ಯುವನಿಧಿ: ಮಾರ್ಗ ಮಧ್ಯೆ ಕೆಟ್ಟುನಿಂತ ಕೆಎಸ್​ಆರ್​ಟಿಸಿ ಬಸ್​ ತಳ್ಳಿದ ವಿದ್ಯಾರ್ಥಿಗಳು

Edited By:

Updated on: Jan 12, 2024 | 10:05 PM

ಶಿವಮೊಗ್ಗ ಯುವನಿಧಿ ಕಾರ್ಯಕ್ರಮದಿಂದ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಕೆಎಸ್​ಆರ್​ಟಿಸಿ ಬಸ್​ ಕೆಟ್ಟು ನಿಂತ್ತಿದ್ದು, ಬಸ್ ಸ್ಟಾರ್ಟ್ ಮಾಡಲು ಹಿಂಬದಿಯಿಂದ ವಿದ್ಯಾರ್ಥಿಗಳು ತಳ್ಳಿದ್ದಾರೆ. ನಗರದ ಎಆರ್ ಜಿ ಕಾಲೇಜಿನಿಂದ ಯುವ ನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ‌ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗಿದ್ದರು. 

ದಾವಣಗೆರೆ, ಜನವರಿ 12: ಶಿವಮೊಗ್ಗ ಯುವನಿಧಿ (Yuva Nidhi) ಕಾರ್ಯಕ್ರಮದಿಂದ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಕೆಎಸ್​ಆರ್​ಟಿಸಿ ಬಸ್​ ಕೆಟ್ಟು ನಿಂತ್ತಿದ್ದು, ಬಸ್ ಸ್ಟಾರ್ಟ್ ಮಾಡಲು ಹಿಂಬದಿಯಿಂದ ವಿದ್ಯಾರ್ಥಿಗಳು ತಳ್ಳಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ KA17, F 1913 ನಂಬರ್​ನ ದಾವಣಗೆರೆ ಡಿಪೋ ಬಸ್​ ಮಲೆಬೆನ್ನೂರು ಬಳಿ ಕೆಟ್ಟು ನಿಂತ್ತಿದೆ. ನಗರದ ಎಆರ್ ಜಿ ಕಾಲೇಜಿನಿಂದ ಯುವ ನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ‌ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More