AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sourav Ganguly: CAB ಅಧ್ಯಕ್ಷ ಸ್ಥಾನದತ್ತ ಮುಖ ಮಾಡಿದ ಸೌರವ್ ಗಂಗೂಲಿ

Sourav Ganguly: ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಮೊದಲು ಗಂಗೂಲಿ ಅವರು ಸಿಎಬಿ ಮುಖ್ಯಸ್ಥರಾಗಿದ್ದರು. ಅವರ ನಿರ್ಗಮನದ ನಂತರ, ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅಭಿಷೇಕ್ ದಾಲ್ಮಿಯಾ CAB ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Sourav Ganguly: CAB ಅಧ್ಯಕ್ಷ ಸ್ಥಾನದತ್ತ ಮುಖ ಮಾಡಿದ ಸೌರವ್ ಗಂಗೂಲಿ
sourav ganguly
TV9 Web
| Updated By: ಝಾಹಿರ್ ಯೂಸುಫ್|

Updated on: Oct 15, 2022 | 10:50 PM

Share

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕೆಲ ದಿನಗಳ ಹಿಂದೆ ಬಿಸಿಸಿಐ ಸಭೆಯಲ್ಲಿ ಗಂಗೂಲಿ ಬದಲಿಗೆ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ (Roger Binny) ಅವರ ಹೆಸರನ್ನು ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲಾಗಿದೆ. ಅದರಂತೆ ಅಕ್ಟೋಬರ್ 18 ರಂದು ನೂತನ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ. ಇತ್ತ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಗಂಗೂಲಿ ಮತ್ತೆ ಬಂಗಾಳ ಕ್ರಿಕೆಟ್ ಸಂಸ್ಥೆಯ (CAB) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.

ಪಿಟಿಐ ವರದಿ ಪ್ರಕಾರ, ಸೌರವ್ ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಅಧ್ಯಕ್ಷ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ನಾನು 5 ವರ್ಷಗಳ ಕಾಲ ಬಂಗಾಳದ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿದ್ದೆ. ಹಾಗೆಯೇ 3 ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿದ್ದೆ. ಇದೀಗ ನನ್ನ ಅಧಿಕಾರವಧಿ ಮುಗಿದಿದೆ. ಎಲ್ಲೂ ಕೂಡ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಆಟಗಾರ ಮತ್ತು ನಿರ್ವಾಹಕರ ಪಾತ್ರವನ್ನು ನಿಭಾಯಿಸಿರುವುದು ನನಗೆ ಅದ್ಭುತ ಅನುಭವವಾಗಿದೆ ಎಂದು ಗಂಗೂಲಿ ತಿಳಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಮೊದಲು ಗಂಗೂಲಿ ಅವರು ಸಿಎಬಿ ಮುಖ್ಯಸ್ಥರಾಗಿದ್ದರು. ಅವರ ನಿರ್ಗಮನದ ನಂತರ, ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅಭಿಷೇಕ್ ದಾಲ್ಮಿಯಾ CAB ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಸ್ತುತ ಬೆಂಗಾಲ್ ಕ್ರಿಕೆಟ್ ಮುಖ್ಯಸ್ಥ ಹುದ್ದೆಯಲ್ಲಿರುವ ಅಭಿಷೇಕ್ ದಾಲ್ಮಿಯಾ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಗಂಗೂಲಿ ಈ ಹುದ್ದೆಗೆ ಸ್ಪರ್ಧಿಸಲಿದ್ದಾರೆ. ಈ ತಿಂಗಳಾಂತ್ಯದಲ್ಲಿ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Image
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Image
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

2ನೇ ಬಾರಿ ಸಿಎಬಿ ಅಧ್ಯಕ್ಷ:

ಭಾರತದ ಮಾಜಿ ನಾಯಕ ಗಂಗೂಲಿ ಈಗಾಗಲೇ ಬಂಗಾಳ ಕ್ರಿಕೆಟ್‌ನ ಜವಾಬ್ದಾರಿಯನ್ನು ವಹಿಸಿಕೊಂಡ ಅನುಭವ ಹೊಂದಿದ್ದಾರೆ. ಜಗಮೋಹನ್ ದಾಲ್ಮಿಯಾ ಅವರ ನಿಧನದ ನಂತರ 2015 ರಲ್ಲಿ ಗಂಗೂಲಿ ಬಂಗಾಳ ಕ್ರಿಕೆಟ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 2019 ರಲ್ಲಿ, ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಮಾಡಿದಾಗ, ಅವರು ಈ ಹುದ್ದೆಯನ್ನು ತೊರೆದಿದ್ದರು. ಇದೀಗ ಮತ್ತೆ ಬಂಗಾಳ ಕ್ರಿಕೆಟ್ ಅಸೋಷಿಯೇಷನ್​ನ ಅಧ್ಯಕ್ಷರಾಗಲು ಸೌರವ್ ಗಂಗೂಲಿ ಬಯಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.