Russia- Ukraine Crisis: ರಷ್ಯಾ-ಉಕ್ರೇನ್ ಸಂಘರ್ಷದಿಂದ ಭಾರತದ ಹಿಂಡಾಲ್ಕೊ, ವೇದಾಂತ, ನ್ಯಾಲ್ಕೊಗೆ ಹೇಗೆ ಲಾಭ?

ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ಲೋಹ ಕಂಪೆನಿಗಳಿಗೆ ಅನುಕೂಲ ಆಗುತ್ತಿದ್ದು, ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Russia- Ukraine Crisis: ರಷ್ಯಾ-ಉಕ್ರೇನ್ ಸಂಘರ್ಷದಿಂದ ಭಾರತದ ಹಿಂಡಾಲ್ಕೊ, ವೇದಾಂತ, ನ್ಯಾಲ್ಕೊಗೆ ಹೇಗೆ ಲಾಭ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 09, 2022 | 12:27 PM

ರಷ್ಯಾ ದೇಶವು ಉಕ್ರೇನ್​ ಮೇಲೆ ಸೇನಾ ದಾಳಿ (Russia- Ukraine Crisis) ಆರಂಭಿಸಿದ ಮೇಲೆ ಭಾರತದ ವಸ್ತುಗಳ ರಫ್ತಿನ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದ್ದು, ದೇಶದ ಲೋಹ ಕಂಪೆನಿಗಳು ಲಾಭ ಮಾಡುವುದಕ್ಕೆ ಆರಂಭಿಸಿವೆ. ಜಾಗತಿಕವಾಗಿ ಅಗತ್ಯ ಇರುವ ವಸ್ತುಗಳ ಪೈಕಿ ಶೇ 10ರಷ್ಟನ್ನು ರಷ್ಯಾ ರಫ್ತು ಮಾಡುತ್ತದೆ. ಅದರಲ್ಲಿ ಅಲ್ಯೂಮಿನಿಯಂ ಹಾಗೂ ಉಕ್ಕು ಸಹ ಸೇರಿವೆ. 2021ನೇ ಇಸವಿಯಲ್ಲಿ ರಷ್ಯಾ 3.9 ಮೆಟ್ರಿಕ್ ಟನ್ ಅಲ್ಯೂಮಿನಿಯಂ (ವಿಶ್ವದ ಪೂರೈಕೆಯ ಶೇ 6ರಷ್ಟು) ಉತ್ಪಾದಿಸಿದ್ದರೆ, ರಷ್ಯಾ ಮತ್ತು ಉಕ್ರೇನ್ ಎರಡೂ ಸೇರಿ ಜಾಗತಿಕ ಉಕ್ಕು ಉತ್ಪಾದನೆಯ ಶೇ 10ರಷ್ಟು ಉತ್ಪಾದಿಸಿವೆ ಎಂದು ಸ್ಟೀಲ್ ಮಿಂಟ್ ತಿಳಿಸಿದೆ. ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ ಬಳಸುವಂಥ ಪ್ರಾಥಮಿಕ ಲೋಹ ಅಲ್ಯೂಮಿನಿಯಂ ದರಗಳು ಕಳೆದ ಕೆಲವು ವಾರಗಳಿಂದ ದಾಖಲೆಯ ಮಟ್ಟವನ್ನು ತಲುಪಿಕೊಂಡಿದೆ. ಉಕ್ರೇನ್​ನಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಪರಿಣಾಮ ಇದು.

ಜಾಗತಿಕ ಅಲ್ಯೂಮಿನಿಯಂ ಮಾರುಕಟ್ಟೆ ಈಗಾಗಲೇ ಕೊರತೆ ಎದುರಿಸುತ್ತಿದೆ. ಹೆಚ್ಚಿನ ಇಂಧನ ಬೆಲೆಯ ಕಾರಣಕ್ಕೆ ಯುರೋಪ್​ನಲ್ಲಿ ಉತ್ಪಾದನೆ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಇದರ ಜತೆಗೆ ಚೀನಾದಿಂದ ಪೂರೈಕೆ ಮಾಡಿಕೊಳ್ಳುವುದಕ್ಕೆ ನಿರ್ಬಂಧ ಹಾಕಿರುವ ಪರಿಣಾಮವೂ ಇದೆ. ಅಮೆರಿಕ ಮತ್ತು ಅದರ ಮಿತ್ರ ದೇಶಗಳು ರಷ್ಯಾದ ಮೇಲೆ ಹೇರಿರುವ ನಿರ್ಬಂಧದ ಕಾರಣಕ್ಕೆ ಪೂರೈಕೆಯಲ್ಲಿ ಇನ್ನಷ್ಟು ವ್ಯತ್ಯಯ ಆದಲ್ಲಿ ಅಲ್ಯೂಮಿನಿಯಂ ಬೆಲೆ ಇನ್ನಷ್ಟು ಮೇಲೇರಬಹುದು. ಈ ನಿರ್ಬಂಧಗಳು ವೆಚ್ಚ ಹೆಚ್ಚಳಕ್ಕೂ ಕಾರಣ ಆಗಬಹುದು. ಪರ್ಯಾಯ ಮೂಲಗಳು ಅಗತ್ಯ ಬಿದ್ದಿರುವುದು, ಹೊಸ ಮೂಲ ಸೃಷ್ಟಿಸುವಲ್ಲಿನ ವಿಳಂಬ ಮತ್ತು ಪಾವತಿಯ ಮೂಲಗಳು, ಇವೆಲ್ಲದರ ಪರಿಣಾಮವಾಗಿ ತಡವಾದ ರವಾನೆ ನಿರ್ಬಂಧದ ಪರಿಣಾಮವೇ ಆಗಿದೆ ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯೂರಿಟೀಸ್ ತನ್ನ ವರದಿಯಲ್ಲಿ ತಿಳಿಸಿದೆ.

ವರದಿಯ ಪ್ರಕಾರ, ಹೆಚ್ಚಿನ ಎಲ್​ಎಂಇ ಬೆಲೆಗಳು ಭಾರತೀಯ ಅಲ್ಯೂಮಿನಿಯಂ ಉತ್ಪಾದಕರಾದ ನ್ಯಾಷನಲ್ ಅಲ್ಯೂಮಿನಿಯಂನಂಥದ್ದಕ್ಕೆ ಅನುಕೂಲ ಒದಗಿಸುತ್ತದೆ. ಮೋತಿಲಾಲ್ ಓಸ್ವಾಲ್​ನಿಂದ FY23 ಇಬಿಐಟಿಡಿಎ ಅಂದಾಜನ್ನು ನ್ಯಾಲ್ಕೋಗೆ ಶೇ 29, ವೇದಾಂತ ಲಿ. ಶೇ 13 ಮತ್ತು ಹಿಂಡಾಲ್ಕೋ ಇಂಡಸ್ಟ್ರೀಸ್​ ಲಿ.ಗೆ ಶೇ 9ರಷ್ಟು ಹೆಚ್ಚಿಸಲಾಗಿದೆ. ಸ್ಟೀಲ್‌ಮಿಂಟ್‌ನ ವರದಿಯ ಪ್ರಕಾರ, ಭೌಗೋಳಿಕ-ರಾಜಕೀಯ ಉದ್ವಿಗ್ನತೆ ದೇಶೀಯ ಉಕ್ಕು ಉದ್ಯಮಕ್ಕೆ ಸಹಾಯ ಮಾಡಬಹುದು. ಯುರೋಪಿಯನ್ ಒಕ್ಕೂಟ, ಟರ್ಕಿ ಮತ್ತು ಮೆಕ್ಸಿಕೋಗೆ ರಷ್ಯಾದಿಂದ ರಫ್ತು ಆಗುತ್ತಿತ್ತು. ಇದೀಗ ಉಕ್ಕು ಮತ್ತು ಸಂಬಂಧಿತ ಕಚ್ಚಾ ವಸ್ತುಗಳಲ್ಲಿ ಪೂರೈಕೆ ವ್ಯತ್ಯಯ ಮತ್ತು ರವಾನೆ ವಿಳಂಬ ಎದುರಿಸಬೇಕಾಗುತ್ತದೆ ಎಂದು ವರದಿ ಹೇಳಿದೆ.

ಒಂದು ವೇಳೆ ಯುರೋಪಿಯನ್ ಒಕ್ಕೂಟದ ದೇಶಗಳು ಅನಿಲ ಪೂರೈಕೆಯಲ್ಲಿ ಕೊರತೆಯಾದಲ್ಲಿ ಮತ್ತು ರಷ್ಯನ್ ಆಮದಿನ ವೆಚ್ಚದಲ್ಲಿ ಹೆಚ್ಚಳವಾದಲ್ಲಿ ಭಾರತೀಯ ಉಕ್ಕಿನ ಮಿಲ್​ಗಳಿಗೆ ಅನುಕೂಲ ಆಗುತ್ತದೆ. ಪರ್ಯಾಯ ಮೂಲಗಳನ್ನು ಎದುರು ನೋಡುತ್ತಿವೆ. ಟರ್ಕಿಯ ದೇಶೀ ಬೇಡಿಕೆಯನ್ನು ಪೂರೈಸುವ ಸಲುವಾಗಿ ಭಾರತದಿಂದ ಪೂರೈಕೆ ಮಾಡಿಕೊಳ್ಳುವುದು ಹೆಚ್ಚಿಸಬಹುದು ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.

ವಿಶ್ವದ ಮೂರನೇ ಅತಿ ದೊಡ್ಡ ಕಲ್ಲಿದ್ದಲು ರಫ್ತು ಮಾಡುವ ದೇಶ ರಷ್ಯಾ. ಲೋಹಗಳ ಉತ್ಪಾದನೆಯಲ್ಲಿ ಕಲ್ಲಿದ್ದಲು ಪ್ರಮುಖ ಕಚ್ಚಾ ವಸ್ತು. ಬುಧವಾರದಂದು ಆಸ್ಟ್ರೇಲಿಯಾದ ನ್ಯೂಕ್ಯಾಸಲ್ ಸೂಚ್ಯಂಕಲ್ಲಿ ಕಲ್ಲಿದ್ದಲಿನ ಪ್ರತಿ ಟನ್​ಗೆ 446 ಯುಎಸ್​ಡಿ ತಲುಪಿತು. ರಷ್ಯನ್ ಕಲ್ಲಿದ್ದಲು ಚೀನಾ ಬಹಳ ಪ್ರಮುಖವಾದದ್ದು. ಯಾವಾಗ ವ್ಯಾಪಾರದ ತಿಕ್ಕಾಟದ ಮಧ್ಯೆ ಆಸ್ಟ್ರೇಲಿಯಾದಿಂದ ಆಮದು ನಿರ್ಬಂಧ ಹಾಕಿತೋ ಆಗಿನಿಂದ ಈ ಬೆಳವಣಿಗೆ ಆಗಿದೆ. ಕೋಲ್ ಇಂಡಿಯಾ ಕಂಪೆನಿ ಷೇರುಗಳು ಹಾಗತಿಕ ದರದ ಬೆಲೆಯನ್ನು ಅನುಸರಿಸಿ ಉತ್ತಮ ಏರಿಕೆ ಕಂಡಿದ್ದು, ಈಚೆಗೆ ಉತ್ತಮ ಏರಿಕೆ ಕಂಡಿದೆ.

ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾ, ಉಕ್ರೇನ್ ಎರಡೂ ಬೇಕು: ಯಾರನ್ನು ದೂರ ತಳ್ಳಲು ಆಗದ ಸ್ಥಿತಿಯಲ್ಲಿ ಭಾರತ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ