Karnataka Assembly Polls: ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಜಮೀರ್ ಅಹ್ಮದ್ ಮತ್ತು ಭೈರತಿ ಸುರೇಶ್ ಭಾಗಿ!

|

Updated on: Apr 10, 2023 | 7:13 PM

ಹೊರಡುವ ಮೊದಲು ಜಮೀರ್ ಅಹ್ಮದ್ ಯಾರದ್ದೋ ಜೊತೆ ಮಾತಾಡುತ್ತಾ ಚಾಮರಾಜಪೇಟೆಯಲ್ಲಿ ನಡೆಸಿದ ಸಮೀಕ್ಷೆ ಏನು ಹೇಳುತ್ತದೆ ಅಂತ ಕೇಳುತ್ತಾರೆ. ಆ ವ್ಯಕ್ತಿ ಎಲ್ಲ ನಿಮ್ಮ ಪರವಾಗಿದೆ ಅಂತ ಹೇಳಿದಾಗ ಜಮೀರ್ ಖುಷಿಯಿಂದ ಬೀಗುತ್ತಾರೆ.

New Delhi: ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಒಂದು ಉನ್ನತಮಟ್ಟದ ಸಭೆ ನಡಯುತ್ತಿದೆ. ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ (Randeep Singh Surjewala) ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಮುಕುಲ್ ವಾಸ್ನಿಕ್, ಕೆಸಿ ವೇಣುಗೋಪಾಲ್, ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅದೇ ಸಭೆಯಲ್ಲಿ ಪಾಲ್ಗೊಳ್ಳಲು ಜಮೀರ್ ಅಹ್ಮದ್  (Zameer Ahmed) ಮತ್ತು ಭೈರತಿ ಸುರೇಶ್ (Byrathi Suresh) ಕೂಡ ಕ್ಯಾಬೊಂದರಲ್ಲಿ ತೆರಳುತ್ತಿರುವುದನ್ನು ಇಲ್ಲಿ ನೋಡಬಹುದು. ಹೊರಡುವ ಮೊದಲು ಜಮೀರ್ ಅಹ್ಮದ್ ಯಾರದ್ದೋ ಜೊತೆ ಮಾತಾಡುತ್ತಾ ಚಾಮರಾಜಪೇಟೆಯಲ್ಲಿ ನಡೆಸಿದ ಸಮೀಕ್ಷೆ ಏನು ಹೇಳುತ್ತದೆ ಅಂತ ಕೇಳುತ್ತಾರೆ. ಆ ವ್ಯಕ್ತಿ ಎಲ್ಲ ನಿಮ್ಮ ಪರವಾಗಿದೆ ಅಂತ ಹೇಳಿದಾಗ ಜಮೀರ್ ಖುಷಿಯಿಂದ ಬೀಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ