ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಸುಂಟರಗಾಳಿ, ಭೀಕರ ಚಂಡಮಾರುತಕ್ಕೆ 23 ಜನರು ಬಲಿ

|

Updated on: Mar 25, 2023 | 9:05 PM

ಪಶ್ಚಿಮ ಮಿಸಿಸಿಪ್ಪಿಯ 200 ಜನರಿರುವ ಪಟ್ಟಣವಾದ ಸಿಲ್ವರ್ ಸಿಟಿಯಲ್ಲಿ ಚಂಡಮಾರುತ ಅಪ್ಪಳಿಸಿದ ನಂತರ ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸಿದ್ದು ನಾಲ್ಕು ಜನರು ಕಾಣೆಯಾಗಿದ್ದಾರೆ

ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಸುಂಟರಗಾಳಿ, ಭೀಕರ ಚಂಡಮಾರುತಕ್ಕೆ 23 ಜನರು ಬಲಿ
ಸುಂಟರಗಾಳಿ
Image Credit source: @ReedTimmerAccu
Follow us on

ಶುಕ್ರವಾರ ತಡರಾತ್ರಿ ಅಮೆರಿಕದ ಮಿಸ್ಸಿಸ್ಸಿಪ್ಪಿಯಾದ್ಯಂತ (Mississippi) ಸುಂಟರಗಾಳಿ (tornado), ಚಂಡಮಾರುತದಿಂದಾಗಿ ಕನಿಷ್ಠ 23 ಜನರು ಸಾವಿಗೀಡಾಗಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಸುಂಟರಗಾಳಿ 100 ಮೈಲುಗಳಿಗಿಂತ ಹೆಚ್ಚು (160 ಕಿಮೀ) ಪ್ರದೇಶದಲ್ಲಿ ಹಾನಿಯುಂಟು ಮಾಡಿದೆ ಎಂದು ರಾಜ್ಯದ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಪಶ್ಚಿಮ ಮಿಸಿಸಿಪ್ಪಿಯ 200 ಜನರಿರುವ ಪಟ್ಟಣವಾದ ಸಿಲ್ವರ್ ಸಿಟಿಯಲ್ಲಿ ಚಂಡಮಾರುತ ಅಪ್ಪಳಿಸಿದ ನಂತರ ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸಿದ್ದು ನಾಲ್ಕು ಜನರು ಕಾಣೆಯಾಗಿದ್ದಾರೆ ಎಂದು ಮಿಸ್ಸಿಸ್ಸಿಪ್ಪಿ ತುರ್ತು ನಿರ್ವಹಣಾ ಸಂಸ್ಥೆ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ.ಸುಂಟರಗಾಳಿಯ ಹೊಡೆತವನ್ನು ಕಂಡ 1,700 ಜನರಿರುವ ಪಟ್ಟಣವಾದ ರೋಲಿಂಗ್ ಫೋರ್ಕ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ನಾನು ಈ ರೀತಿಯ ಏನನ್ನೂ ನೋಡಿಲ್ಲ ಎಂದು ಬ್ರಾಂಡಿ ಶೋವಾ ಎಂಬವರು ಹೇಳಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ. ಇದು ಚಂದದ ಸಣ್ಣ ಪಟ್ಟಣವಾಗಿತ್ತು ಈಗ ಅದು ಇಲ್ಲವಾಗಿದೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಹವಾಮಾನ ಸೇವೆಗೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಕನಿಷ್ಠ 24 ಸುಂಟರಗಾಳಿಗಳ ವರದಿಗಳನ್ನು ನೀಡಲಾಗಿದೆ. ಮಿಸ್ಸಿಸ್ಸಿಪ್ಪಿಯ ಪಶ್ಚಿಮದ ಅಂಚಿನಿಂದ ಉತ್ತರದ ರಾಜ್ಯದ ಮಧ್ಯಭಾಗದ ಮೂಲಕ ಮತ್ತು ಅಲಬಾಮಾದವರೆಗೆ ಇದು ವ್ಯಾಪಿಸಲಿದೆ ಎಂದು ವರದಿ ಹೇಳಿತ್ತು.


ಸುದ್ದಿ ಮಾಧ್ಯಮಗಳು ಪ್ರಕಟಿಸಿದ ಫೋಟೊಗಳನ್ನು ನೋಡಿದರೆ ಕಟ್ಟಡಗಳು ಸಂಪೂರ್ಣವಾಗಿ ನೆಲಸಮಾಗಿರುವುದು ಕಾಣಬಹುದು..
ಎಂಎಸ್ ಡೆಲ್ಟಾದಲ್ಲಿರುವ ಅನೇಕರಿಗೆ ಇಂದು ರಾತ್ರಿ ನಿಮ್ಮ ಪ್ರಾರ್ಥನೆ ಮತ್ತು ದೇವರ ರಕ್ಷಣೆ ಬೇಕು” ಎಂದು ಗವರ್ನರ್ ಟೇಟ್ ರೀವ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನಾವು ವೈದ್ಯಕೀಯ ಬೆಂಬಲವನ್ನು ಸಕ್ರಿಯಗೊಳಿಸಿದ್ದೇವೆ. ಹೆಚ್ಚಿನ ಆಂಬ್ಯುಲೆನ್ಸ್‌ಗಳು ಮತ್ತು ಇತರ ತುರ್ತು ಸಹಾಯ ಹುಡುಕಾಟ ಮತ್ತು ರಕ್ಷಣಾ ಕಾರ್ಯ ಸಕ್ರಿಯವಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Sat, 25 March 23