ಕೊಲಂಬಿಯಾದಲ್ಲಿ ಭೀಕರ ಅಪಘಾತ: 20 ಜನ ಸಾವು, 15 ಜನರಿಗೆ ಗಂಭೀರ ಗಾಯ

| Updated By: ಆಯೇಷಾ ಬಾನು

Updated on: Oct 16, 2022 | 8:49 AM

ಬಸ್ ಪಲ್ಟಿಯಾದ ಪರಿಣಾಮ ಸುಮಾರು 20 ಜನರು ಮೃತಪಟ್ಟಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲಂಬಿಯಾದಲ್ಲಿ ಭೀಕರ ಅಪಘಾತ: 20 ಜನ ಸಾವು, 15 ಜನರಿಗೆ ಗಂಭೀರ ಗಾಯ
ಸಾಂಧರ್ಬಿಕ ಚಿತ್ರ
Follow us on

ಬೊಗೋಟ: ನೈಋತ್ಯ ಕೊಲಂಬಿಯಾದ ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಬಸ್ ಪಲ್ಟಿಯಾದ ಪರಿಣಾಮ ಸುಮಾರು 20 ಜನರು ಮೃತಪಟ್ಟಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಋತ್ಯ ಕೊಲಂಬಿಯಾದ ಪಾಸ್ಟೊ ಮತ್ತು ಪೊಪಯಾನ್ ನಗರಗಳಲ್ಲಿ ಅಪಘಾತ ಸಂಭವಿಸಿದೆ. ಕೊಲಂಬಿಯಾದ ನೈಋತ್ಯ ಮೂಲೆಯಲ್ಲಿರುವ ಟುಮಾಕೊದ ಬಂದರು ನಗರ ಮತ್ತು ಈಶಾನ್ಯಕ್ಕೆ 320 ಕಿಲೋಮೀಟರ್ (200 ಮೈಲುಗಳು) ನಲ್ಲಿರುವ ಕ್ಯಾಲಿ ನಡುವೆ ಬಸ್ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಡೈಲಿ ಸಬಾ ವರದಿ ಮಾಡಿದೆ.

ದುರದೃಷ್ಟವಶಾತ್, ಘಟನೆಯಲ್ಲಿ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ. 15 ಜನರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ತನಿಖೆ ಮಾಡಲಾಗುತ್ತಿದ್ದು ತಾಂತ್ರಿಕ ವೈಫಲ್ಯವೇ ಅಪಘಾತಕ್ಕೆ ಕಾರಣ ಇರಬಹುದು ಎಂದು ಟ್ರಾಫಿಕ್ ಪೊಲೀಸ್ ಅಗುಡೆಲೊ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Sri Lanka vs Namibia T20 World Cup 2022: ಐಸಿಸಿ ಟಿ20 ವಿಶ್ವಕಪ್​ಗೆ ಇಂದು ಚಾಲನೆ: ಶ್ರೀಲಂಕಾ- ನಮೀಬಿಯಾ ಪಂದ್ಯ ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರಪ್ರಸಾರ?

ರಸ್ತೆ ಮಂಜಿನಿಂದ ಕೂಡಿದ್ದು ಚಾಲಕ ಮಂಜಿನ ಪ್ರದೇಶದಿಂದ ಹೊರಬಂದ ನಂತರ ನಿಯಂತ್ರಣ ತಪ್ಪಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ರಕ್ಷಣಾ ಕಾರ್ಯಕರ್ತರು ಒಂಬತ್ತು ಗಂಟೆಗಳ ಕಾಲ ರಕ್ಷಣಾ ಕಾರ್ಯಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:49 am, Sun, 16 October 22