Video: ಮಹಿಳಾ ರಾಜಕಾರಣಿಗಳ ಬಗ್ಗೆ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಸಿಕ್ಕಾಪಟೆ ನಕ್ಕ ತಾಲಿಬಾನ್​ ಉಗ್ರರು; ಕ್ಯಾಮರಾ ಆಫ್​ ಮಾಡಿಸಿದರು !

Taliban Terrorists: ತಾಲಿಬಾನ್​​ ಆಡಳಿತದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎಂಬುದು ಎಲ್ಲರೂ ನೋಡಿದ್ದಾರೆ. ಇದೀಗ ಅಫ್ಘಾನಿಸ್ತಾನ ತಾಲಿಬಾನ್​ ವಶವಾಗಿದ್ದರಿಂದ ಅತ್ಯಂತ ಹೆಚ್ಚು ಕಷ್ಟಪಡುವವರು ಮಹಿಳೆಯರೇ ಎಂಬುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

Video: ಮಹಿಳಾ ರಾಜಕಾರಣಿಗಳ ಬಗ್ಗೆ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಸಿಕ್ಕಾಪಟೆ ನಕ್ಕ ತಾಲಿಬಾನ್​ ಉಗ್ರರು; ಕ್ಯಾಮರಾ ಆಫ್​ ಮಾಡಿಸಿದರು !
ಪತ್ರಕರ್ತೆ ಕೇಳಿದ ಪ್ರಶ್ನೆಗೆ ನಕ್ಕ ತಾಲಿಬಾನಿಗಳು
Follow us
TV9 Web
| Updated By: Lakshmi Hegde

Updated on: Aug 18, 2021 | 1:03 PM

ತಾಲಿಬಾನ್​ ಉಗ್ರರಿಗೆ ಸಂಬಂಧಪಟ್ಟ ಮತ್ತು ಅಫ್ಘಾನಿಸ್ತಾನ(Afghanistan)ದ ಚಿತ್ರಣವನ್ನು ಕಟ್ಟಿಕೊಡುವ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ತುಂಬ ವೈರಲ್​ ಆಗುತ್ತಿವೆ. ಹಾಗೇ, ಈಗ ಪತ್ರಕರ್ತೆಯೊಬ್ಬಳು ತಾಲಿಬಾನ್​ ಉಗ್ರ (Taliban Terrorists)ರೊಂದಿಗೆ ಸಂವಾದ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಮೂವರು ತಾಲಿಬಾನ್​ ಉಗ್ರರನ್ನು ಪತ್ರಕರ್ತೆಯೊಬ್ಬಳು ಸಂದರ್ಶನ ಮಾಡುವ ವಿಡಿಯೋ ಇದು.

ಆ ಪತ್ರಕರ್ತೆ ತಾಲಿಬಾನ್​ ಉಗ್ರರ ಬಳಿ, ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್​ ಘನಿ ದೇಶ ತೊರೆದಿದ್ದಾರೆ. ಈಗ ನಿಮ್ಮ ಆಡಳಿತ ಶುರುವಾಗಿದೆ. ನಿಮ್ಮ ಆಡಳಿತದಲ್ಲಿ, ಅಪ್ಘಾನಿಸ್ತಾನ ಮಹಿಳೆಯರ ಹಕ್ಕುಗಳನ್ನು ಗೌರವಿಸಲಾಗುತ್ತದೆಯೇ ಎಂದು ಮೊದಲು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ತಾಲಿಬಾನ್​ ಉಗ್ರ, ಹೌದು..ಇಸ್ಲಾಮಿಕ್​ ಕಾನೂನಿನ (ಶರಿಯಾ) ಪ್ರಕಾರ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿದು, ಅದನ್ನು ಗೌರವಿಸುತ್ತೇವೆ ಎಂದು ಉತ್ತರಿಸುತ್ತಾನೆ. ಆಗ ಮುಂದುವರಿದ ಪತ್ರಕರ್ತೆ, ಮಹಿಳಾ ರಾಜಕಾರಣಿಗಳೂ ಸ್ಪರ್ಧಿಸಲು ಅವಕಾಶ ಇರುವ ಪ್ರಜಾಪ್ರಭುತ್ವ ಸರ್ಕಾರವನ್ನು ನೀವು ಒಪ್ಪಿಕೊಳ್ಳುತ್ತೀರಾ? ಮಹಿಳೆಯರು ಚುನಾವಣೆಗೆ ನಿಂತರೆ ಮತ ಹಾಕಲು ನಿಮ್ಮ ಆಡಳಿತದಲ್ಲಿ ಅವಕಾಶ ಇದೆಯಾ ಎಂದು ಕೇಳುತ್ತಾಳೆ.

ಈ ಪ್ರಶ್ನೆ ಕೇಳುತ್ತಿದ್ದಂತೆ ತಾಲಿಬಾನ್​ ಉಗ್ರರು ಬಿದ್ದುಬಿದ್ದು ನಗಲು ಶುರು ಮಾಡುತ್ತಾರೆ. ಅಲ್ಲದೆ, ಮಹಿಳಾ ಪತ್ರಕರ್ತೆಯೊಟ್ಟಿಗೆ ಇದ್ದ ಕ್ಯಾಮರಾಮೆನ್​​ ಬಳಿ ಕ್ಯಾಮರಾ ಬಂದ್​ ಮಾಡು ಎನ್ನುತ್ತಾರೆ. ಈ ಪ್ರಶ್ನೆ ನನ್ನಲ್ಲಿ ನಗುಮೂಡಿಸುತ್ತದೆ ಎಂದು ಒಬ್ಬ ತಾಲಿಬಾನಿ ಹೇಳುವುದನ್ನು ನೀವು ಕೇಳಿಸಿಕೊಳ್ಳಬಹುದು.

ತಾಲಿಬಾನ್​​ ಆಡಳಿತದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎಂಬುದು ಎಲ್ಲರೂ ನೋಡಿದ್ದಾರೆ. ಇದೀಗ ಅಫ್ಘಾನಿಸ್ತಾನ ತಾಲಿಬಾನ್​ ವಶವಾಗಿದ್ದರಿಂದ ಅತ್ಯಂತ ಹೆಚ್ಚು ಕಷ್ಟಪಡುವವರು ಮಹಿಳೆಯರೇ. ಹೀಗಾಗಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ, ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕು ರಕ್ಷಣೆಗೆ ಸಂಬಂಧ ಮೀಸಲಾತಿ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಕಾಬೂಲ್​​ನಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸಿದ ತಾಲಿಬಾನಿಗಳು, ನಾವೀಗ ಬದಲಾಗಿದ್ದೇವೆ. ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಮಂಡ್ಯ: ದಿಶಾ ಸಭೆ ಆರಂಭದಲ್ಲೇ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್, ಸುಮಲತಾ ಸಿಬ್ಬಂದಿ ವಿರುದ್ಧ ಗರಂ

ಬಾಲಿವುಡ್​ಗೆ ಶಾರುಖ್​ ಖಾನ್​ ಮಗಳ ಬ್ಯಾಂಗ್ ಎಂಟ್ರಿ; ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ ಸ್ಟಾರ್​ ನಿರ್ದೇಶಕಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?