ಅಪ್ಪನ ಕಾರೊಂದಿಗೆ ರೋಡಲ್ಲಿ ಕಂಡ ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕಾರು ಉಪಯೋಗಿಸಿದರೆ ತಪ್ಪೇನಿದೆ ಎಂದರು!
ಪೊಲೀಸರು ಅಲ್ಲಿ ಕಾಣದೆ ಹೋದಾಗ ತೊಂದರೆ ಮಾಡೋದಕ್ಕೆ ಹೀಗೆ ಮಾಡ್ತಾ ಇದ್ದೀರಾ ಅಂತ ಕೇಳುತ್ತಾರೆ. ಅವರು ಕಾರಲ್ಲಿ ಕೂತು ಮಾತಾಡುವ ಧ್ವನಿ ಮತ್ತು ಕೆಳಗಿಳಿದು ಬಂದ ಮೇಲೆ ಆಡುವ ಮಾತಿನ ಧಾಟಿ ಬದಲಾಗುತ್ತದೆ.
ಕಾಂಗ್ರೆಸ್ ಯುವ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಗೆ (Mohammad Nalpad) ಪಕ್ಷ ಒಂದು ಪ್ರತ್ಯೇಕ ಕಾರು ಕೊಟ್ಟಿಲ್ಲ ಅನಿಸುತ್ತಿದೆ. ಕಾಂಗ್ರೆಸ್ ಶಾಸಕರಾಗಿರುವ ತಮ್ಮ ತಂದೆ ಎನ್ ಎ ಹ್ಯಾರಿಸ್ (N A Haris) ಅವರ ಕಾರಿನಲ್ಲೇ ಓಡಾಡುತ್ತಿದ್ದಾರೆ. ಕಾರಿನ ಮುಂದೆ ಶಾಸಕರು ಅಂತ ದೊಡ್ಡದಾಗಿ ಹಸಿರು ಬಣ್ಣದಲ್ಲಿ ಬರೆದಿರುವ ಒಂದು ಫಲಕ ಸಹ ಇದೆ. ಬೆಂಗಳೂರಿನಲ್ಲಿ ಶುಕ್ರವಾರದಂದು ಟಿವಿ9 ವರದಿಗಾರನಿಗೆ ಮತ್ತು ಕಾರು ಪಾರ್ಕ್ ಮಾಡಿದ ಪ್ರದೇಶದಲ್ಲಿ ಓಡಾಡುತ್ತಿದ್ದ ಜನರಿಗೆ ಶಾಸಕರೇ ಕಾರಲ್ಲಿರಬಹುದು ಅನಿಸಿದೆ. ಆದರೆ ಅದಲ್ಲಿದ್ದಿದ್ದು ಅವರ ಮಗ ಮೊಹಮ್ಮದ್ ನಲಪಾಡ್. ವರದಿಗಾರ ‘ಏನ್ಸಾರ್, ಶಾಸಕರ ಕಾರು ಉಪಯೋಗಿಸುತ್ತಿದ್ದೀರಿ,’ ಅಂತ ಅಂತ ಕೇಳಿದಾಗ, ‘ಸಾರ್, ಇದು ನನ್ನ ತಂದೆ ಕಾರು, ನಾನು ಉಟ್ಟಿರುವ ಬಟ್ಟೆಯೂ ಅವರದ್ದೇ, ಕಾರು ಉಪಯೋಗಿಸಿದರೆ ತಪ್ಪೇನಿದೆ,’ ಅನ್ನುತ್ತಾರೆ.
‘ಕಾರು ಸಾಹೇಬರದ್ದು, ನಾನು ಉಪಯೋಗಿಸುತ್ತಿದ್ದೇನೆ ಅಷ್ಟೇ,’ ಅಂತ ಮೊಹ್ಮಮ್ಮದ್ ಹೇಳಿದಾಗ, ವರದಿಗಾರ ಅಲ್ಲಿಂದ ಹೊರಡುತ್ತಾರೆ. ಆಗ ಶಾಸಕರ ಮಗ ‘ಯಾಕ್ಸಾರ್ ಇದನ್ನು ಸುದ್ದಿ ಮಾಡ್ತೀರಾ,’ ಅಂತ ಕೇಳಿದಾಗ ವರದಿಗಾರ, ‘ಹಾಗೇನಿಲ್ಲ ಸಾರ್, ಜನ ಮತ್ತು ಪೊಲೀಸರು ಕೇಳ್ತಾ ಇದ್ರು ಅದಕ್ಕೆ ಕೇಳಿದೆ,’ ಅನ್ನುತ್ತಾರೆ. ಅಷ್ಟಕ್ಕೆ ಸುಮ್ಮನಾgದ ಮೊಹಮ್ಮದ್, ‘ಯಾವ ಪೊಲೀಸ್, ಎಲ್ಲಿದ್ದಾರೆ ತೋರ್ಸಿ,’ ಅನ್ನುತ್ತಾ ಕಾರಿನಿಂದ ಇಳಿದು ಬರುತ್ತಾರೆ.
ಪೊಲೀಸರು ಅಲ್ಲಿ ಕಾಣದೆ ಹೋದಾಗ ತೊಂದರೆ ಮಾಡೋದಕ್ಕೆ ಹೀಗೆ ಮಾಡ್ತಾ ಇದ್ದೀರಾ ಅಂತ ಕೇಳುತ್ತಾರೆ. ಅವರು ಕಾರಲ್ಲಿ ಕೂತು ಮಾತಾಡುವ ಧ್ವನಿ ಮತ್ತು ಕೆಳಗಿಳಿದು ಬಂದ ಮೇಲೆ ಆಡುವ ಮಾತಿನ ಧಾಟಿಯನ್ನು ಗಮನಿಸಿ.
ಅವರು ಈಗಷ್ಟೇ ಕಾಂಗ್ರೆಸ್ ಯುವ ಮೋರ್ಚಾದ ಅಧ್ಯಕ್ಷರಾಗಿರುವುದರಿಂದ ಮುಂದೆ ಇಂಥದ್ದೆಲ್ಲ ನೋಡಲು ಸಾಕಷ್ಟು ಸಿಗಲಿದೆ.
ಇದನ್ನೂ ಓದಿ: Mohammed Nalapad: ಈಶ್ವರಪ್ಪ ವಿರುದ್ಧ ರಾಷ್ಟ್ರಧ್ವಜ ಗಲಾಟೆ ಜೋರು, ನಲಪಾಡ್ ನೇತೃತ್ವದ ಯುವ ಕಾಂಗ್ರೆಸ್ ಪಡೆ ಫುಲ್ ಆಕ್ಟೀವ್!