ನೇಪಾಳದಲ್ಲಿ ಭಾರಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾನುವಾರ ಕಠ್ಮಂಡುವಿನಿಂದ ಪೂರ್ವ-ಆಗ್ನೇಯಕ್ಕೆ 147 ಕಿಮೀ ದೂರದಲ್ಲಿರುವ ನೇಪಾಳದ ಧಿತುಂಗ್‌ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ನೇಪಾಳದ ಕಠ್ಮಂಡುವಿನಲ್ಲಿ 7:58 ಕ್ಕೆ ಕಂಪನದ ಅನುಭವವಾಯಿತು. ನೇಪಾಳದ ಧಿತುಂಗ್ ಭಾರತದ ಮುಜಾಫರ್‌ಪುರದ ಈಶಾನ್ಯಕ್ಕೆ 170 ಕಿಮೀ ದೂರದಲ್ಲಿದೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಬಿಹಾರದ ಸೀತಾಮರ್ಹಿ, ಮುಜಾಫರ್‌ಪುರ ಮತ್ತು ಭಾಗಲ್‌ಪುರದಲ್ಲಿ ಭೂಕಂಪದ ಅನುಭವವಾಗಿತ್ತು. ಕಂಪನದಿಂದಾಗಿ ಬಿಹಾರದಲ್ಲಿ ಕೆಲವರು ಭಯಭೀತರಾಗಿದ್ದಾರೆ.
ಕೆಲವು ದಿನಗಳ ಹಿಂದೆ 4.7 ತೀವ್ರತೆಯ ಭೂಕಂಪವು ಮಧ್ಯ ನೇಪಾಳವನ್ನು ಬೆಚ್ಚಿಬೀಳಿಸಿತ್ತು, ನಿದ್ರೆಯಿಂದ ಎಚ್ಚರವಾಗಿ ಮನೆಯಿಂದ ಹೊರ ಓಡುವಂತೆ ಮಾಡಿತ್ತು. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆಯ ಭೂಕಂಪವು ಬೆಳಿಗ್ಗೆ 6.07 ಕ್ಕೆ ಸಂಭವಿಸಿತ್ತು. ಭೂಕಂಪನವು ಕಠ್ಮಂಡುವಿನಿಂದ 100 ಪೂರ್ವಕ್ಕೆ ಸಿಂಧುಪಾಲ್‌ಚೌಕ್ ಜಿಲ್ಲೆಯ ಹೆಲಂಬುದಲ್ಲಿ ಸಂಭವಿಸಿತ್ತು.