ಬ್ರಿಟನ್-ರಷ್ಯಾ ನಡುವೆ ಆಕಸ್ಮಿಕ ಯುದ್ಧ ನಡೆದರೆ ಅದು ಯಾವುದೇ ಶೀತಲ ಸಮರಕ್ಕಿಂತ ಘೋರ ಕದನವಾಗಲಿದೆ: ಜನರಲ್ ನಿಕ್ ಕಾರ್ಟರ್

ಬ್ರಿಟನ್-ರಷ್ಯಾ ನಡುವೆ ಆಕಸ್ಮಿಕ ಯುದ್ಧ ನಡೆದರೆ ಅದು ಯಾವುದೇ ಶೀತಲ ಸಮರಕ್ಕಿಂತ ಘೋರ ಕದನವಾಗಲಿದೆ: ಜನರಲ್ ನಿಕ್ ಕಾರ್ಟರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 10, 2022 | 4:48 PM

ರಷ್ಯಾದ ಸಬ್ ಮೆರೀನ್​ಗಳು ಸಮುದ್ರದಾಳದಲ್ಲಿ ಅಳವಡಿಸಲಾಗಿರುವ ಇಂಟರ್ನೆಟ್ ಕೇಬಲ್ ಗಳಿಗೆ ದಕ್ಕೆಯನ್ನುಂಟು ಮಾಡುತ್ತಿವೆ ಎಂದು ಆರೋಪಿಸಿರುವ ಬ್ರಿಟನ್ ಒಂದು ಪಕ್ಷ ಕೇಬಲ್​ಗಳು ತುಂಡಾದರೆ, ಇಡೀ ಜಗತ್ತು ಸ್ತಬ್ಧಗೊಳ್ಳುವಂಥ ಸ್ಥಿತಿ ನಿರ್ಮಾಣಗೊಳ್ಳುತ್ತದೆ. ರಷ್ಯಾ ತನ್ನ ಉದ್ಧಟತನ ನಿಲ್ಲಿಸದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಯಾವುದಾದರೂ ಎರಡು ಪ್ರಬಲ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾದರೆ (ಶೀತಲ ಸಮರ) ಅಂತರರಾಷ್ಟ್ರೀಯ ಮಾಧ್ಯಮಗಳು ಅದು ಮೂರನೇ ಮಹಾಯುದ್ದಕ್ಕೆ ನಾಂದಿಯಾಗಲಿದೆ ಎಂದು ಬಿಂಬಿಸುತ್ತವೆ. ಯಾಕೆ ಅಂತ ಮಾತ್ರ ಸಾಮಾನ್ಯ ಜನರಿಗೆ ಗೊತ್ತಾಗುತ್ತಿಲ್ಲ. ಮಹಾಯುದ್ಧ ಅಂದರೆ ಸಾಮಾನ್ಯ ಅಲ್ಲ. ಎರಡನೇ ಮಹಾಯುದ್ಧಲ್ಲಿ ಅಮೆರಿಕಾದ ಅಣುಬಾಂಬ್ ಗಳು ಮನುಕುಲದ ಮೇಲೆ ಎಂಥ ಘೋರ ಪರಿಣಾಮ ಬೀರಿದವು ಅಂತ ಎಲ್ಲ ರಾಷ್ಟ್ರಗಳಿಗೆ ಗೊತ್ತಿರುವುದರಿಂದ ಮಹಾಯುದ್ಧದ ಕಲ್ಪನೆಯನ್ನೂ ಅವು ಮಾಡಲಾರವು. ಎರಡನೇ ಮಹಾಯುದ್ಧದ ನಂತರ ಅನೇಕ ದ್ವಿಪಕ್ಷೀಯ ಯುದ್ಧಗಳು (ಕೋಲ್ಡ್ ವಾರ್) ನಡೆದಿವೆ. ಅಂಥ ಸಂದರ್ಭಗಳಲ್ಲಿ ಬೇರೆ ದೇಶಗಳು ಹೇಳಿಕೆಗಳನ್ನು ನೀಡಿ ಸುಮ್ಮನಾಗುತ್ತವೆಯೇ ಹೊರತು ಯುದ್ಧನಿರತ ರಾಷ್ಟ್ರಗಳಿಗೆ ಮಿಲಿಟರಿ ಬೆಂಬಲ ನೀಡುವ ಗೋಜಿಗೆ ಹೋಗುವುದಿಲ್ಲ. ನ್ಯೂಕ್ಲಿಯರ್ ಬಾಂಬ್​ಗಳ ಭಯ ಎಲ್ಲ ದೇಶಗಳಿಗೂ ಇದೆ.

ಬ್ರಿಟನ್ ಮತ್ತು ರಷ್ಯ ಯುರೋಪ್ ಖಂಡದ ಎರಡು ಬಲ್ಲಿಷ್ಠ ರಾಷ್ಟ್ರಗಳು ಅನ್ನೋದು ವಿವಾದಾತೀತ. ರಷ್ಯಾ ತಂಟೆಕೋರ ದೇಶವಲ್ಲ, ಅದರೆ ಅದರ ಸಬ್ ಮೆರೀನ್​ಗಳು ಸಮುದ್ರದಾಳದಲ್ಲಿ ಅಳವಡಿಸಲಾಗಿರುವ ಇಂಟರ್ನೆಟ್ ಕೇಬಲ್ ಗಳಿಗೆ ದಕ್ಕೆಯನ್ನುಂಟು ಮಾಡುತ್ತಿವೆ ಎಂದು ಆರೋಪಿಸಿರುವ ಬ್ರಿಟನ್ ಒಂದು ಪಕ್ಷ ಕೇಬಲ್ ಗಳು ತುಂಡಾದರೆ, ಇಡೀ ಜಗತ್ತು ಸ್ತಬ್ಧಗೊಳ್ಳುವಂಥ ಸ್ಥಿತಿ ನಿರ್ಮಾಣಗೊಳ್ಳುತ್ತದೆ. ರಷ್ಯಾ ತನ್ನ ಉದ್ಧಟತನ ನಿಲ್ಲಿಸದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಇತ್ತೀಚಿಗೆ ಮಾಧ್ಯಮವೊಂದರ ಜೊತೆ ಮಾತಾಡಿದ್ದ ಬ್ರಿಟನ್ ಸೇನಾ ಪಡೆ ಮುಖ್ಯಸ್ಥ ಜನರಲ್ ನಿಕ್ ಕಾರ್ಟರ್ ಅವರು ರಷ್ಯಾದ ಸಬ್​ಮೆರೀನ್​ಗಳಿಂದ ಸಮುದ್ರಾಳಗಳಲ್ಲಿ ಆಗಬಹುದಾದ ಅನಾಹುತದ ಬಗ್ಗೆ ಉಲ್ಲೇಖಿಸುತ್ತಾ, ರಷ್ಯಾ ಜೊತೆ ಬ್ರಿಟನ್ನಿನ ಅಕಸ್ಮಿಕ ಯುದ್ಧವೇನಾದರೂ ಆರಂಭಗೊಂಡರೆ, ಅದು ಪಶ್ಚಿಮದ ರಾಷ್ಟ್ರಗಳು ಮತ್ತು ರಷ್ಯಾ ನಡುವಿನ ಯುದ್ಧವಾಗಿ ಪರಿಣಮಿಸಲಿದ್ದು ಹಿಂದಿನ ಯಾವುದೇ ಶೀತಲ ಸಮರಕ್ಕಿಂತ ಭೀಕರ ಯುದ್ಧವಾಗಲಿದೆ ಎಂದು ಹೇಳಿದ್ದಾರೆ.

ಆದರೆ, ಎರಡೂ ದೇಶಗಳ ನಾಯಕರಾಗಲೀ ಅಥವಾ ಬೇರೆ ದೇಶಗಳ ನಾಯಕರಾಗಲೀ ಅಂಥ ಸ್ಥಿತಿ ಉಂಟಾಗಲು ಪ್ರಚೋದನೆ ನೀಡಬಾರದು ಅಂತಲೂ ಕಾರ್ಟರ್ ಹೇಳಿದ್ದಾರೆ. ಅದಕ್ಕೇ ನಾವು ಹೇಳಿದ್ದು ಮಹಾಯುದ್ಧದ ಬಗ್ಗೆ ಎಲ್ಲರಲ್ಲೂ ಭೀತಿ ಇದೆ.

ಇದನ್ನೂ ಓದಿ:  Viral Video: ತಂದೆ ಬರೆದ ಪತ್ರವನ್ನೇ ಮದುವೆಯ ಉಡುಪು ಮಾಡಿಕೊಂಡ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್