ನಿಮ್ಮ ಪ್ರತಿಭಟನೆಗಳಿಂದ ನಮ್ಮ ಬದುಕನ್ನೇಕೆ ನರಕ ಮಾಡುತ್ತಿರುವಿರಿ ಅಂತ ದೆಹಲಿಯಲ್ಲಿ ಒಬ್ಬ ಮಹಿಳೆ ಸಿದ್ದರಾಮಯ್ಯನವರನ್ನು ಕೇಳಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 22, 2022 | 11:25 AM

ಜಾರಿ ನಿರ್ದೇಶನಾಲಯವು ಬುಧವಾರದಂದು ಸತತವಾಗಿ 6ನೇ ದಿನ ವಿಚಾರಣೆಗೆ ಕರೆದಿರುವುದು ಮತ್ತು ಅವರನ್ನು ಬಂಧಿಸುವ ಸಾಧ್ಯತೆಯೂ ದಟ್ಟವಾಗಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್ ನಾಯಕರ ಜೊತೆ ಕೆಪಿಸಿಸಿ ನಾಯಕರು ಸಹ ನವದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ.

New Delhi: ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯವು (ED) ಬುಧವಾರದಂದು ಸತತವಾಗಿ 6ನೇ ದಿನ ವಿಚಾರಣೆಗೆ ಕರೆದಿರುವುದು ಮತ್ತು ಅವರನ್ನು ಬಂಧಿಸುವ ಸಾಧ್ಯತೆಯೂ ದಟ್ಟವಾಗಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್ ನಾಯಕರ ಜೊತೆ ಕೆಪಿಸಿಸಿ (KPCC) ನಾಯಕರು ಸಹ ನವದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ. ಬುಧವಾರ ಬೆಳಗ್ಗೆ ಸಿದ್ದರಾಮಯ್ಯನವರು (Siddaramaiah) ಇತರ ಕೆಲ ನಾಯಕರೊಂದಿಗೆ ಎಐಸಿಸಿ ಕಚೇರಿಗೆ ಹೋಗುವಾಗ ಆ ಭಾಗದ ಕೆಲವು ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಮಾಡಿರುವುದರಿಂದ ದೆಹಲಿಯ ಒಬ್ಬ ಮಹಿಳೆ ‘ನಿಮ್ಮ ಪ್ರತಿಭಟನೆಗಳಿಂದ ನಮ್ಮ ಬದುಕನ್ನೇಕೆ ನರಕ ಮಾಡುತ್ತಿದ್ದೀರಿ?’ ಅಂತ ಮಾಜಿ ಮುಖ್ಯಮಂತ್ರಿಯವರನ್ನು ಕೇಳುತ್ತಾರೆ. ಸಿದ್ದರಾಮಯ್ಯನವರಲ್ಲಿ ಅದಕ್ಕೆ ಉತ್ತರವಿರಲಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.