AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 50 ರನ್​​ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ್

ಕೇವಲ 50 ರನ್​​ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ್

ಝಾಹಿರ್ ಯೂಸುಫ್
|

Updated on:Oct 21, 2025 | 7:26 AM

Share

Zimbabwe vs Afghanistan Test: ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡ 77 ರನ್ ಗೆ ಒಂದು ವಿಕೆಟ್ ಮಾತ್ರ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ಆ ಬಳಿಕ 50 ರನ್ ಪೇರಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿದ್ದೇ ಅಚ್ಚರಿ. ರಹಮಾನುಲ್ಲಾ ಗುರ್ಬಾಝ್ (37) ವಿಕೆಟ್ ಪತನದೊಂದಿಗೆ ಪೆವಿಲಿಯನ್ ಪರೇಡ್ ಆರಂಭಿಸಿದ ಅಫ್ಘಾನಿಸ್ತಾನ್ 127 ರನ್ ಗಳಿಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿದರು.

ಹರಾರೆಯಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಫ್ಘಾನಿಸ್ತಾನ್ ತಂಡ ದಿಢೀರ್‌ ಕುಸಿತಕ್ಕೊಳಗಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡ 77 ರನ್ ಗೆ ಒಂದು ವಿಕೆಟ್ ಮಾತ್ರ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು.

ಆದರೆ ಆ ಬಳಿಕ 50 ರನ್ ಪೇರಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿದ್ದೇ ಅಚ್ಚರಿ. ರಹಮಾನುಲ್ಲಾ ಗುರ್ಬಾಝ್ (37) ವಿಕೆಟ್ ಪತನದೊಂದಿಗೆ ಪೆವಿಲಿಯನ್ ಪರೇಡ್ ಆರಂಭಿಸಿದ ಅಫ್ಘಾನಿಸ್ತಾನ್ 127 ರನ್ ಗಳಿಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿದರು.

ಝಿಂಬಾಬ್ವೆ ಪರ ಉತ್ತಮ ದಾಳಿ ಸಂಘಟಿಸಿದ ಬ್ರಾಡ್ ಇವನ್ಸ್ 9.3 ಓವರ್‌ಗಳಲ್ಲಿ 22 ರನ್ ನೀಡಿ 5 ವಿಕೆಟ್ ಪಡೆದರೆ, ಬ್ಲೆಸ್ಸಿಂಗ್ ಮುಝರಬಾನಿ 11 ಓವರ್‌ಗಳಲ್ಲಿ 47 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿರುವ ಝಿಂಬಾಬ್ವೆ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿದೆ. ಈ ಮೂಲಕ ಪ್ರಥಮ ಇನಿಂಗ್ಸ್​ನಲ್ಲಿ 3 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ದ್ವಿತೀಯ ದಿನದಾಟದಲ್ಲಿ ಬೆನ್ ಕರನ್ (52) ಹಾಗೂ ಬ್ರೆಂಡನ್ ಟೇಲರ್ (18) ಇನಿಂಗ್ಸ್ ಮುಂದುವರೆಸಲಿದ್ದು, ಝಿಂಬಾಬ್ವೆ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಿದೆ.

Published on: Oct 21, 2025 07:24 AM