ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ನಲ್ಲಿ ಸೇರಿದ್ದಾರೆ 20 ಸಾವಿರ ವಿದೇಶಿ ಸ್ವಯಂ ಸೇವಕರು; ಭಾರತದವರೂ ಇದ್ದಾರೆ !

| Updated By: Lakshmi Hegde

Updated on: Mar 09, 2022 | 12:50 PM

ತಾವು ಇಂಟರ್​ನ್ಯಾಷನಲ್​ ಬ್ರಿಗೇಡ್​ ರಚನೆ ಮಾಡುತ್ತಿದ್ದೇವೆ. ಉಕ್ರೇನ್​ ಪರ ಹೋರಾಟ ಮಾಡಲು ಇಚ್ಛೆ ಇರುವ, ಪೂರ್ವ ಯುರೋಪ್​​ನ ಇತರ ದೇಶಗಳ ನಾಗರಿಕರು, ಸೈನಿಕರು ಈ ಬ್ರಿಗೇಡ್​ ಸೇರ್ಪಡೆಯಾಗಬಹುದು ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದರು.

ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ನಲ್ಲಿ ಸೇರಿದ್ದಾರೆ 20 ಸಾವಿರ ವಿದೇಶಿ ಸ್ವಯಂ ಸೇವಕರು; ಭಾರತದವರೂ ಇದ್ದಾರೆ !
ಪ್ರಾತಿನಿಧಿಕ ಚಿತ್ರ
Follow us on

ರಷ್ಯಾ (Russia) ವಿರುದ್ಧ ಹೋರಾಟದಲ್ಲಿ ಉಕ್ರೇನ್​ ಸೇನೆಯಷ್ಟೇ ಅಲ್ಲ, ಅಲ್ಲಿನ ನಾಗರಿಕರೂ ಕೈಜೋಡಿಸಿದ್ದಾರೆ. ಇವರೊಂದಿಗೆ ಸುಮಾರು 52 ಇತರ ದೇಶಗಳ 20 ಸಾವಿರ ಸೈನಿಕರು ಕೈಜೋಡಿಸಿದ್ದಾರೆ. ಅಂದರೆ ಇವರೆಲ್ಲ ಉಕ್ರೇನ್​​ನಲ್ಲಿ ನೆಲದಲ್ಲಿ ನಿಂತು ರಷ್ಯಾ ಸೈನಿಕರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಉಕ್ರೇನ್​ನ ಪ್ರಮುಖ ಇಂಗ್ಲಿಷ್​ ಪತ್ರಿಕೆಯಾದ ಕೀವ್​ ಇಂಡಿಪೆಂಡೆಂಟ್​ ವರದಿ ಮಾಡಿದೆ. ಅಷ್ಟೇ ಅಲ್ಲ, ಇವರೆಲ್ಲ ಉಕ್ರೇನ್​ ಪೌರತ್ವ ಪಡೆಯಲು ಇಚ್ಛಿಸಿದ್ದೇ ಆದರೆ, ಅರ್ಜಿ ಸಲ್ಲಿಸಬಹುದು ಎಂದು ಅಲ್ಲಿನ ಸರ್ಕಾರ ಹೇಳಿದ್ದಾಗಿಯೂ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.

ಟ್ವಿಟರ್​ ಅಕೌಂಟ್​ನಲ್ಲಿ ಕೂಡ ಪೋಸ್ಟ್ ಮಾಡಿರುವ ಕೀವ್ ಇಂಡಿಪೆಂಡೆಂಟ್​ ಪತ್ರಿಕೆ, ಈಗಾಗಲೇ ಹಲವು ವಿದೇಶಿಯರು ಉಕ್ರೇನ್​​ನಲ್ಲಿದ್ದು, ಅವರೀಗ ರಷ್ಯಾ ದಾಳಿಯ ವಿರುದ್ಧ ಹೋರಾಟಕ್ಕೆ ಕೈಗೆ ಬಂದೂಕು ಎತ್ತಿಕೊಂಡಿದ್ದಾರೆ. ಅವರು ಬಯಸಿದರೆ ಉಕ್ರೇನ್​ ಪೌರತ್ವವನ್ನೂ ನೀಡಲಾಗುವುದು ಎಂದು ಆಂತರಿಕ ವ್ಯವಹಾರಗಳ ಸಚಿವಾಲಯದ ಕಿರಿಯ ಸಚಿವ ಯೆವ್ಹೆನ್​ ಯೆನಿನ್​ ಹೇಳಿದ್ದಾರೆ. ಈಗಾಗಲೇ ಸುಮಾರು 20 ಸಾವಿರ ವಿದೇಶಿಯರು ಉಕ್ರೇನ್​ ಸೈನ್ಯ ಸೇರಿಕೊಂಡಿದ್ದಾರೆ ಎಂದು ಹೇಳಿದೆ.

ಫೆಬ್ರವರಿ 24ರಿಂದ ರಷ್ಯಾ ಉಕ್ರೇನ್​ ಮೇಲೆ ದಂಡೆತ್ತಿ ಹೋಗಿದೆ. ಅದಾಗಿ ಮೂರನೇ ದಿನಕ್ಕೆ ಅಂದರೆ ಫೆ.27ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶವನ್ನುದ್ದೇಶಿಸಿ ಮಾತನಾಡಿ, ತಾವು ಇಂಟರ್​ನ್ಯಾಷನಲ್​ ಬ್ರಿಗೇಡ್​ ರಚನೆ ಮಾಡುತ್ತಿದ್ದೇವೆ. ಉಕ್ರೇನ್​ ಪರ ಹೋರಾಟ ಮಾಡಲು ಇಚ್ಛೆ ಇರುವ, ಪೂರ್ವ ಯುರೋಪ್​​ನ ಇತರ ದೇಶಗಳ ನಾಗರಿಕರು, ಸೈನಿಕರು ಈ ಬ್ರಿಗೇಡ್​ ಸೇರ್ಪಡೆಯಾಗಬಹುದು. ಹೀಗೆ ಸ್ವಯಂಸೇವಕರಾಗಿ ಬರಲು ಇಚ್ಛಿಸುವವರು ತಮ್ಮ ದೇಶದಲ್ಲಿರುವ ಉಕ್ರೇನ್​ ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಾಯಿಸಿ, ಇಲ್ಲಿಗೆ ಬರಬಹುದು ಎಂದು ಹೇಳಿದ್ದರು. ಈ ಕರೆಗೆ ವಿದೇಶಗಳ ಅನೇಕರ ಸ್ವಯಂಸೇವಕರು ಉಕ್ರೇನ್​ಗೆ ತಲುಪಿದ್ದಾರೆ. ಭಾರತದ ಕೆಲವರೂ ಕೂಡ ಉಕ್ರೇನ್​​ನಲ್ಲಿದ್ದು ರಷ್ಯಾ ವಿರುದ್ಧ ಯುದ್ಧದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ರಷ್ಯಾ ವಿರುದ್ಧದ ಉಕ್ರೇನ್ ಹೋರಾಟ ಬೆಂಬಲಿಸಿ ಶಸ್ತ್ರ ಹಿಡಿಯಲು ಸಿದ್ಧರಾದ ಕೆಲ ಭಾರತೀಯರು