ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ; 100 ಜನ ಸಾವು, 400 ಮಂದಿಗೆ ಗಾಯ
ದಕ್ಷಿಣದಲ್ಲಿ ಇಸ್ರೇಲಿ ದಾಳಿಯಿಂದ 100 ಜನ ಮೃತಪಟ್ಟಿದ್ದಾರೆ ಮತ್ತು 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದು ಸುಮಾರು 1 ವರ್ಷದ ಗಡಿಯಾಚೆಗಿನ ಘರ್ಷಣೆಯಲ್ಲಿನ ಅತ್ಯಂತ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ.
ಲೆಬನಾನ್: ಇಸ್ರೇಲಿ ದಾಳಿಯಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆ, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ. ಇಂದು ಬೆಳಿಗ್ಗೆಯಿಂದ ದಕ್ಷಿಣದ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಶತ್ರುಗಳ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ 100 ಮಂದಿ ಸಾವನ್ನಪ್ಪಿದ್ದು 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
“ನಾವು ಲೆಬನಾನ್‌ನಲ್ಲಿ ನಮ್ಮ ದಾಳಿಯನ್ನು ತೀವ್ರಗೊಳಿಸುತ್ತಿದ್ದೇವೆ. ಉತ್ತರದ ನಿವಾಸಿಗಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸುವ ನಮ್ಮ ಗುರಿಯನ್ನು ಸಾಧಿಸುವವರೆಗೆ ಕ್ರಮಗಳು ಮುಂದುವರಿಯುತ್ತವೆ” ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಇಂದು ತಮ್ಮ ಕಚೇರಿ ಪ್ರಕಟಿಸಿದ ವೀಡಿಯೊದಲ್ಲಿ ತಿಳಿಸಿದ್ದಾರೆ. ಲೆಬನಾನ್‌ನ ದಕ್ಷಿಣ, ಪೂರ್ವ ಬೆಕಾ ಕಣಿವೆ ಮತ್ತು ಸಿರಿಯಾ ಬಳಿಯ ಉತ್ತರ ಪ್ರದೇಶದಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾವನ್ನು ಇಸ್ರೇಲಿ ಮಿಲಿಟರಿ ಗುರಿಯಾಗಿಸಿದ ನಂತರ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಹಿಜ್ಬುಲ್ಲಾ ಮುಖ್ಯಸ್ಥರ ಭಾಷಣದ ವೇಳೆ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್
ಇಂದು ಇಸ್ರೇಲ್‌ನ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಮತ್ತು ವೈದ್ಯರು ಸೇರಿದಂತೆ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
The Chief of the General Staff approves strikes on Hezbollah targets in Lebanon from the IDF Headquarters Underground Operations Center. So far, more than 300 Hezbollah targets have been struck today. pic.twitter.com/hbNKWJ8QAs
— Israel Defense Forces (@IDF) September 23, 2024
ಬೈರುತ್‌ನ ದಕ್ಷಿಣ ಉಪನಗರದಲ್ಲಿ ಶುಕ್ರವಾರ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯು ಹಿರಿಯ ಹಿಜ್ಬುಲ್ಲಾ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು 45 ಜನರನ್ನು ಕೊಂದಿದೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಹಿರಿಯ ನಾಯಕ ಇಬ್ರಾಹಿಂ ಅಖಿಲ್ ಮತ್ತು ಇನ್ನೊಬ್ಬ ಕಮಾಂಡರ್ ಅಹ್ಮದ್ ವಹ್ಬಿ ಸೇರಿದಂತೆ ಗುಂಪಿನ 16 ಸದಸ್ಯರು ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ