Karnataka Assembly Polls: ಕಾಂಗ್ರೆಸ್ ನಾಯಕರ ಧೋರಣೆಯಿಂದ ವೈಎಸ್ವಿ ದತ್ತಾ ತೀವ್ರ ನೊಂದುಕೊಂಡಿದ್ದಾರೆ
ಅಭ್ಯರ್ಥಿ ಘೋಷಣೆ ಮಾಡುವ ಮೊದಲು ಮತ್ತು ನಂತರ ಸಿದ್ದರಾಮಯ್ಯನವರಾಗಲೀ, ಡಿಕೆ ಶಿವಕುಮಾರ್ ಅವರಾಗಲೀ ಸಂಪರ್ಕಿಸುವ ಪ್ರಯತ್ನ ಕೂಡ ಮಾಡದಿರುವುದು ದತ್ತಾರನ್ನು ಬಹಳ ಬೇಜಾರುಗೊಳಿಸಿದೆ.
ಚಿಕ್ಕಮಗಳೂರು: ಇತ್ತೀಚಿಗಷ್ಟೇ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಕಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದ ಅಪರೂಪದ ಪ್ರಾಮಾಣಿಕ ರಾಜಕಾರಣಿ ವೈಎಸ್ವಿ ದತ್ತಾ (YSV Datta) ಬಹಳ ನೊಂದುಕೊಂಡಿದ್ದಾರೆ. ಕಾಂಗ್ರೆಸ್ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ದತ್ತಾ ಮತ್ತು ಅವರ ಬೆಂಬಲಿಗರಿಗೆ ಬೇಸರವಾಗಿರೋದು ಟಿಕೆಟ್ ಸಿಗದೆ ಹೋಗಿದ್ದಕ್ಕಲ್ಲ ಮತ್ತು ಟಿಕೆಟ್ ಪಡೆದವರ ಬಗ್ಗೆ ಅಸೂಯೆಯೂ ಅವರಲ್ಲಿಲ್ಲ. ಆದರೆ, ಟಿಕೆಟ್ ನೀಡುವ ಮೊದಲು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೋಗಿದ್ದು, ಬೇರೆ ಕ್ಷೇತ್ರಗಳಲ್ಲಿ ನಡೆಸಿದ ಪ್ರಕ್ರಿಯೆ ಕಡೂರಲ್ಲಿ ನಡೆಸಿದಿರುವುದು ಅವರಲ್ಲಿ ಬಹಳ ಅಸಮಾಧಾನ ಮೂಡಿಸಿದೆ. ಅಭ್ಯರ್ಥಿ ಘೋಷಣೆ ಮಾಡುವ ಮೊದಲು ಮತ್ತು ನಂತರ ಸಿದ್ದರಾಮಯ್ಯನವರಾಗಲೀ (Siddaramaiah), ಡಿಕೆ ಶಿವಕುಮಾರ್ (DK Shivakumar) ಅವರಾಗಲೀ ಸಂಪರ್ಕಿಸುವ ಪ್ರಯತ್ನ ಕೂಡ ಮಾಡದಿರುವುದು ದತ್ತಾರನ್ನು ಬಹಳ ಬೇಜಾರುಗೊಳಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos