‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ

Updated on: Jul 09, 2026 | 10:37 PM

ಮುಖ್ಯಾಂಶಗಳು

  • ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯುವ ರೈತ ಚೇತನ್.
  • ‘ದೇವಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಚೇತನ್ ಮಾತು.
  • 10 ನಿರ್ದೇಶಕರಿಂದ ಮೋಸ ಆಗಿದೆ ಎಂಬ ಆರೋಪ.

ಯುವ ರೈತ ಚೇತನ್ ಅವರು ‘ದೇವಿ’ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 10 ಮಂದಿ ನಿರ್ದೇಶಕರಿಂದ ತಮಗೆ ಮೋಸ ಆಗಿದೆ ಎಂದು ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..

ಯುವ ರೈತ ಚೇತನ್ ಅವರು ‘ದೇವಿ’ (Devi) ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 10 ಮಂದಿ ನಿರ್ದೇಶಕರಿಂದ ತಮಗೆ ಮೋಸ ಆಗಿದೆ ಎಂದು ಅವರು ಹೇಳಿದ್ದಾರೆ. ‘ಒಂದೂವರೆ ವರ್ಷದ ಹಿಂದೆ ಒಬ್ಬರು ನಿರ್ದೇಶಕರು ಬಂದಿದ್ದರು. ಸಿನಿಮಾಗೆ ಹಣ ಹಾಕು ಎಂದರು, ನಾನು ನಂಬಿದೆ. ಆ ಮೇಲೆ ಆ ನಿರ್ದೇಶಕರೇ ಕಾಣಿಸಲಿಲ್ಲ. ಚಿತ್ರರಂಗ ನಮಗೆ ಸೆಟ್ ಆಗಲ್ಲ ಅಂತ ಮತ್ತೆ ಊರಿಗೆ ವಾಪಸ್ ಹೋಗಲು ನಿರ್ಧರಿಸಿದೆ. ಆ ವೇಳೆ ಇನ್ನೊಬ್ಬರು ಫೋನ್ ಮಾಡಿದರು. ನಿಮ್ಮನ್ನು ಹೀರೋ ಮಾಡುತ್ತೇನೆ ಅಂತ ಭರವಸೆ ನೀಡಿದರು. ಆ ಚಿತ್ರದ ಶೂಟಿಂಗ್ ಕೆಲವು ದಿನ ನಡೆಯಿತು. ಆ ನಿರ್ದೇಶಕನಿಗೆ ಕೆಲಸವೇ ಬರಲ್ಲ ಅಂತ ಆಗ ಗೊತ್ತಾಯಿತು. ಈ ರೀತಿ 10 ನಿರ್ದೇಶಕರು ಮೋಸ ಮಾಡಿದ ಮೇಲೆ 11ನೇ ಸಿನಿಮಾದ ಕಥೆಯನ್ನು ನಾನೇ ಬರೆದಿದ್ದೇನೆ. 20 ನಿಮಿಷದಲ್ಲಿ ಸಿದ್ಧಪಡಿಸಿದ ಕಥೆ ಇದು’ ಎಂದು ಚೇತನ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More