Top News: ಟ್ರಂಪ್ ಸೋಲಿಸಲು 3 ರಾಷ್ಟ್ರಗಳು ಪ್ಲ್ಯಾನ್!

| Updated By: ಸಾಧು ಶ್ರೀನಾಥ್​

Updated on: Aug 11, 2020 | 2:56 PM

ಕೊರೊನಾದಿಂದ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಚುನಾವಣಾ ಕಾವು ಜೋರಾಗಿದೆ. ಸೆಪ್ಟೆಂಬರ್​ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಈ ಎಲೆಕ್ಷನ್​ನಲ್ಲಿ ಮೂರು ಶತ್ರು ರಾಷ್ಟ್ರಗಳು ಹವಣಿಸುತ್ತಿವೆ ಅಂತಾ ಅಮೆರಿಕ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಡೆಮೊಕ್ರೆಟಿಕ್ ಅಭ್ಯರ್ಥಿ ಜೋ ಬಿಡನ್​ ರನ್ನು ಈಗಾಗಲೇ ಸಂಪರ್ಕಿಸಿದ್ದು, ಆನ್​ಲೈನ್ ಮೂಲಕ ತಪ್ಪು ಮಾಹಿತಿ ಹರಡಿ ಚುನಾವಣೆ ಬಗ್ಗೆ ಗೊಂದಲ ಮೂಡಿಸುತ್ತಿವೆ ಅಂತಾ ಹೇಳಿದ್ದಾರೆ. 3 ಗಂಟೆಗೊಬ್ಬ ಮಹಿಳೆ ಸಾವು! ಕೊರೊನಾ ಸೋಂಕಿನಿಂದ ನಲುಗಿರುವ ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಆಘಾತಕಾರಿ ವಿಚಾರ ಬಯಲಾಗಿದೆ. ಸೌತ್ ಆಫ್ರಿಕಾದಲ್ಲಿ […]

Top News: ಟ್ರಂಪ್ ಸೋಲಿಸಲು 3 ರಾಷ್ಟ್ರಗಳು ಪ್ಲ್ಯಾನ್!
ಡೊನಾಲ್ಡ್​ ಟ್ರಂಪ್ (ಸಂಗ್ರಹ ಚಿತ್ರ)
Follow us on

ಕೊರೊನಾದಿಂದ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಚುನಾವಣಾ ಕಾವು ಜೋರಾಗಿದೆ. ಸೆಪ್ಟೆಂಬರ್​ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಈ ಎಲೆಕ್ಷನ್​ನಲ್ಲಿ ಮೂರು ಶತ್ರು ರಾಷ್ಟ್ರಗಳು ಹವಣಿಸುತ್ತಿವೆ ಅಂತಾ ಅಮೆರಿಕ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಡೆಮೊಕ್ರೆಟಿಕ್ ಅಭ್ಯರ್ಥಿ ಜೋ ಬಿಡನ್​ ರನ್ನು ಈಗಾಗಲೇ ಸಂಪರ್ಕಿಸಿದ್ದು, ಆನ್​ಲೈನ್ ಮೂಲಕ ತಪ್ಪು ಮಾಹಿತಿ ಹರಡಿ ಚುನಾವಣೆ ಬಗ್ಗೆ ಗೊಂದಲ ಮೂಡಿಸುತ್ತಿವೆ ಅಂತಾ ಹೇಳಿದ್ದಾರೆ.

3 ಗಂಟೆಗೊಬ್ಬ ಮಹಿಳೆ ಸಾವು!
ಕೊರೊನಾ ಸೋಂಕಿನಿಂದ ನಲುಗಿರುವ ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಆಘಾತಕಾರಿ ವಿಚಾರ ಬಯಲಾಗಿದೆ. ಸೌತ್ ಆಫ್ರಿಕಾದಲ್ಲಿ ಪ್ರತಿ 3 ಗಂಟೆಗೊಮ್ಮೆ ಮಹಿಳೆಯೊಬ್ಬಳ ಹತ್ಯೆಯಾಗುತ್ತಿದೆಯಂತೆ. ಲಿಂಗಬೇಧ ಸಮಸ್ಯೆ ಹೆಚ್ಚಾಗಿದ್ದು, ಕೊರೊನಾಗಿಂತಲೂ ಮಾರಕವಾಗಿದೆ ಅಂತಾ ಹೇಳಲಾಗ್ತಿದೆ. ಲಿಂಗದ ಆಧಾರದಲ್ಲಿ ವಿವಾದ ಭುಗಿಲೆದ್ದಿದ್ದು ಸರ್ಕಾರ ಈ ಬಗ್ಗೆ ಕಾನೂನು ಬಿಗಿಗೊಳಿಸುವಂತೆ ಒತ್ತಾಯಿಸಲಾಗಿದೆ.

ಕೊರೊನಾ ವಿಷವ್ಯೂಹ
ಹೆಮ್ಮಾರಿ ವೈರಸ್​ನಿಂದಾಗಿ ಇಡೀ ಜಗತ್ತೇ ಬೆಚ್ಚಿಬಿದ್ದಿದ್ದು, ಸೋಂಕಿತರ ಸಂಖ್ಯೆಗೆ ಎಲ್ಲೆಯೇ ಇಲ್ಲದಂತಾಗಿದೆ. ಕೊರೊನಾದಿಂದಾಗಿ 2,02,49,553ಕ್ಕೆ ಏರಿಕೆಯಾಗಿದ್ದು, ವೈರಸ್​ನಿಂದಾಗಿ 7,38,726 ಜನರು ಸಾವನ್ನಪ್ಪಿದ್ರೆ, 63,97,596 ಜನರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 64 ಸಾವಿರ ಜನರ ಸ್ಥಿತಿ ಚಿಂತಾಜನಕವಾಗಿದೆ.

ಸಿಮ್ಟಮ್ಸ್​ ಇಲ್ಲಿದಿದ್ರೂ ಸಮಸ್ಯೆ!
ಕೊರೊನಾ ರೋಗ ಲಕ್ಷಣಗಳು ಇಲ್ಲ ಅಂತಾ ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಯಾಕಂದ್ರೆ, ನೆಗಡಿ,ಶೀತ ಕೆಮ್ಮು ಜ್ವರ ಇಲ್ಲದಿದ್ದರೂ ಸಹ, ಕೊರೊನಾ ಅಷ್ಟೇ ಪ್ರಮಾಣದಲ್ಲಿ ಕಾಡಲಿದೆಯಂತೆ. ದಕ್ಷಿಣ ಕೊರಿಯಾದಲ್ಲಿ ನಡೆದ ಸಂಶೋಧನೆ ಪ್ರಕಾರ, ಎ ಸಿಮ್ಟೊಮೆಟಿಕ್ ಕೇಸ್​ಗಳಲ್ಲಿ, ಸೋಂಕಿತರು ಹೇಗೆ ಕೊರೊನಾದಿಂದ ಬಚಾವ್ ಆಗಲು ಸಾಧ್ಯವಿಲ್ಲ. ಎಲ್ಲಾ ರೋಗ ಲಕ್ಷಣಗಳು ಇರುವಂತಾ ಸೋಂಕಿತರಷ್ಟೇ ಇವರೂ ಬಾಧಿತರಾಗಿರ್ತಾರೆ ಅಂತಾ ಹೇಳಲಾಗಿದೆ.

ಕೊರೊನಾ ‘ತಾಯ್ನಾಡು’
ಫಿಲಿಪೈನ್ಸ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,36,638ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ 2,294 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬ್ಯಾಂಕಾಕ್ ಮೂಲದ ಥಾಯ್ಲೆಂಡ್ ಪತ್ರಿಕೆಯಲ್ಲಿ ಫಿಲಿಪೈನ್ಸ್​ ಬಗ್ಗೆ ಲ್ಯಾಂಡ್ ಆಫ್ ಕೊವಿಡ್-19 ಅಂತಾ ಹೆಡ್​ಲೈನ್ ಬರೆದಿದೆ. ಇದಕ್ಕೆ ಖಂಡನೆ ವ್ಯಕ್ತಪಡಿಸಿರುವ ಫಿಲಿಪೈನ್ಸ್ ಸರ್ಕಾರ, ಪತ್ರಿಕೆಗೆ ನೋಟಿಸ್ ನೋಡಿದೆ. ಇದು ಸೂಕ್ತವಲ್ಲದ ಹೆಡ್​ಲೈನ್ ಅಂತಾ ಕಿಡಿ ಕಾರಿದೆ.

ಕ್ಯೂಬಾದಲ್ಲಿ ಲಾಕ್​ಡೌನ್
ಕ್ಯೂಬಾ ರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,046ಕ್ಕೆ ಏರಿಕೆಯಾಗಿದ್ದು, 88 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ 498 ಜನರು ವೈರಸ್ ವಿರುದ್ಧ ಹೋರಾಡುತ್ತಿದ್ರೆ, 2,460 ಜನರು ಗುಣಮುಖರಾಗಿದ್ದಾರೆ. ಹೀಗಾಗಿ, ದೇಶದಲ್ಲಿ ಲಾಕ್​ಡೌನ್ ವಿಧಿಸಲಾಗಿದ್ದು, ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಗ್ರೀಸ್​ನಲ್ಲಿ ಭೀಕರ ಪ್ರವಾಹ
ಗ್ರೀಸ್ ದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಎಲ್ವಿಯಾ ದ್ವೀಪದ ಪೊಲಿಟಿಕಾ ಗ್ರಾಮವಂತೂ ಪ್ರವಾಹದಿಂದ ಕಂಗೆಟ್ಟು ಹೋಗಿದೆ. ಪ್ರವಹಾದಿಂದ ಹಲವು ಮನೆಗಳು ಜಲಾವೃತಗೊಂಡಿದ್ರೆ, ಬೆಳೆಗಳು ನಾಶಗೊಂಡಿವೆ. ವಸ್ತುಗಳೆಲ್ಲಾ ಕೊಚ್ಚಿಕೊಂಡು ಹೋಗಿದ್ದು, ರಾಶಿ ರಾಶಿ ಕಸದ ರಾಶಿ ಬೋರ್ಟುಚಿಯಲ್ಲಿ ಸಂಗ್ರಹವಾಗಿದೆ. ಕಾರು, ಬೈಕ್, ಟ್ರಕ್​ಗಳು ನೀರಿನಲ್ಲ ಕೊಚ್ಚಿ ಹೋಗಿವೆ.

ಷರತ್ತಿನ ಬೈಕ್ ಱಲಿ
ಅಮೆರಿಕದಲ್ಲಿ ಕೊರೊನಾ ಅಬ್ಬರಿಸುತ್ತಿರುವುದರ ಮಧ್ಯೆಯೇ, ಡಕೋಟ ಬೈಕ್ ಱಲಿಯೂ ನಡೆದಿದೆ. ಱಲಿ ನಡೆದರೆ ಕೊರೊನಾ ಸೂಪರ್ ಸ್ಪ್ರೆಡರ್​ ಆಗಿ ಹರಡುಬ ಭೀತಿ ಎದುರಾಗಿತ್ತು. ಹೀಗಾಗಿ, ಸ್ಥಳೀಯ ಆಡಳಿತವು ಱಲಿ ನಡೆಸುವುದು ಬಿಡುವುದು ಸ್ಥಳೀಯರ ಆಯ್ಕೆಗೇ ಬಿಟ್ಟಿದೆ. ಸ್ಟರ್ಗಿಸ್​ನಲ್ಲಿ 80ನೇ ವರ್ಷದ ಮೋಟರ್ ಸೈಕಲ್ ಱಲಿ ಸದ್ಯ ಕೆಲ ಷರತ್ತುಗಳ ಮೂಲಕ ನಡೆಸಲಾಗಿದೆ.

ಬ್ರೆಜಿಲ್ ಗಾಯದ ಮೇಲೆ ‘ಬರೆ’
ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ಬ್ರೆಜಿಲ್​ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಮೇಜಾನ್ ಕಾಡುಗಳಲ್ಲಿ ಪದೇ ಪದೇ ಕಾಡ್ಚಿಚ್ಚು ಕಾಣಿಸಿಕೊಳ್ತಿದ್ದು ಆಘಾತ ತಂದಿದೆ. ಆಗಸ್ಟ್ ವರೆಗೂ ಅಮೇಜಾನ್​ ಕಾಡಿನಲ್ಲಿ ಸುಮಾರು 5,680 ಬಾರಿ ಕಾಡ್ಚಿಚ್ಚು ಕಾಣಿಸಿಕೊಂಡಿರೋದಾಗಿ ಬ್ರೆಜಿಲ್​ನ ಬಾಹ್ಯಾಕಾಶ ಸಂಶೋಧನಾ ಏಜೆನ್ಸಿ ಹೇಳಿದೆ.