ಮೈಸೂರಲ್ಲೂ ಆರ್ಸಿಬಿ ತಂಡ ಅಭಿಮಾನಿಗಳ ಹರ್ಷೋದ್ಗಾರ, ತಿಂಡಿ ತಿನ್ನುತ್ತ ಕುಣಿದ ಯುವತಿಯರು
ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಅರ್ಸಿಬಿ ತಂಡದ ಬೌಲರ್ಗಳು ಸ್ಥಳೀಯ ತಂಡದ ಬ್ಯಾಟರ್ಗಳನ್ನು ಕಟ್ಟಿಹಾಕುತ್ತ ಡಗ್ಔಟ್ ದಾರಿ ತೋರಿಸಿದರು. ಬೆಂಗಳೂರು ಟೀಮಿನ ಜೋಶ್ ಹೇಜೆಲ್ವುಡ್, ಯಶ್ ದಯಾಳ್ ಮತ್ತು ಸುಯಾಶ್ ಶರ್ಮ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ 3, 2 ಮತ್ತು ಮೂರು ವಿಕೆಟ್ಗಳನ್ನು ಪಡೆದರು. 17 ರನ್ ನೀಡಿ 3 ವಿಕೆಟ್ ಪಡೆದ ಸುಯಾಶ್ ಪಂದ್ಯದ ವ್ಯಕ್ತಿ ಎನಿಸಿಕೊಂಡರು.
ಮೈಸೂರು, ಮೇ 30: ಗುರುವಾರ ಸಾಯಂಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಕರ್ನಾಟಕದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದ್ದು ಸುಳ್ಳಲ್ಲ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪ್ರತಿನಿಧಿಸುವ ಆರ್ಬಿಗೆ ಅಪಾರ ಪ್ರಮಾಣದಲ್ಲಿ ಮಹಿಳಾ ಅಭಿಮಾನಿಗಳೂ ಇದ್ದಾರೆ. ಮೈಸೂರಿನ ಹೋಟೆಲೊಂದರಲ್ಲಿ ತಿಂಡಿ ತಿನ್ನುತ್ತಾ, ಕಾಫಿ ಹೀರುತ್ತಾ ಇಲ್ಲವೇ ಊಟ ಮಾಡುತ್ತ ಕುಳಿತಿದ್ದ ಕ್ರಿಕೆಟ್ ಪ್ರೇಮಿ ಯುವತಿಯರು ಟಿವಿ9 ಕನ್ನಡ ವಾಹಿನಿಯು ಅರ್ಸಿಬಿ ತಂಡ ಪಂಜಾಬನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಸುದ್ದಿಯನ್ನು ಬ್ರೇಕ್ ಮಾಡಿದ್ದು ಅವರ ಮುಂದಿದ್ದ ದೈತ್ಯ ಸ್ಕ್ರೀನ್ ಮೇಲೆ ಫ್ಲ್ಯಾಶ್ ಆಗುತ್ತಿದ್ದಂತೆಯೇ ಆರ್ಸಿಬಿ ಆರ್ಸಿಬಿ ಎನ್ನುತ್ತಾ ಕುಣಿದಾಡತೊಡಗಿದರು.
ಇದನ್ನೂ ಓದಿ: IPL 2025: 6,6,6,6,6…! ರಾಯಲ್ಸ್ ವಿರುದ್ಧ ಅಬ್ಬರಿಸಿದ ಫಿಲ್ ಸಾಲ್ಟ್; ವಿಡಿಯೋ ನೋಡಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 30, 2025 12:13 PM
Follow Us
