ಕಾಬೂಲ್​​ ಏರ್​ಪೋರ್ಟ್​​ನಲ್ಲಿ 40 ಮಂದಿ ಸಾವು; ನಿಮ್ಮ ಮನೇಲೇ ಇರಲಿ ಎಂದ ತಾಲಿಬಾನ್​ ಕಮಾಂಡರ್​

| Updated By: Lakshmi Hegde

Updated on: Aug 18, 2021 | 3:25 PM

ಸದ್ಯ ಅಫ್ಘಾನಿಸ್ತಾನಕ್ಕೆ ಬೇರೆ ಯಾವುದೇ ಪ್ರಯಾಣಿಕರ ವಿಮಾನಗಳ ಸಂಚಾರ ಇಲ್ಲ. ವಿವಿಧ ದೇಶಗಳನ್ನು ಅಲ್ಲಿರುವ ತಮ್ಮ ದೇಶಗಳ ನಾಗರಿಕರನ್ನು ಸ್ಥಳಾಂತರ ಮಾಡಲು ವಿಶೇಷ ವಿಮಾನ ಸಂಚಾರ ವ್ಯವಸ್ಥೆ ಮಾಡಿದ್ದು, ಬಿಟ್ಟರೆ ಉಳಿದಂತೆ ಇನ್ಯಾವುದೇ ವಾಣಿಜ್ಯ ವಿಮಾನಗಳು ಸಂಚಾರ ಮಾಡುತ್ತಿಲ್ಲ.

ಕಾಬೂಲ್​​ ಏರ್​ಪೋರ್ಟ್​​ನಲ್ಲಿ 40 ಮಂದಿ ಸಾವು; ನಿಮ್ಮ ಮನೇಲೇ ಇರಲಿ ಎಂದ ತಾಲಿಬಾನ್​ ಕಮಾಂಡರ್​
ಕಾಬೂಲ್​ ಏರ್​ಪೋರ್ಟ್​​ ಬಳಿಯ ದೃಶ್ಯ
Follow us on

ಸೋಮವಾರದಿಂದ ಇಂದಿನವರೆಗೆ ಕಾಬೂಲ್​ ಏರ್​ಪೋರ್ಟ್ (Kabul Airport)​​ನಲ್ಲಿ ಒಟ್ಟು 40 ಮಂದಿ ಮೃತಪಟ್ಟಿದ್ದಾರೆ. ವಿದೇಶಿ ಪಡೆಗಳ ಗುಂಡಿನ ದಾಳಿ ಮತ್ತು ಕಾಲ್ತುಳಿತದಿಂದ ಈ ಸಾವು ಉಂಟಾಗಿದೆ ಎಂದು ತಾಲಿಬಾನ್​ ಕಮಾಂಡರ್ (Taliban Commander)​ ಇಂದು ಹೇಳಿದ್ದಾನೆ. ಅಲ್ಲದೆ, ಕಾಬೂಲ್​ ಏರ್​ಪೋರ್ಟ್​​ನಲ್ಲಿ ವಿಮಾನಗಳಿವೆ. ಅದರ ಮೂಲಕ ಬೇರೆ ದೇಶಗಳಿಗೆ ಹೋಗಬಹುದು ಎಂಬ ಸುಳ್ಳು ಸುದ್ದಿಗಳನ್ನು ನಂಬಿ ಜನರು ಮೋಸ ಹೋಗಿ, ಏರ್​​ಪೋರ್ಟ್​ಗೆ ಬರಬಾರದು ಎಂದೂ ಆ ಕಮಾಂಡರ್​ ಮನವಿ ಮಾಡಿದ್ದಾನೆ.

ವಿದೇಶಿ ವಿಮಾನಗಳಿಗೆ ಹತ್ತಲು ನೂಕು-ನುಗ್ಗಲು ಮಾಡಬಾರದು. ಯಾವುದೇ ವಿಮಾನ ಕಂಡ ತಕ್ಷಣ ಹೋಗಿ ನೇತಾಡಬೇಡಿ. ಸೋಮವಾರದಿಂದ ಇಲ್ಲಿಯವರೆಗೆ ಕಾಬೂಲ್​ ಏರ್​​ಪೋರ್ಟ್​ನಲ್ಲಿ ನಡೆದ ಕಾಲ್ತುಳಿತ, ಗುಂಡಿನ ದಾಳಿಯಿಂದ 40 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಅಫ್ಘಾನಿಗರು ನಿಮ್ಮನಿಮ್ಮ ಮನೆಯಲ್ಲೇ ಇರಿ. ಆಗ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತಾಲಿಬಾನ್​ ಕಮಾಂಡರ್​ ಮೊಹಿಬುಲ್ಲಾ ಹಕ್ಮತ್​ ಹೇಳಿದ್ದಾನೆ.

ಸದ್ಯ ಅಫ್ಘಾನಿಸ್ತಾನಕ್ಕೆ ಬೇರೆ ಯಾವುದೇ ಪ್ರಯಾಣಿಕರ ವಿಮಾನಗಳ ಸಂಚಾರ ಇಲ್ಲ. ವಿವಿಧ ದೇಶಗಳನ್ನು ಅಲ್ಲಿರುವ ತಮ್ಮ ದೇಶಗಳ ನಾಗರಿಕರನ್ನು ಸ್ಥಳಾಂತರ ಮಾಡಲು ವಿಶೇಷ ವಿಮಾನ ಸಂಚಾರ ವ್ಯವಸ್ಥೆ ಮಾಡಿದ್ದು, ಬಿಟ್ಟರೆ ಉಳಿದಂತೆ ಇನ್ಯಾವುದೇ ವಾಣಿಜ್ಯ ವಿಮಾನಗಳು ಸಂಚಾರ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಅಫ್ಘಾನಿಸ್ತಾನ ವಾಯು ಮಾರ್ಗ ಸಹ ಮುಚ್ಚಲ್ಪಟ್ಟಿದ್ದು, ಆ ಮಾರ್ಗವಾಗಿ ಬೇರೆ ದೇಶಗಳಿಗೆ ಪ್ರಯಾಣ ಮಾಡುತ್ತಿದ್ದ ವಿಮಾನಗಳೂ ಪರ್ಯಾಯ ಮಾರ್ಗ ಕಂಡುಕೊಂಡಿವೆ. ಭಾನುವಾರ ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾದ ಮರುದಿನದಿಂದ ಅಂದರೆ, ಸೋಮವಾರದಿಂದ ಕಾಬೂಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮೊದಲ ದಿನವೇ ಏಳು ಮಂದಿ ಮೃತರಾಗಿದ್ದರು. ಸದ್ಯ ಅಲ್ಲಿನ ಜನರು ಅಫ್ಘಾನಿಸ್ತಾನವನ್ನು ಬಿಟ್ಟರೆ ಸಾಕೆಂಬ ನಿರ್ಧಾರಕ್ಕೆ ಬಂದವರಂತೆ ಸಿಕ್ಕ ವಿಮಾನ ಹತ್ತಿ ಹೋಗುತ್ತಿದ್ದಾರೆ. ವೀಸಾ, ಪಾಸ್​ಪೋರ್ಟ್ ಏನೇನೂ ಇಲ್ಲದಿದ್ದರೂ ವಿಮಾನ ಹತ್ತಿ ಕುಳಿತುಕೊಳ್ಳುತ್ತಿದ್ದಾರೆ. ಅಂಥ ಮನಕಲಕುವ ಅನೇಕ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ.

ಇದನ್ನೂ ಓದಿ: West Bengal ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಲಸಿಕೆ ವ್ಯರ್ಥ ಆಗಿಲ್ಲ; ಸಿರಿಂಜ್ ಕೊರತೆಯೇ ಇಲ್ಲಿನ ಸಮಸ್ಯೆ

ವಿಶೇಷ ಚೇತನ ಮಕ್ಕಳ ಕೈಯಲ್ಲಿ ಅರಳುತ್ತಿದೆ ಸಸ್ಯ ಬೀಜದಿಂದ ತಯಾರಿಸಿದ ರಾಖಿ; ಪರಿಸರ ಕಾಳಜಿಗೆ ಮಹತ್ವದ ಹೆಜ್ಜೆ