AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Evin prison fire ಇರಾನ್‌ನ ಎವಿನ್ ಜೈಲಿನಲ್ಲಿ ಅಗ್ನಿ ದುರಂತ; ನಾಲ್ವರು ಕೈದಿಗಳು ಸಜೀವ ದಹನ, 61 ಕೈದಿಗಳಿಗೆ ಗಾಯ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಟೆಹ್ರಾನ್‌ನ ಸೈಟ್‌ನಲ್ಲಿ ಬೆಂಕಿ ಮತ್ತು ಹೊಗೆ ಕಾಣುತ್ತಿದ್ದು ಗುಂಡು ಮತ್ತು ಸ್ಫೋಟದ ಸದ್ದು ಕೇಳುತ್ತಿದೆ

Evin prison fire ಇರಾನ್‌ನ ಎವಿನ್ ಜೈಲಿನಲ್ಲಿ ಅಗ್ನಿ ದುರಂತ; ನಾಲ್ವರು ಕೈದಿಗಳು ಸಜೀವ ದಹನ, 61 ಕೈದಿಗಳಿಗೆ ಗಾಯ
ಎವಿನ್ ಜೈಲಿನಲ್ಲಿ ಅಗ್ನಿ ದುರಂತImage Credit source: Twitter
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Oct 16, 2022 | 9:35 PM

Share

ಇರಾನ್‌ನ (Iran) ಕುಖ್ಯಾತ ಎವಿನ್ ಜೈಲಿನಲ್ಲಿ (Evin prison) ಸಂಭವಿಸಿದ ಅಗ್ನಿ ದುರಂತದಲ್ಲಿ (Fire) ನಾಲ್ವರು ಕೈದಿಗಳು ಸಾವಿಗೀಡಾಗಿದ್ದು 61 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ. ಜೈಲಿನೊಳಗಿನ ಮೂಲಗಳ ಪ್ರಕಾರ ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬಿಬಿಸಿ ವರದಿ ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಟೆಹ್ರಾನ್‌ನ ಸೈಟ್‌ನಲ್ಲಿ ಬೆಂಕಿ ಮತ್ತು ಹೊಗೆ ಕಾಣುತ್ತಿದ್ದು ಗುಂಡು ಮತ್ತು ಸ್ಫೋಟದ ಸದ್ದು ಕೇಳುತ್ತಿದೆ. ವಾರಗಳಿಂದ ಇರಾನ್ ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಇರಾನ್‌ನ ಮಿಜಾನ್ ಸುದ್ದಿ ಸಂಸ್ಥೆ ತಿಳಿಸಿದೆ.

ಕಾರಾಗೃಹದಲ್ಲಿನ ಪರಿಸ್ಥಿತಿಯು ಇತ್ತೀಚಿನ ಪ್ರತಿಭಟನೆಗೆ ಸಂಬಂಧ ಹೊಂದಿದೆಯೇ ಎಂಬುದು ಇನ್ನೂ ತಿಳಿದಿಲ್ಲ ಎಂದು ಬಿಬಿಸಿ ಪರ್ಷಿಯನ್ ಹೇಳಿದೆ.  ಆದರೆ ಇದಾಗುವ ಸಾಧ್ಯತೆ ಇದೆ, ನೂರಾರು ಪ್ರತಿಭಟನಾಕಾರರನ್ನು ಎವಿನ್‌ಗೆ ಕಳುಹಿಸಲಾಗಿದೆ ಎಂದು ಬಿಬಿಸಿ ಪರ್ಷಿಯನ್ ವರದಿಗಾರ  ರಾಣಾ  ರಹಿಂಪೋರ್ ಹೇಳಿದ್ದಾರೆ

ಕಳೆದ ತಿಂಗಳು 22 ವರ್ಷದ ಕುರ್ದಿಶ್ ಇರಾನಿನ ಮಹ್ಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ನಂತರ ಆ ಪ್ರತಿಭಟನೆಗಳು ಆರಂಭವಾದವು. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಆಕೆಯ ಕುಟುಂಬವು  ಆಕೆಗೆ ನೈತಿಕ ಪೊಲೀಸರು ಥಳಿಸಿದ್ದಾರೆ ಎಂದು ಹೇಳಿದರು.

ಎವಿನ್ ಜೈಲಿನಲ್ಲಿನ ಘಟನೆಗಳು ನಡೆಯುತ್ತಿರುವ ಪ್ರತಿಭಟನೆಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ರಾಜ್ಯ ಮಾಧ್ಯಮವು ಹೇಳಿದೆ. ಜೈಲಿನ ಒಳಗಿನಿಂದ ಮಾತನಾಡಿದ ಟೆಹ್ರಾನ್‌ನ ಗವರ್ನರ್, ಸಣ್ಣ ಅಪರಾಧಿಗಳನ್ನು ಹೊಂದಿರುವ ಜೈಲಿನ ವಿಭಾಗದಲ್ಲಿ ಗಲಭೆ ನಡೆದಿದೆ ಎಂದು ರಾಜ್ಯ ಟಿವಿಗೆ ತಿಳಿಸಿದರು.

ಜೈಲಿನ ಹೊಲಿಗೆ ಕಾರ್ಯಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಾಗ ಗಾಯಗೊಂಡವರಿಗೆ ಉಸಿರಾಟದ ತೊಂದರೆ ಉಂಟಾಗಿದೆ ಎಂದು ಇರಾನ್‌ನ ಮಿಜಾನ್ ನ್ಯೂಸ್ ಹೇಳಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪತ್ರಕರ್ತರು ಅಧಿಕಾರಿಗಳು “ಉದ್ದೇಶಪೂರ್ವಕವಾಗಿ ಜೈಲಿಗೆ ಬೆಂಕಿ ಹಚ್ಚಿದ್ದಾರೆ” ಎಂದು ಆರೋಪಿಸಿದ್ದಾರೆ. ಇರಾನ್‌ನ ದಿವಂಗತ ಮಾಜಿ ಅಧ್ಯಕ್ಷ ಅಕ್ಬರ್ ಹಶೆಮಿ ರಫ್ಸಂಜಾನಿ ಅವರ ಪುತ್ರ ಮೆಹದಿ ಹಶೆಮಿ ರಫ್ಸಂಜಾನಿ ಅವರಿಗೆ  ತಾತ್ಕಾಲಿಕ ಬಿಡುಗಡೆ” ನೀಡಿದ ನಂತರ ಈ ದುರಂತ ನಡೆದಿದೆ.

Published On - 7:18 pm, Sun, 16 October 22