ದೂರದ ಕೆನಡಾ ದೇಶದ ಆಂಟೆರಿಯೋ ಪ್ರಾಂತ್ಯದಲ್ಲಿ 2018ರಲ್ಲಿ ದೊರೆತಿದ್ದ ಒಂದು ವಜ್ರ ಇದೀಗ ಹರಾಜಿಗೆ ಬಂದಿದೆ. ಸರಿಸುಮಾರು 271 ಕ್ಯಾರಟ್ನ ಗಡುಸಾದ ವಜ್ರವನ್ನು ಕಡೆದು 102 ಕ್ಯಾರಟ್ನ ಹರಳಾಗಿ ಪರಿವರ್ತಿಸಲಾಗಿದೆ. ಈ ವಜ್ರವು ಒಂದು ಮೊಟ್ಟೆಯ ಗಾತ್ರದಷ್ಟು ಇದೆ.
ಈ ವಜ್ರವನ್ನು ವಿಶ್ವದ ಪ್ರತಿಷ್ಠಿತ ಹರಾಜು ಸಂಸ್ಥೆಗಳಲ್ಲಿ ಒಂದಾದ ಸೋಥೆಬೀಸ್ನಲ್ಲಿ ಮುಂದಿನ ತಿಂಗಳು ಹರಾಜು ಮಾಡಲಾಗುವುದು ಎಂದು ತಿಳಿದುಬಂದಿದೆ. ಅಂದ ಹಾಗೆ, ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರದ ಹರಳು ಏನಿಲ್ಲಾ ಅಂದ್ರೂ 220 ಕೋಟಿ ರೂಪಾಯಿಗೆ ಮಾರಾಟವಾಗುವ ಸಂಭವವಿದೆ.
For the first time in auction history, Sotheby’s will offer ‘without reserve’ a highly important 102.39-carat D Colour Flawless Oval Diamond in a stand-alone, single lot live auction (5 Oct | HK). Bidding open online from 15 Sep. Make it yours: https://t.co/dXxZ5vCKzQ pic.twitter.com/chB0QfFpYb
— Sotheby's (@Sothebys) September 10, 2020