Meet Nithin Maliyekkal: ಹೆದ್ದಾರಿಯಲ್ಲಿ ಚಹಾ ಮಾರುವ ಯುವಕನಿಗೆ ಎವರೆಸ್ಟ್ ಪರ್ವತ ಹತ್ತಿ ಶಿಖರದಲ್ಲಿ ತಿರಂಗ ಹಾರಿಸುವಾಸೆ!

Meet Nithin Maliyekkal: ಹೆದ್ದಾರಿಯಲ್ಲಿ ಚಹಾ ಮಾರುವ ಯುವಕನಿಗೆ ಎವರೆಸ್ಟ್ ಪರ್ವತ ಹತ್ತಿ ಶಿಖರದಲ್ಲಿ ತಿರಂಗ ಹಾರಿಸುವಾಸೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 07, 2023 | 5:15 PM

ನಿತಿನ್ ಉತ್ಸುಕತೆ ಮತ್ತು ಆಸಕ್ತಿಯಯಿಂದ ಇಂಪ್ರೆಸ್ ಅಗುವ ಜನ ಚಹಾ ಕುಡಿದ ಬಳಿಕ ಒಂದಷ್ಟು ಹೆಚ್ಚುವರಿ ಹಣವನ್ನು ಅವರಿಗೆ ನೀಡುತ್ತಾರೆ. ನಿತಿನ್ ಮೊದಲ ಬಾರಿಗೇನೂ ದೊಡ್ಡ ಕನಸಿನ ಬೆನ್ನಟ್ಟಿಲ್ಲ.

‘ಜನೆವರಿ 1, 2021 ರಂದು ಮನೆಯಿಂದ ಹೊರಬಿದ್ದಾಗ ನನ್ನ ಬಳಿ ಇದ್ದಿದ್ದು ರೂ. 170 ಮತ್ತು ಒಂದು ಕನಸು,’ ಎಂದು ನಿತಿನ್ ಮಲಿಯೆಕ್ಕಲ್ (Nithin Maliyekkal) ಮಲೆಯಾಳಂ ಭಾಷೆಯಲ್ಲಿ ಹೇಳುತ್ತಾರೆ. 25-ವರ್ಷ-ವಯಸ್ಸಿನ ಕೇರಳದ ತ್ರಿಸ್ಸೂರ್ ನಿವಾಸಿ ನಿತಿನ್ ಗೆ ಎವರೆಸ್ಟ್ ಶಿಖರದ (Mount Everest) ಮೇಲೆ ತಿರಂಗ ಹಾರಿಸುವ ಕನಸಿದೆ. ತನ್ನ ಸಾಹಸಯಾತ್ರೆಗೆ ಹಣ ಹೊಂದಿಸಿಕೊಳ್ಳಲು ಎರ್ನಾಕುಲಂ-ತ್ರಿಸ್ಸೂರ್ ಹೆದ್ದಾರಿಯಲ್ಲಿ ಟಿ-ಬ್ರೊ (Tea Bro) ಹೆಸರಿನಲ್ಲಿ ಒಂದು ಚಿಕ್ಕ ಚಹಾದಂಗಡಿ ಪ್ರಾರಂಭಿಸಿದ್ದಾರೆ.

‘ಎವರೆಸ್ಟ್ ಶಿಖರವನ್ನು ಹತ್ತುವುದು ನನ್ನ ಈಗಿನ ಗುರಿಯಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಎವರೆಸ್ಟ್ ಶಿಖರಾಹೋಣ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ನನ್ನ ಅಭಿಯಾನಕ್ಕೆ ರೂ. 35 ಲಕ್ಷ ವೆಚ್ಚ ತಗುಲಲಿದೆ. ಚಹಾ ಮಾರಿ ಹಣವನ್ನು ಹೊಂದಿಸಿಕೊಳ್ಳುವ ಯೋಚನೆ ನನಗಿದೆ. ಈ ಸಂದೇಶ ಹೆಚ್ಚು ಜನರಿಗೆ ತಲುಪಿ, ಗ್ರಾಹಕರ ಸಂಖ್ಯೆ ಹೆಚ್ಚಿ, ವ್ಯಾಪಾರ ವೃದ್ಧಿಸಿ ಮುಂದಿನ 4 ವರ್ಷಗಳಲ್ಲಿ ಎವರೆಸ್ಟ್ ಹತ್ತುವ ಭರವಸೆ ನನಗಿದೆ,’ ಎಂದು ನಿತಿನ್ ಮಲಿಯೆಕ್ಕಲ್ ಹೇಳುತ್ತಾರೆ.

ಇದನ್ನೂ ಓದಿ: Viral Video: ಮೆಟ್ರೋದಲ್ಲಿ ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋ ವೈರಲ್​​​

ನಿತಿನ್ ಉತ್ಸುಕತೆ ಮತ್ತು ಆಸಕ್ತಿಯಯಿಂದ ಇಂಪ್ರೆಸ್ ಅಗುವ ಜನ ಚಹಾ ಕುಡಿದ ಬಳಿಕ ಒಂದಷ್ಟು ಹೆಚ್ಚುವರಿ ಹಣವನ್ನು ಅವರಿಗೆ ನೀಡುತ್ತಾರೆ. ನಿತಿನ್ ಮೊದಲ ಬಾರಿಗೇನೂ ದೊಡ್ಡ ಕನಸಿನ ಬೆನ್ನಟ್ಟಿಲ್ಲ. 2021 ರಲ್ಲಿ ಅವರು ಕೇರಳದಿಂದ ಲಡಾಖ್ ಗೆ ಒಂದು ಹಳೆ ಮುರುಕಲು ಸೈಕಲ್ ನಲ್ಲಿ ಸವಾರಿ ಮಾಡಿದ್ದರು. ಆಗಲೂ ಅವರು ಸೈಕಲ್ ಹಿಂಭಾಗದಲ್ಲಿ ಟೀ ತಯಾರಿಸಿ ಮಾರುತ್ತಾ ತಮ್ಮ ಯಾತ್ರೆಗೆ ಹಣ ಜೋಡಿಸಿದ್ದರು.

‘ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಗೆಬಗೆಯ ಮತ್ತು ಕುತೂಹಲಕಾರಿ ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದೆ. ಅದೊಂದು ವಿಶಿಷ್ಟ ಅನುಭವ. ನಾನು ಭೇಟಿಯಾಗುತ್ತಿದ್ದ ಜನರನ್ನು ಸಿನಿಮಾಗಳ ಕ್ಯಾರೆಕ್ಟರ್ ಗಳಲ್ಲಿ ಹುಡುಕುವ ಪ್ರಯತ್ನ ಮಾಡುತ್ತಿದ್ದೆ. ಆಗಲೇ ನನಗೆ ಪ್ರಯಾಣ ಮತ್ತು ಸಿನಿಮಾ ನಡುವೆ ಗಾಢವಾದ ಸಂಬಂಧವಿದೆ ಅನ್ನೋದು ಮನವರಿಕೆಯಾಯಿತು. ಹಾಗಾಗೇ ಮುಂಬರುವ ದಿನಗಳಲ್ಲಿ ನಾನು ಸಿನಿಮಾ ಮತ್ತು ಪ್ರಯಾಣದಲ್ಲಿ ನನ್ನ ಅಭಿರುಚಿಯನ್ನು ಸಮಾನವಾಗಿ ತೊಡಗಿಸಲು ನಿರ್ಧರಿಸಿದ್ದೇನೆ,’ ಎಂದು ನಿತಿನ್ ಹೇಳುತ್ತಾರೆ.

ಇದನ್ನೂ ಓದಿ: Kiran Kumar Reddy Joins BJP: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಗೆ ಸೇರ್ಪಡೆ

ಸಿನಿಮಾಗಳಲ್ಲೂ ತೀವ್ರ ಆಸಕ್ತಿಯಿಟ್ಟುಕೊಂಡಿರುವ ನಿತಿನ್ ತನ್ನ ಸೈಕಲ್ ಸಾಹಸಯಾತ್ರೆಯ ಫಲವಾಗಿ ಖ್ಯಾತ ಮಲಯಾಳಂ ಸಿನಿಮಾ ನಿರ್ದೇಶಕ ಜೀತು ಜೋಸೆಫ್ ಅವರ ‘ಕೂಮನ್’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ