ನವದೆಹಲಿ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಬ್ಯಾಂಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸರು ಇಬ್ಬರು ಗನ್ಮ್ಯಾನ್ಗಳನ್ನು ಶೂಟ್ ಮಾಡಿ ಕೊಂದಿದ್ದಾರೆ. ಈ ಶೂಟೌಟ್ನಲ್ಲಿ 6 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಸಂಭಾವ್ಯ ಸ್ಫೋಟಕ ಸಾಧನವನ್ನು ಪತ್ತೆಹಚ್ಚಿದ ನಂತರ ಹತ್ತಿರದ ಮನೆಗಳಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮಂಗಳವಾರ ಸುಮಾರು 11 ಗಂಟೆಗೆ ಕೆನಡಾದ ವಾಷಿಂಗ್ಟನ್‌ನ ಗಡಿಯ ಸಮೀಪ ಇರುವ ವ್ಯಾಂಕೋವರ್ ದ್ವೀಪದಲ್ಲಿರುವ ಸಾನಿಚ್‌ನಲ್ಲಿರುವ ಬ್ಯಾಂಕ್ ಆಫ್ ಮಾಂಟ್ರಿಯಲ್‌ಗೆ ಆಗಮಿಸಿದರು. ಶಂಕಿತರಿಗೆ ಸಂಬಂಧಿಸಿದ ವಾಹನದಲ್ಲಿ ಸಂಭಾವ್ಯ ಸ್ಫೋಟಕ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಆ ಸ್ಥಳದ ಸಮೀಪದಲ್ಲಿರುವ ಮನೆಗಳು ಮತ್ತು ಅಂಗಡಿಗಳನ್ನು ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: ವಾಷಿಂಗ್ಟನ್ ಡಿಸಿಯಲ್ಲಿ ಶೂಟೌಟ್; 15 ವರ್ಷದ ಯುವಕ ಸಾವು, ಪೊಲೀಸ್ ಸೇರಿ ಮೂವರಿಗೆ ಗಾಯ
ಬಳಿಕ, ಬ್ಯಾಂಕ್ನೊಳಗೆ ಬಾಂಬ್ ಇಡಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಬ್ಯಾಂಕ್ನೊಳಗೆ ನುಗ್ಗಿದ ಪೊಲೀಸರು ಅಲ್ಲಿದ್ದ ಗನ್ಮ್ಯಾನ್ಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಆ ಗನ್ಮ್ಯಾನ್ಗಳು ಶಸ್ತ್ರಸಜ್ಜಿತರಾಗಿದ್ದರು ಮತ್ತು ರಕ್ಷಾಕವಚವನ್ನು ಧರಿಸಿದ್ದರು ಎಂದು ಸಾನಿಚ್ ಪೊಲೀಸ್ ಮುಖ್ಯಸ್ಥ ಡೀನ್ ಡುಥಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದರೆ, ಅವರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಆರು ಪೊಲೀಸ್ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರಿಗೆ ಆಪರೇಷನ್ ಮಾಡಲಾಗಿದೆ.