ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ

Updated on: Apr 03, 2026 | 8:43 AM

ಜೀ ಕನ್ನಡದ ‘ಸರಿಗಮಪ’ ಶೋ ಬಗ್ಗೆ ಅಪಸ್ವರ ತೆಗೆದವರು ಹಲವು ಮಂದಿ. ಅವರೆಲ್ಲರೂ ಈಗ ಬಾಯಿ ಮುಚ್ಚಿಕೊಳ್ಳುವಂತಹ ಪ್ರೋಮೋ ಸಿದ್ಧವಾಗಿದೆ. ರಾಜೇಶ್ ಕೃಷ್ಣನ್ ಅವರು ಈ ಪ್ರೋಮೋದಲ್ಲಿದ್ದಾರೆ. ಅವರ ಹೊಸ ಪ್ರೋಮೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಆ ವಿಡಿಯೋ ನಿಮಗಾಗಿ. 

ಜೀ ಕನ್ನಡದಲ್ಲಿ ‘ಸರಿಗಮಪ ಲಿಟ್ಲ್​ ಚಾಂಪ್ಸ್’ ಪ್ರಸಾರ ಕಾಣುವುದರಲ್ಲಿ ಇದೆ. ಈ ಶೋನಲ್ಲಿ ಟ್ಯಾಲೆಂಟ್​​ಗಿಂತ ಹೆಚ್ಚಾಗಿ ಕಷ್ಟದಲ್ಲಿರುವವರಿಗೆ ಅವಕಾಶ ಕೊಟ್ಟು ಟಿಆರ್​ಪಿ ಪಡೆದುಕೊಳ್ಳಲಾಗುತ್ತದೆ ಎಂಬ ಆರೋಪ ಇದೆ.  ಇದಕ್ಕೆ ತಿರುಗೇಟು ಕೊಡಲು ಪ್ರೋಮೋ ಒಂದನ್ನು ಮಾಡಲಾಗಿದೆ. ಈ ಪ್ರೋಮೋದಲ್ಲಿ ಎಲ್ಲರಿಗೂ ಖಡಕ್ ಆಗಿ ಉತ್ತರಿಸಲಾಗಿದೆ. ಜನರ ಕಲ್ಪನೆ ಮತ್ತು ರಿಯಾಲಿಟಿ ವಿವರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More