ರಂಪ ಮಾಡುತ್ತಿರುವ ಯುವತಿ ಉತ್ತರ ಭಾರತೀಯಳು ಅಂತ ಭಾಸವಾಗುತ್ತಿದೆ. ಅದ್ಯಾವ ಕಾರಣಕ್ಕೆ ಕಿರಿಕ್ ಮಾಡಿಕೊಂಡಳೋ ಗೊತ್ತಿಲ್ಲ ಮಾರಾಯ್ರೇ. ಅವಳ ಮತ್ತು ಇಳಿಸಲು ಶಾಪ್ ನವರು ಬಕೆಟ್ ನಿಂದ ತಣ್ಣೀರು ಸುರಿಯುವುದನ್ನು ವಿಡಿಯೋದಲ್ಲಿ ನೋಡಬಹುದು. ಒಬ್ಬ ಸಿಬ್ಬಂದಿ (bouncer) ಅವಳ ಮೇಲೆ ಕೈಮಾಡಲು ಮುಂದಾಗುತ್ತಾನೆ. ಅವನದ್ದೂ ತಪ್ಪು. ಯುವತಿ ಕುಡಿದಿರಬಹುದು, ಆದರೆ ಅವಳೊಬ್ಬ ಹೆಣ್ಣುಮಗಳು ಅನ್ನೋದನ್ನು ಆ ಧಡಿಯ ಮರೆತಂತಿದೆ. ಯುವತಿಗೆ ಮೈ ಮೇಲೆ ಪ್ರಜ್ಞೆಯೇ ಇಲ್ಲ. ತನ್ನ ಗೆಳೆಯನ ಮೇಲೂ ಅವಳು ಹಲ್ಲೆ (assault) ನಡೆಸುತ್ತಾಳೆ, ಅವನು ಎಲ್ಲವನ್ನು ಸಹಿಸಿಕೊಳ್ಳುತ್ತಾನೆ. ಅಪ್ಪ-ಅಮ್ಮ ಕಷ್ಟಪಟ್ಟು ದುಡಿದ ವ್ಯಾಸಂಗಕ್ಕೆ ಕಳಿಸುವ ಹಣವನ್ನು ಹೀಗೆ ಪೋಲು ಮಾಡುವುದು, ರಸ್ತೆಯಲ್ಲಿ ನಿಂತು ರಂಪ ಮಾಡುತ್ತಾ ಸಾರ್ವಜನಿಕರಿಗೆ ತಮಾಷೆಯ ವಸ್ತುವಾಗೋದು ಎಷ್ಟು ಸರಿ ಅಂತ ಖುದ್ದು ಯುವತಿಯೇ ಯೋಚಿಸಬೇಕು.