Sri Lanka vs Namibia T20 World Cup 2022: ಐಸಿಸಿ ಟಿ20 ವಿಶ್ವಕಪ್ಗೆ ಇಂದು ಚಾಲನೆ: ಶ್ರೀಲಂಕಾ- ನಮೀಬಿಯಾ ಪಂದ್ಯ ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರಪ್ರಸಾರ?
T20 World Cup 2022: ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ದಸುನ್ ಶನಕಾ (Dasun Shanaka) ನಾಯಕತ್ವದ ಶ್ರೀಲಂಕಾ ಹಾಗೂ ಗೆರ್ಹಾರ್ಡ್ ಎರಾಸ್ಮಸ್ ನೇತೃತ್ವದ ನಮೀಬಿಯಾ ತಂಡ (Sri Lanka vs Namibia) ಮುಖಾಮುಖಿ ಆಗಲಿದೆ.
ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಮಹಾ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ದಸುನ್ ಶನಕಾ (Dasun Shanaka) ನಾಯಕತ್ವದ ಶ್ರೀಲಂಕಾ ಹಾಗೂ ಗೆರ್ಹಾರ್ಡ್ ಎರಾಸ್ಮಸ್ ನೇತೃತ್ವದ ನಮೀಬಿಯಾ ತಂಡ (Sri Lanka vs Namibia) ಮುಖಾಮುಖಿ ಆಗಲಿದೆ. ಗೀಲಾಂಗ್ನ ಸೈಮಂಡ್ಸ್ ಸ್ಟೇಡಿಯಂ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಅರ್ಹತಾ ಸುತ್ತಿನಲ್ಲಿ ಒಟ್ಟು ಎರಡು ಗುಂಪುಗಳಿವೆ. ಎ ಗುಂಪಿನಲ್ಲಿರುವ ನಮೀಬಿಯಾ, ನೆದರ್ಲೆಂಡ್ಸ್, ಶ್ರೀಲಂಕಾ, ಯುಎಇ ತಂಡಗಳು ಮತ್ತು ಬಿ ಗುಂಪಿನಲ್ಲಿರುವ ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಸೆಣಸಾಡಿ, ಇದರಲ್ಲಿ ಅಗ್ರ ನಾಲ್ಕು ತಂಡಗಳು ಸೂಪರ್ 12 ಪ್ರವೇಶಿಸಲಿವೆ. ಪ್ರತಿ ತಂಡ ಗುಂಪಿನಲ್ಲಿರುವ ಉಳಿದ ಮೂರು ತಂಡಗಳ ವಿರುದ್ಧ ಒಂದು ಪಂದ್ಯ ಆಡಲಿವೆ. ಕೊನೆಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೂಪರ್-12 ನಲ್ಲಿ ಆಡಲಿದ್ದಾರೆ.
ನಮೀಬಿಯಾಕ್ಕೆ ಹೋಲಿಸಿದರೆ ಶ್ರೀಲಂಕಾ ತಂಡವೇ ಬಲಿಷ್ಠವಾಗಿದೆ. ಈ ಬಾರಿಯ ಪುರುಷರ ಏಷ್ಯಾಕಪ್ನ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಪಥುಮ್ ನಿಸ್ಸಂಕಾ, ಕುಸಲ್ ಮೆಂಡಿಸ್, ದಸುನ್ ಶನಕಾ, ಧನಂಜಯ್ ಡಿ ಸಿಲ್ವ, ಭನುಕಾ ರಾಜಪಕ್ಸ ಸ್ಟಾರ್ ಬ್ಯಾಟರ್ಗಳಾಗಿದ್ದಾರೆ. ವನಿಂದು ಹಸರಂಗ, ಚರಿತಾ ಅಲಸಂಕ, ಮಹೀಶಾ ತೀಕ್ಷಣ, ದುಶ್ಮಂತಾ ಚಮೀರಾ ಸ್ಟಾರ್ ಬೌಲರ್ಗಳಿದ್ದಾರೆ. ಇತ್ತ ನಮೀಬಿಯಾ ತಂಡದಲ್ಲಿ ಕೂಡ ಜಾನ್ ಫ್ರಿಲಿಂಕ್, ಡೇವಿಡ್ ವೈಸ್, ರೂಬೆನ್ ಟ್ರಂಪೆಲ್ಮನ್, ಝೇನ್ ಗ್ರೀನ್ ಮತ್ತು ಬರ್ನಾರ್ಡ್ ಸ್ಕೋಲ್ಟ್ಜ್ ಅವರಂತಹ ಅನುಭವಿ ಆಟಗಾರರನ್ನು ಹೊಂದಿದೆ.
ಪಂದ್ಯದ ಬಗ್ಗೆ ಮಾಹಿತಿ:
ಶ್ರೀಲಂಕಾ ಮತ್ತು ನಮೀಬಿಯಾ ನಡುವಿನ ಅರ್ಹತಾ ಸುತ್ತಿನ ಪಂದ್ಯ ಎಷ್ಟು ಗಂಟೆಗೆ ಆರಂಭ?
ಶ್ರೀಲಂಕಾ ಮತ್ತು ನಮೀಬಿಯಾ ನಡುವಿನ ಪಂದ್ಯ ನಾಳೆ ಭಾರತೀಯ ಕಾಳಮಾನದ ಪ್ರಕಾರ ಬೆಳಗ್ಗೆ 9:30ಕ್ಕೆ ಶುರುವಾಗಲಿದೆ. 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಶ್ರೀಲಂಕಾ ಮತ್ತು ನಮೀಬಿಯಾ ಪಂದ್ಯ ಎಲ್ಲಿ ನಡೆಯುತ್ತದೆ?
ಶ್ರೀಲಂಕಾ ಮತ್ತು ನಮೀಬಿಯಾ ನಡುವಿನ ಪಂದ್ಯ ಗೀಲಾಂಗ್ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ಶ್ರೀಲಂಕಾ ಮತ್ತು ನಮೀಬಿಯಾ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?
ಶ್ರೀಲಂಕಾ ಮತ್ತು ನಮೀಬಿಯಾ ಪಂದ್ಯದ ಲೈವ್ ಸ್ಟ್ರೀಮಿಂಗ್ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿರುತ್ತದೆ. ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಲೈವ್ಸ್ಟ್ರೀಮ್ ವೀಕ್ಷಿಸಬಹುದು.
ಪಿಚ್-ಹವಾಮಾನ ವರದಿ:
ಗೀಲಾಂಗ್ನಲ್ಲಿ ಮಧ್ಯಾಹ್ನದ ತಾಪಮಾನವು ಸುಮಾರು 16 ಡಿಗ್ರಿಗಳಷ್ಟಿರುತ್ತದೆ ಮತ್ತು ಮಳೆ ಪಂದ್ಯಕ್ಕೆ ಅಡ್ಡಿಯುಂಟು ಮಾಡುವ ಅಪಾಯವಿದೆ. ಸೈಮಂಡ್ಸ್ ಅಂಗಳದಲ್ಲಿ ಈವರೆಗೆ ಕೇವಲ ಒಂದು ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆದಿದೆಯಷ್ಟೆ. ಈ ಪಂದ್ಯದಲ್ಲಿ 174 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ. ಈ ಪಿಚ್ ಬ್ಯಾಟರ್ ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ರನ್ ಮಳೆ ಹರಿಯುವ ನಿರೀಕ್ಷಿಯಿದೆ. ಅಲ್ಲದೆ ಶ್ರೀಲಂಕಾ ತಂಡ ಬಲಿಷ್ಠವಾಗಿದ್ದು, ಸುಲಭವಾಗಿ ಗೆಲುವು ಸಾಧಿಸಲು ನೋಡುತ್ತದೆ.
ಉಭಯ ತಂಡಗಳು:
ಶ್ರೀಲಂಕಾ: ಪಥುಮ್ ನಿಸ್ಸಾಂಕಾ, ಕುಸಾಲ್ ಮೆಂಡಿಸ್, ಧನಂಜಯ್ ಡಿ ಸಿಲ್ವ, ದನುಷ್ಕ ಗುಣತಿಲಕ, ಭನುಕಾ ರಾಜಪಕ್ಸ, ದಸುನ್ ಶನಕಾ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ದುಷ್ಮಂತ ಚಮೀರ, ಜೆಫನ್ ವಂದರ್, ಲಾಹಿರು ಕುಮಾರ, ಚರಿತ್ ಅಸಲಂಕ.
ನಮೀಬಿಯಾ: ಸ್ಟೀಫನ್ ಬಾರ್ಡ್, ಡೇವಿಡ್ ವೈಸ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ನಿಕೋಲ್ ಲಾಫ್ಟಿ-ಈಟನ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಝೇನ್ ಗ್ರೀನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್, ತಂಗೇನಿ ಲುಂಗಮೆನಿ, ಬೆನ್ ಶಿಕೊಂಗೊ, ಮೈಕೆಲ್ ವ್ಯಾನ್ ಲಿಂಗೆನ್, ಲೋಹಾಂಡ್ರೆ ಲೌರೆನ್ಸ್, ಕಾರ್ಲ್ ಬಿರ್ಕೆನ್‌ಸ್ಟಾಕ್, ದಿವಾನ್ ಲಾ ಕಾಕ್.
Published On - 8:04 am, Sun, 16 October 22