AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್ರಿಕಾದ ಬೋಟ್ಸ್ವಾನಾದಲ್ಲಿ 500 ಆನೆಗಳ ಸಾವು, ಕಾರಣ ಮಾತ್ರ ನಿಗೂಢ

ಬೋಟ್ಸ್ವಾನ: ಕಳೆದ ಕೆಲವು ದಿನಗಳಲ್ಲಿ ಸುಮಾರು 500 ಆನೆಗಳು ಆಫ್ರಿಕಾದ ಬೋಟ್ಸ್ವಾನಾದಲ್ಲಿ ಮೃತಪಟ್ಟಿವೆ. ಈ ರೀತಿ ಆನೆಗಳ ನಿಗೂಢ ಸಾವಿಗೆ ಸಂರಕ್ಷಣಾ ವಿಪತ್ತು ಕಾರಣ ಎಂದು ವಿವರಿಸಲಾಗಿದೆ. ಆದರೆ ಆನೆಗಳ ಸಾವು ಮಾತ್ರ ತುಂಬಾ ದುರಂತದ ಸಂಗತಿ. ಮೇ ತಿಂಗಳ ಆರಂಭದಲ್ಲಿ ಒಕಾವಾಂಗೊ ಡೆಲ್ಟಾದಲ್ಲಿ ಆನೆಗಳ ಸಾವು ಸಂಭವಿಸಿದೆ ಎಂದು ಇದೇ ರೀತಿ ವರದಿಯಾಗಿತ್ತು. ತಿಂಗಳ ಅಂತ್ಯದ ವೇಳೆಗೆ 169 ಆನೆಗಳು ಸಾವನ್ನಪ್ಪಿದ್ದವು. ಜೂನ್ ಮಧ್ಯದ ವೇಳೆಗೆ, ಈ ಸಂಖ್ಯೆ ದ್ವಿಗುಣಗೊಂಡಿತ್ತು. 70% ಸಾವುಗಳು ವಾಟರ್‌ಹೋಲ್‌ಗಳ ಸಮೀಪವೇ […]

ಆಫ್ರಿಕಾದ ಬೋಟ್ಸ್ವಾನಾದಲ್ಲಿ 500 ಆನೆಗಳ ಸಾವು, ಕಾರಣ ಮಾತ್ರ ನಿಗೂಢ
ಆಯೇಷಾ ಬಾನು
|

Updated on:Jul 03, 2020 | 10:27 AM

Share

ಬೋಟ್ಸ್ವಾನ: ಕಳೆದ ಕೆಲವು ದಿನಗಳಲ್ಲಿ ಸುಮಾರು 500 ಆನೆಗಳು ಆಫ್ರಿಕಾದ ಬೋಟ್ಸ್ವಾನಾದಲ್ಲಿ ಮೃತಪಟ್ಟಿವೆ. ಈ ರೀತಿ ಆನೆಗಳ ನಿಗೂಢ ಸಾವಿಗೆ ಸಂರಕ್ಷಣಾ ವಿಪತ್ತು ಕಾರಣ ಎಂದು ವಿವರಿಸಲಾಗಿದೆ. ಆದರೆ ಆನೆಗಳ ಸಾವು ಮಾತ್ರ ತುಂಬಾ ದುರಂತದ ಸಂಗತಿ.

ಮೇ ತಿಂಗಳ ಆರಂಭದಲ್ಲಿ ಒಕಾವಾಂಗೊ ಡೆಲ್ಟಾದಲ್ಲಿ ಆನೆಗಳ ಸಾವು ಸಂಭವಿಸಿದೆ ಎಂದು ಇದೇ ರೀತಿ ವರದಿಯಾಗಿತ್ತು. ತಿಂಗಳ ಅಂತ್ಯದ ವೇಳೆಗೆ 169 ಆನೆಗಳು ಸಾವನ್ನಪ್ಪಿದ್ದವು. ಜೂನ್ ಮಧ್ಯದ ವೇಳೆಗೆ, ಈ ಸಂಖ್ಯೆ ದ್ವಿಗುಣಗೊಂಡಿತ್ತು. 70% ಸಾವುಗಳು ವಾಟರ್‌ಹೋಲ್‌ಗಳ ಸಮೀಪವೇ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಈ ರೀತಿ ಆನೆಗಳ ಸಾಮೂಹಿಕ ಸಾವು ಬಹಳ ದೀರ್ಘಕಾಲದಿಂದಲೂ ನಾವು ಕಂಡಿಲ್ಲ. ಆದರೆ ಇದು ಬರಗಾಲದ ಅಭಾವದಿಂದಾಗಿ ಸಂಭವಿಸಿದ್ದ, ಅಥವಾ ಅದನ್ನು ಹೊರತು ಪಡಿಸಿ ಬೇರೇನಿದೆ ಅದು ನನಗೆ ತಿಳಿದಿಲ್ಲ ಎಂದು ಯುಕೆ ಮೂಲದ ಚಾರಿಟಿ ನ್ಯಾಷನಲ್ ಪಾರ್ಕ್ ಪಾರುಗಾಣಿಕಾ ಸಂರಕ್ಷಣಾ ನಿರ್ದೇಶಕ ಡಾ. ನಿಯಾಲ್ ಮೆಕ್ಕನ್ ಹೇಳಿದ್ದಾರೆ.

ಬೋಟ್ಸ್ವಾನ ಸರ್ಕಾರ ಇನ್ನೂ ಆನೆಗಳ ಸಾಮೂಹಿಕ ಸಾವಿಗೆ ಕಾರಣ ಹುಡುಕಲು ಮುಂದಾಗಿಲ್ಲ. ಇನ್ನು ಮಾದರಿಗಳನ್ನು ಪರೀಕ್ಷಿಸಿಲ್ಲ ಆದ್ದರಿಂದ ಸಾವಿಗೆ ಕಾರಣವೇನು ಅಥವಾ ಅವು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಎರಡು ಮುಖ್ಯ ಸಾಧ್ಯತೆಗಳು ಎಂದರೆ ವಿಷ ಅಥವಾ ಮಾರಕ ರೋಗ ಕಾರಣವಾಗಿರಬಹುದು.

Published On - 10:16 am, Fri, 3 July 20