AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಯಾಕೆ ಬಂದಿಲ್ಲ? ಕಾರಣ ವಿವರಿಸಿದ ಮಧು ಬಂಗಾರಪ್ಪ

ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಯಾಕೆ ಬಂದಿಲ್ಲ? ಕಾರಣ ವಿವರಿಸಿದ ಮಧು ಬಂಗಾರಪ್ಪ

TV9 Web
| Updated By: ಮದನ್​ ಕುಮಾರ್​|

Updated on: Jan 10, 2022 | 3:12 PM

Share

‘ಈ ವಿಚಾರವಾಗಿ ಶಿವರಾಜ್​ಕುಮಾರ್​ ಅವರನ್ನು ನಾನು ನೇರವಾಗಿ ಭೇಟಿ ಮಾಡಿಲ್ಲ. ಅವರ ಬೆಂಬಲ ಇದ್ದೇ ಇರುತ್ತದೆ’ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಮೇಕೆದಾಟು (Mekedatu) ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್​ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಡಿ.ಕೆ. ಶಿವಕುಮಾರ್​ (DK Shivakumar) ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಕಾಂಗ್ರೆಸ್​ನ ಅನೇಕ ಮುಂಖಡರು ಪಾಲ್ಗೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಲಾಗಿದೆ. ಶಿವರಾಜ್​ಕುಮಾರ್​ (Shivarajkumar) ಅವರು ಇದರಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಜ.9ರಂದು ಮೇಕೆದಾಟು ಪಾದಯಾತ್ರೆಗೆ (Mekedatu Padayatra) ಚಾಲನೆ ಸಿಕ್ಕಿತು. ಅದಕ್ಕೆ ಶಿವಣ್ಣ ಯಾಕೆ ಬಂದಿಲ್ಲ ಎಂಬುದನ್ನು ಮಧು ಬಂಗಾರಪ್ಪ (Madhu Bangarappa) ಅವರು ವಿವರಿಸಿದ್ದಾರೆ. ‘ನಿನ್ನೆ ಶಿವಣ್ಣ ಅವರಿಗೆ ಬೇರೆ ವಿಚಾರಗಳು ಇದ್ದಿದ್ದರಿಂದ ಅವರು ಕನಕಪುರದವರೆಗೆ ಬಂದು ವಾಪಸ್​ ಹೋಗಿದ್ದಾರೆ. ಅವರು ಅವರದ್ದೇ ಆದಂತಹ ಯೋಜನೆಯಲ್ಲಿ ಇರುತ್ತಾರೆ. ಅವರ ಕೈಯಲ್ಲೇ ಉದ್ಘಾಟನೆ ಮಾಡಿಸಬೇಕು ಎಂಬ ಉದ್ದೇಶ ಇತ್ತು. ಕೊವಿಡ್​ ಮುಂತಾದ ಕಾರಣದಿಂದ ಅವರಿಗೆ ಬರಲು ಸಾಧ್ಯವಾಗಿಲ್ಲ. ಚಿತ್ರರಂಗದ ಬೆಂಬಲ ನಮಗೆ ಇದೆ. ಶಿವಣ್ಣ ಅವರನ್ನು ನಾನು ನೇರವಾಗಿ ಈ ವಿಚಾರದ ಬಗ್ಗೆ ಭೇಟಿ ಮಾಡಿಲ್ಲ. ಅವರ ಬೆಂಬಲ ಇದ್ದೇ ಇರುತ್ತದೆ’ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಇದನ್ನೂ ಓದಿ:

‘ಕಾಂಗ್ರೆಸ್​ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು

ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್​ಕುಮಾರ್ ಭಾಗಿಯಾಗುತ್ತಾರೆ: ಉಮಾಶ್ರೀ, ಮಧು ಬಂಗಾರಪ್ಪ ವಿಶ್ವಾಸ