ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರ ವ್ಹೀಲಿಂಗ್, ವಾಹನ ಸವಾರರಿಗೆ ಫಜೀತಿ

| Updated By: ವಿವೇಕ ಬಿರಾದಾರ

Updated on: Feb 05, 2024 | 9:25 AM

ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಪುಂಡರು ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಕಾಟ ಕೊಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಒಂದು ಬೈಕ್​ನಲ್ಲಿ 2-3 ಜನ ಕೂತು ರಸ್ತೆ ಮಧ್ಯೆ ವ್ಹೀಲಿಂಗ್​ ಮಾಡಿದ್ದಾರೆ. ನಾಲ್ಕೈದು ಬೈಕ್​ಗಳಲ್ಲಿ ಬಂದ ಯುವಕರು ವ್ಹೀಲಿಂಗ್​ ಮಾಡುತ್ತಾ ಇತರೆ ಸವಾರರಿಗೆ ತೊಂದರೆ ಕೊಡುತ್ತಿದ್ದಾರೆ.

ಹಾಸನ, ಫೆಬ್ರವರಿ 04: ಇತ್ತೀಚಿಗೆ ಹೆದ್ದಾರಿಗಳಲ್ಲಿ ಬೈಕ್ ವ್ಹೀಲಿಂಗ್​ ಮಾಡುವರ ಹಾವಳಿ ಹೆಚ್ಚಾಗಿದೆ. ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಪುಂಡರು ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಕಾಟ ಕೊಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಒಂದು ಬೈಕ್​ನಲ್ಲಿ 2-3 ಜನ ಕೂತು ರಸ್ತೆ ಮಧ್ಯೆ ವ್ಹೀಲಿಂಗ್​ ಮಾಡಿದ್ದಾರೆ. ನಾಲ್ಕೈದು ಬೈಕ್​ಗಳಲ್ಲಿ ಬಂದ ಯುವಕರು ವ್ಹೀಲಿಂಗ್​ ಮಾಡುತ್ತಾ ಇತರೆ ಸವಾರರಿಗೆ ತೊಂದರೆ ಕೊಡುತ್ತಿದ್ದಾರೆ. ರಸ್ತೆಯಲ್ಲಿ ಬರುವ ಇತರೆ ವಾಹನಗಳಿಗೆ ದಾರಿ ಬಿಡದೆ ಪುಂಡಾಟವಾಡುತ್ತಿದ್ದಾರೆ. ಯುವಕರು ವ್ಹೀಲಿಂಗ್​ ಮಾಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿತ್ಯವೂ ಇಂತಹ ವ್ಹೀಲಿಂಗ್ ಪುಂಡರಿಂದ ವಾಹನ ಸವಾರರಿಗೆ ಫಜೀತಿಯಾಗಿದೆ. ಈ ಪುಂಡರಿಂದ ವಾಹನ ಸವಾರರು ಪ್ರಾಣಾಪಾಯ ಭೀತಿಯಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಪುಂಡರು ಕಿಲೋಮೀಟರ್​​ಗಟ್ಟಲೆ ವ್ಹೀಲಿಂಗ್ ಮಾಡುತ್ತಾ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಇತರೆ ವಾಹನ ಸವಾರರು ಆಗ್ರಹಿಸಿದ್ದಾರೆ.