ಜಗತ್ತಿನ ಅತಿ ದೊಡ್ಡ ಜೀವಿ ತಿಮಿಂಗಿಲ. ಇದು ಸಮುದ್ರದಲ್ಲೇ ಇದ್ದು, ಜನರ ಕಣ್ಣಿಗೆ ಅಷ್ಟಾಗಿ ಬೀಳುವುದಿಲ್ಲ. ಆದರೆ ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪದ ಸಮುದ್ರ ದಂಡೆಯಲ್ಲಿ ಬಂದು ಬಿದ್ದಿದ್ದ ಸುಮಾರು 270 ತಿಮಿಂಗಿಲಗಳನ್ನು ಸಾಗರ ಜೈವಿಕ ತಜ್ಞರು ರಕ್ಷಿಸಲು ಹರಸಾಹಸ ಪಟ್ಟಿರುವ ರೋಚಕ ಪ್ರಕರಣ ನಡೆದಿದೆ.
ಆ 270 ತಿಮಿಂಗಿಲಗಳ ಪೈಕಿ ಪೈಲಟ್ ತಿಮಿಂಗಿಲಗಳು ಎಂದು ಕರೆಯಲ್ಪಡುವ 25 ತಿಮಿಂಗಿಲಗಳು ಮೃತಪಟ್ಟಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟು 90 ತಿಮಿಂಗಿಲಗಳು ಸತ್ತಿವೆ. ಪೈಲಟ್ ತಿಮಿಂಗಿಲಗಳು ಡಾಲ್ಫಿನ್ ಪ್ರಭೇದಕ್ಕೆ ಸೇರಿವೆ. ಅದು 7 ಮೀಟರ್ (23 ಅಡಿ) ಉದ್ದ ಮತ್ತು 3 ಟನ್ ತೂಕ ಹೊಂದಿರುತ್ತವೆ.
ರಾಜ್ಯ ರಾಜಧಾನಿ ಹೊಬಾರ್ಟ್‌ನ ವಾಯವ್ಯ ದಿಕ್ಕಿನಲ್ಲಿ ಸುಮಾರು 200 ಕಿ.ಮೀ (120 ಮೈಲಿ) ದೂರದಲ್ಲಿರುವ ಮ್ಯಾಕ್ವಾರಿ ಹೆಡ್ಸ್‌ನಲ್ಲಿ ತಿಮಿಂಗಿಲಗಳು ಮೂರು ಗುಂಪುಗಳಲ್ಲಿ ಆಳವಿಲ್ಲದ ನೀರಿನಲ್ಲಿ ಸಿಲುಕಿಕೊಂಡಿವೆ ಎಂದು ತಾಸ್ಮೇನಿಯಾದ ಪ್ರಾಥಮಿಕ ಕೈಗಾರಿಕೆ, ಉದ್ಯಾನಗಳು, ನೀರು ಮತ್ತು ಪರಿಸರ ಇಲಾಖೆ ತಿಳಿಸಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ತಿಮಿಂಗಿಲಗಳನ್ನು ರಕ್ಷಿಸುವ ಕಾರ್ಯದಲ್ಲಿ ಭಾಗಿಯಾಗಿತ್ತು. ಆದರೆ ಈ ಕಾರ್ಯಾಚರಣೆ ಭಾರಿ ರೋಚಕವಾಗಿದೆ. ಇನ್ನು ಸಾಮಾನ್ಯವಾಗಿ ಡಾಲ್ಫಿನ್ ಮತ್ತು ವೇಲ್ಗಳು ತಾಸ್ಮೇನಿಯಾ ದಡದಲ್ಲಿ ಪ್ರತಿ 2-3ವಾರಗಳಿಗೊಮ್ಮೆ ಬಂದು ಬೀಳುತ್ತವೆ ಎಂದು ತಿಳಿದುಬಂದಿದೆ.