ಸೆಂಟಿಮೆಂಟ್ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
‘ಯುದ್ಧಕಾಂಡ’ ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರಕ್ಕೆ ಅಜಯ್ ರಾವ್ ಅವರು ಬಂಡವಾಳ ಹೂಡಿದ್ದಾರೆ. ಅಲ್ಲದೇ, ಮುಖ್ಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಅಜಯ್ ರಾವ್ ಕಾರು ಮಾರುವಾಗ ಅವರ ಪುತ್ರಿ ಕಣ್ಣೀರು ಹಾಕಿದ್ದ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಅಜಯ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಏಪ್ರಿಲ್ 18ರಂದು ಬಿಡುಗಡೆ ಆದ ‘ಯುದ್ಧಕಾಂಡ’ (Yuddhakaanda) ಚಿತ್ರಕ್ಕೆ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾಗೆ ಅಜಯ್ ರಾವ್ (Ajay Rao) ಅವರೇ ಬಂಡವಾಳ ಹೂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಕೂಡ ಅವರು ಅಭಿನಯಿಸಿದ್ದಾರೆ. ಸಿನಿಮಾಗಾಗಿ ಅಜಯ್ ರಾವ್ ಕಾರು ಮಾರುವಾಗ ಅವರ ಮಗಳು (Ajay Rao Daughter) ಕಣ್ಣೀರು ಹಾಕಿದ್ದ ವಿಡಿಯೋ ವೈರಲ್ ಆಗಿದೆ. ಆ ಕುರಿತು ಅಜಯ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ರೀತಿ ಪ್ರಚಾರ ನನಗೆ ಬೇಡ. ಸೆಂಟಿಮೆಂಟ್ನಿಂದ ನಮ್ಮ ಸಿನಿಮಾ ಗೆಲ್ತು ಎಂಬ ಮಾತು ಬರುವುದು ಬೇಡ. ಅದು ನನಗೆ ಬೇಡ’ ಎಂದು ಅಜಯ್ ರಾವ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos