ಟರ್ಕಿಯ ಏರೋಸ್ಪೇಸ್ ಕಂಪನಿ ಮೇಲೆ ಉಗ್ರರ ದಾಳಿ; ನಾಲ್ವರು ಸಾವು, 14 ಮಂದಿಗೆ ಗಾಯ

ಟರ್ಕಿಯ ಏರೋಸ್ಪೇಸ್ ಇಂಡಸ್ಟ್ರೀಸ್ (ಟಿಎಐ) ಕಂಪನಿ ಮೇಲೆ ಇಂದು ಭಯೋತ್ಪಾದಕರು ದಾಳಿ ಮಾಡಿದ ನಂತರ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 14 ಜನ ಗಾಯಗೊಂಡಿದ್ದಾರೆ. ಟರ್ಕಿಯ ಅಂಕಾರದ ಕಹ್ರಾಮಂಕಜನ್‌ನಲ್ಲಿರುವ ಟುಸಾಸ್ ಕಂಪನಿ ಮೇಲೆ ಉಗ್ರರ ದಾಳಿ ನಡೆಸಲಾಯಿತು.

ಟರ್ಕಿಯ ಏರೋಸ್ಪೇಸ್ ಕಂಪನಿ ಮೇಲೆ ಉಗ್ರರ ದಾಳಿ; ನಾಲ್ವರು ಸಾವು, 14 ಮಂದಿಗೆ ಗಾಯ
ಟರ್ಕಿಯಲ್ಲಿ ಉಗ್ರರ ದಾಳಿ
Follow us
|

Updated on: Oct 23, 2024 | 9:23 PM

ನವದೆಹಲಿ: ಟರ್ಕಿಯ ಏರೋಸ್ಪೇಸ್ ಇಂಡಸ್ಟ್ರೀಸ್ (TUSAS) ನ ಪ್ರಧಾನ ಕಚೇರಿಯಲ್ಲಿ ಇಂದು ಮಾರಣಾಂತಿಕ ದಾಳಿ ನಡೆದಿದೆ ಎಂದು ಟರ್ಕಿ ದೃಢಪಡಿಸಿದೆ. ಮಾಧ್ಯಮಗಳು ಘಟನಾ ಸ್ಥಳದಲ್ಲಿ ಜೋರಾಗಿ ಸ್ಫೋಟವನ್ನು ವರದಿ ಮಾಡಿದೆ ಮತ್ತು ಗುಂಡಿನ ವಿನಿಮಯದ ವಿಡಿಯೋ ತುಣುಕನ್ನು ಪ್ರಸಾರ ಮಾಡಿವೆ. ಈ ಸ್ಫೋಟದ ಕಾರಣ ಮತ್ತು ನಂತರದ ಗುಂಡಿನ ದಾಳಿ ನಡೆಸಿದವರ ವಿವರ ಇನ್ನೂ ತಿಳಿದುಬಂದಿಲ್ಲ. ಆದರೂ ಕೆಲವು ವರದಿಗಳು ಸಂಭವನೀಯ ಆತ್ಮಹತ್ಯಾ ದಾಳಿಯನ್ನು ಸೂಚಿಸುತ್ತವೆ. ಸರ್ಕಾರಿ ಸ್ವಾಮ್ಯದ ಅನಡೋಲು ಏಜೆನ್ಸಿ ವರದಿ ಮಾಡಿದಂತೆ ತುರ್ತು ಸೇವೆಗಳನ್ನು ಪ್ರದೇಶಕ್ಕೆ ರವಾನಿಸಲಾಗಿದೆ.

TUSAS ಟರ್ಕಿಯ ಪ್ರಮುಖ ರಕ್ಷಣಾ ಮತ್ತು ವಾಯುಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸೌಲಭ್ಯವು ಅಂಕಾರಾದ ಕಹ್ರಾಮಂಕಜನ್‌ನಲ್ಲಿ 43 ಮಿಲಿಯನ್ ಚದರ ಅಡಿಗಳನ್ನು ಒಳಗೊಂಡಿದೆ. ಇದು ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಉಪಗ್ರಹಗಳ ಉತ್ಪಾದನಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಘಟನೆಯ ನಂತರ, ಟರ್ಕಿಯ ಬೆಂಚ್‌ಮಾರ್ಕ್ ಸ್ಟಾಕ್ ಸೂಚ್ಯಂಕವು ಶೇ. 2ರಷ್ಟು ಕುಸಿದಿದೆ. ಈ ಘಟನಾ ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರಿದಿದ್ದು, ಕೆಲವು ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿರಬಹುದು ಎಂದು ಎನ್‌ಟಿವಿ ವರದಿ ಮಾಡಿದೆ. ಅಂಕಾರಾದ ಕಹ್ರಾಮಂಕಜನ್ ಜಿಲ್ಲೆಯ ಆವರಣದ ಮೇಲೆ ಹೆಲಿಕಾಪ್ಟರ್‌ಗಳು ಹಾರುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ- ಭಾರತ ಮುಖಾಮುಖಿ; ಭಯೋತ್ಪಾದನೆ ವಿರುದ್ಧ ದ್ವಂದ್ವ ನಿಲುವಿಲ್ಲ ಎಂದ ಮೋದಿ

ನಾನು ಈ ಹೇಯ ದಾಳಿಯನ್ನು ಖಂಡಿಸುತ್ತೇನೆ. ಭಯೋತ್ಪಾದಕನನ್ನು ಕೊಲ್ಲುವವರೆಗೂ ನಮ್ಮ ಹೋರಾಟವು ಮುಂದುವರಿಯುತ್ತದೆ ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ. ನಮ್ಮ ಹುತಾತ್ಮರ ಮೇಲೆ ದೇವರು ಕರುಣಿಸಲಿ. ನಮ್ಮ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್