‘ದುನಿಯಾ’ ನಿರ್ಮಿಸಲು ಮಾರಿದ್ದ ತಾತನ ಆಸ್ತಿಯನ್ನು ತೋರಿಸಿದ ದುನಿಯಾ ವಿಜಿ

‘ದುನಿಯಾ’ ನಿರ್ಮಿಸಲು ಮಾರಿದ್ದ ತಾತನ ಆಸ್ತಿಯನ್ನು ತೋರಿಸಿದ ದುನಿಯಾ ವಿಜಿ

ಮಂಜುನಾಥ ಸಿ.
|

Updated on: Jan 12, 2024 | 11:03 PM

Duniya Vijay: ತಮ್ಮ ಹುಟ್ಟೂರು ಕುಂಬಾರನಹಳ್ಳಿಗೆ ಭೇಟಿ ನೀಡಿದ್ದ ದುನಿಯಾ ವಿಜಯ್, ‘ದುನಿಯಾ’ ಸಿನಿಮಾ ನಿರ್ಮಿಸಲು ಅಡವಿಟ್ಟಿದ್ದ ಜಮೀನನ್ನು ತೋರಿಸಿದರು.

ದುನಿಯಾ ವಿಜಯ್​ಗೆ (Duniya Vijay) ಜೀವನ ಕೊಟ್ಟ ಸಿನಿಮಾ ‘ದುನಿಯಾ’ ಆ ಸಿನಿಮಾ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗ ದುನಿಯಾ ವಿಜಯ್ ಬಹುಭಾಷಾ ನಟ, ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು, ನಿರ್ದೇಶಕರೂ ಆಗಿದ್ದಾರೆ. ಅವರ ಹೊಸ ಸಿನಿಮಾ ‘ಭೀಮ’ ಬಿಡುಗಡೆಗೆ ರೆಡಿಯಾಗಿದೆ. ಇದರ ನಡುವೆ ವಿಜಯ್ ತಮ್ಮ ಹುಟ್ಟೂರು ಕುಂಬಾರನಹಳ್ಳಿಗೆ ಭೇಟಿ ನೀಡಿದ್ದರು. ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ತಮ್ಮ ಹಳೆಯ ಸ್ನೇಹಿತರು, ಬಂಧುಗಳನ್ನು ಮಾತನಾಡಿದರು. ತಾವು ‘ದುನಿಯಾ’ ಸಿನಿಮಾ ಮಾಡಲು ಅಡವಿಟ್ಟಿದ್ದ ಜಮೀನನ್ನು ತೋರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ