Sign In

By signing in or creating an account, you agree with Associated Broadcasting Company's Terms & Conditions and Privacy Policy.

43ನೇ ವಯಸ್ಸಿನಲ್ಲೂ ಅದ್ಭುತ ಫ್ಲೈಯಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಯುವರಾಜ್ ಸಿಂಗ್

43ನೇ ವಯಸ್ಸಿನಲ್ಲೂ ಅದ್ಭುತ ಫ್ಲೈಯಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಯುವರಾಜ್ ಸಿಂಗ್

ಝಾಹಿರ್ ಯೂಸುಫ್
|

Updated on: Feb 23, 2025 | 10:16 AM

ಶ್ರೀಲಂಕಾ ಮಾಸ್ಟರ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡಿಯಾ ಮಾಸ್ಟರ್ಸ್ ಪರ ಸ್ಟುವರ್ಟ್​ ಬಿನ್ನಿ 31 ಎಸೆತಗಳಲ್ಲಿ 68 ರನ್ ಬಾರಿಸಿದರು. ಇನ್ನು ಯೂಸುಫ್ ಪಠಾಣ್ 22 ಎಸೆತಗಳಲ್ಲಿ 56 ರನ್ ಚಚ್ಚಿದರು. ಈ ಮೂಲಕ ಇಂಡಿಯಾ ಮಾಸ್ಟರ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್ ಕಲೆಹಾಕಿತು.

ನವಿ ಮುಂಬೈನಲ್ಲಿ ನಡೆದ ಇಂಟರ್​ನ್ಯಾಷನಲ್ ಮಾಸ್ಟರ್ಸ್ ಲೀಗ್​ನಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದು ಯುವರಾಜ್ ಸಿಂಗ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಶ್ರೀಲಂಕಾ ಮಾಸ್ಟರ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡಿಯಾ ಮಾಸ್ಟರ್ಸ್ ಪರ ಸ್ಟುವರ್ಟ್​ ಬಿನ್ನಿ 31 ಎಸೆತಗಳಲ್ಲಿ 68 ರನ್ ಬಾರಿಸಿದರು. ಇನ್ನು ಯೂಸುಫ್ ಪಠಾಣ್ 22 ಎಸೆತಗಳಲ್ಲಿ 56 ರನ್ ಚಚ್ಚಿದರು. ಈ ಮೂಲಕ ಇಂಡಿಯಾ ಮಾಸ್ಟರ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್ ಕಲೆಹಾಕಿತು.

223 ರನ್​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಮಾಸ್ಟರ್ಸ್ ತಂಡದ ಪರ ಕುಮಾರ್ ಸಂಗಾಕ್ಕರ ಹಾಗೂ ತಿರುಮನ್ನೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ 7 ಓವರ್​ಗಳಾಗುಷ್ಟರಲ್ಲಿ ತಂಡದ ಮೊತ್ತ 70ರ ಗಡಿದಾಟಿತು. ಈ ಹಂತದಲ್ಲಿ ದಾಳಿಗಿಳಿದಿ ಇರ್ಫಾನ್ ಪಠಾಣ್ ಎಸೆತವನ್ನು ತಿರುಮನ್ನೆ ಲಾಂಗ್ ಆಫ್​ನತ್ತ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಲೈನ್​ ದಾಟಲಿದೆ ಎಂದು ಅಂದುಕೊಳ್ಳುವಷ್ಟರಲ್ಲಿ ಜಿಂಕೆಯಂತೆ ಜಿಗಿದ ಯುವರಾಜ್ ಸಿಂಗ್ ಚೆಂಡನ್ನು ಹಿಡಿದರು. ಇದೀಗ ಯುವರಾಜ್ ಸಿಂಗ್ ಅವರ ಈ ಅತ್ಯದ್ಭುತ ಕ್ಯಾಚ್ ವಿಡಿಯೋ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ನೀಡಿದ 223 ರನ್​ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಮಾಸ್ಟರ್ಸ್ 20 ಓವರ್​ಗಳಲ್ಲಿ 218 ರನ್​ ಗಳಿಸಿ 4 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.