ನಾನು ಲವ್ ಜಿಹಾದ್ ಮಾಡಿಲ್ಲ, ಇಷ್ಟಪಟ್ಟೇ ಮದುವೆ ಆಗಿದ್ದೇವೆ: ಯುಟ್ಯೂಬರ್ ಮುಕಳೆಪ್ಪ
ಮುಕಳೆಪ್ಪ ಮತ್ತು ಗಾಯತ್ರಿ ಪರಸ್ಪರ ಒಪ್ಪಿಕೊಂಡು ವಿವಾಹವಾಗಿರುವುದಾಗಿ ಹೇಳಿದರೆ, ಅತ್ತ ಪೋಷಕರು ಮತ್ತು ಹಿಂದು ಸಂಘಟನೆಗಳು ಲವ್‌ಜಿಹಾದ್ ಬಣ್ಣ ಬಳಿದಿವೆ. ಸದ್ಯ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಮುಕಳೆಪ್ಪ, ಇಷ್ಟಪಟ್ಟು ಮದುವೆ ಆಗಿದ್ದೇವೆ, ಲವ್ ಜಿಹಾದ್ ಮಾಡಿಲ್ಲ ಎಂದು ಹೇಳಿದ್ದಾನೆ. ವಿಡಿಯೋ ನೋಡಿ.
ಹುಬ್ಬಳ್ಳಿ, ಸೆಪ್ಟೆಂಬರ್ 24: ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Mukaleppa) ಮತ್ತು ಗಾಯತ್ರಿ ನಡುವಿನ ಲವ್‌ಮ್ಯಾರೇಜ್ ಸಾಕಷ್ಟು ಸದ್ದು ಮಾಡುತ್ತಿದೆ. ಇವರಿಬ್ಬರೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಬ್‌ರಿಜಿಸ್ಟರ್ ಕಚೇರಿಯಲ್ಲಿ ಜೂನ್ 5ರಂದು ರಿಜಿಸ್ಟರ್ ಮದುವೆಯಾಗಿದ್ದರು. ಈ ಮದುವೆ ವಿವಾದಕ್ಕೆ ಗುರಿಯಾಗಿದೆ. ವಿಚಾರಣೆ ವೇಳೆ ಯುವತಿ ಗಾಯತ್ರಿ, ಮುಕಳೆಪ್ಪ ನನ್ನ ಕಿಡ್ನ್ಯಾಪ್ ಮಾಡಿಲ್ಲ. ಸ್ವಯಿಚ್ಛೆಯಿಂದ ಮದುವೆಯಾಗಿದ್ದೇನೆ ಅಂತಾ ಹೇಳಿದ್ದಳು. ಈಗ ಮುಕಳೆಪ್ಪ ಸ್ಪಷ್ಟನೆ ನೀಡಿದ್ದಾನೆ. ‘ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ನನ್ನ ಧರ್ಮವನ್ನು ನಾನ್ ಪಾಲಿಸುತ್ತೇನೆ. ನನ್ನ ಪತ್ನಿ ಅವಳ ಧರ್ಮವನ್ನು ಅವಳು ಪಾಲಿಸುತ್ತಾಳೆ’ ಎಂದು ಹೇಳಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
