ಎದುರಾಳಿ ಬ್ಯಾಟರ್​ಗಳನ್ನು ಮೋಡಿಗೆ ಸಿಲುಕಿಸುವ ಯುಜ್ವೇಂದ್ರ ಚಹಲ್, ಧನಶ್ರೀ ಮೋಡಿಗೆ ಸಿಲುಕಿದ್ದು ಆಶ್ಚರ್ಯವಿಲ್ಲ! ವಿಡಿಯೋ ನೋಡಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 10, 2022 | 5:47 PM

ಧನಶ್ರೀ ವೃತ್ತಿಯ ಬಗ್ಗೆ ಏನು ಹೇಳೋದು ಮಾರಾಯ್ರೇ. ಅವರು ಎರಡೆರಡು ವೃತ್ತಿಗಳಲ್ಲಿ ಪರಿಣಿತರು. ದಂತವೈದ್ಯೆಯಾಗಿರುವ ಜೊತೆ ಕೋರಿಯೋಗ್ರಾಫರ್ ಕೂಡ ಆವರಾಗಿದ್ದಾರೆ. ಅವರ ಬಳಿ ಡ್ಯಾನ್ಸ್ ಕಲಿಯಲು ಹೋಗಿಯೇ ಚಹಲ್ ಪ್ರೀತಿಗೆ ಬಿದ್ದಿದ್ದು.

ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಹಲ್ ಲವ್ ಸ್ಟೋರಿ ನಿಮಗೆ ಗೊತ್ತಿದೆ. ಇವರು ಪ್ರೇಮಪಾಶಕ್ಕೆ ಬಿದ್ದು, ಡೇಟಿಂಗ್ ನಲ್ಲಿ ಬಹಳ ಸಮಯ ಕಳೆದು, ನಂತತ ತಮ್ಮ ತಂದೆ ತಾಯಿಗಳ ಒಪ್ಪಿಗೆ ಪಡೆದು ಅವರ ಸಮ್ಮುಖದಲ್ಲಿ ಸತಿಪತಿ ಸಹ ಆದರು. ಇತ್ತೀಚಿಗೆ ಈ ದಂಪತಿ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವವನ್ನೂ ಅಚರಿಸಿಕೊಂಡರು. ಚಹಲ್ ಕ್ರಿಕೆಟ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಭಾರತದ ಪರ 56 ಒಡಿಐ ಮತ್ತು 50 ಟಿ20ಐ ಪಂದ್ಯಗಳನ್ನು ಅವರು ಆಡಿದ್ದು ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ಆರ್ ಸಿ ಬಿ ಪರ 112 ಪಂದ್ಯಗಳನ್ನು ಆಡಿದ್ದಾರೆ. 2022 ರ ಮೆಗಾ ಆಕ್ಷನ್ ಈ ವರ್ಷ ನಡೆಯಲಿದ್ದು ಬೆಂಗಳೂರು ತಂಡ ಅವರನ್ನೇನೂ ರಿಟೇನ್ ಮಾಡಿಕೊಂಡಿಲ್ಲ. ಹಾಗಾಗಿ ಅವರ ಹೆಸರು ಹರಾಜು ಪ್ರಕ್ರಿಯೆಯಲ್ಲಿ ಇರಲಿದೆ.

ಧನಶ್ರೀ ವೃತ್ತಿಯ ಬಗ್ಗೆ ಏನು ಹೇಳೋದು ಮಾರಾಯ್ರೇ. ಅವರು ಎರಡೆರಡು ವೃತ್ತಿಗಳಲ್ಲಿ ಪರಿಣಿತರು. ದಂತವೈದ್ಯೆಯಾಗಿರುವ ಜೊತೆ ಕೋರಿಯೋಗ್ರಾಫರ್ ಕೂಡ ಆವರಾಗಿದ್ದಾರೆ. ಅವರ ಬಳಿ ಡ್ಯಾನ್ಸ್ ಕಲಿಯಲು ಹೋಗಿಯೇ ಚಹಲ್ ಪ್ರೀತಿಗೆ ಬಿದ್ದಿದ್ದು. ಧನಶ್ರೀ ತಾವು ಡ್ಯಾನ್ಸ್ ಮಾಡುತ್ತಿರುವ ಮತ್ತು ಕಲಿಸುತ್ತಿರುವ ಫೋಟೋಗಳನ್ನ ಇನ್​ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಅವರ ನೃತ್ಯ ಭಂಗಿಗಳನ್ನು ನೋಡಿ ನೀವು ದಂಗಾಗುತ್ತೀರಿ.

ನೃತ್ಯ ಮಾಡುತ್ತಿರುವ 14 ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಲ್ಲಿ ಪೋಸ್ಟ್ ಮಾಡಿದ್ದಾರೆ. ಧನಶ್ರೀ ಸುಂದರಿ ಅನ್ನೋದು ಸತ್ಯ ಅದರೆ, ನೃತ್ಯಭಂಗಿಗಳಲ್ಲಿ ಇನ್ನಷ್ಟು ಸೊಗಸಾಗಿ ಕಾಣುತ್ತಾರೆ.

ಲೆಗ್ ಬ್ರೇಕ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್​ಗಳನ್ನು ತಮ್ಮ ಮೋಡಿಗೆ ಸಿಕ್ಕಿಸುವ ಚಹಲ್ ಬದುಕಿನಲ್ಲಿ ಧನಶ್ರೀ ಅವರ ಮೋಡಿಗೆ ಸಿಲುಕಿದ್ದರಲ್ಲಿ ಆಶ್ಚರ್ಯವಿಲ್ಲ.

ಇದನ್ನೂ ಓದಿ:  ‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​

Published on: Jan 10, 2022 05:46 PM