ಅಫ್ಘಾನಿಸ್ತಾನದಲ್ಲಿ ಗುಂಡಿನ ದಾಳಿ; ಮೂವರು ಸ್ಪ್ಯಾನಿಷ್ ಪ್ರವಾಸಿಗರು ಸೇರಿ 6 ಜನರ ಸಾವು

ಶುಕ್ರವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಸುಮಾರು 180 ಕಿಲೋಮೀಟರ್ ದೂರದಲ್ಲಿರುವ ಮಧ್ಯ ಅಫ್ಘಾನಿಸ್ತಾನದ ಪರ್ವತ ನಗರವಾದ ಬಾಮಿಯಾನ್‌ನಲ್ಲಿರುವ ಬಜಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಗುಂಪಿನ ಮೇಲೆ ಗುಂಡು ಹಾರಿಸಲಾಗಿದೆ. ಈ ಘಟನೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಗುಂಡಿನ ದಾಳಿ; ಮೂವರು ಸ್ಪ್ಯಾನಿಷ್ ಪ್ರವಾಸಿಗರು ಸೇರಿ 6 ಜನರ ಸಾವು
ಅಫ್ಘಾನಿಸ್ತಾನದಲ್ಲಿ ಗುಂಡಿನ ದಾಳಿ
Follow us
ಸುಷ್ಮಾ ಚಕ್ರೆ
|

Updated on: May 18, 2024 | 10:09 PM

ಕಾಬೂಲ್: ಪ್ರವಾಸಕ್ಕೆಂದು ಅಫ್ಘಾನಿಸ್ತಾನಕ್ಕೆ (Afghanistan) ತೆರಳಿದ್ದ ಮೂವರು ಸ್ಪ್ಯಾನಿಶ್​ ಪ್ರವಾಸಿಗರು ಹೆಣವಾಗಿದ್ದಾರೆ. ಅಫ್ಘಾನಿಸ್ತಾನದ ಮಾರುಕಟ್ಟೆಗೆ ಭೇಟಿ ನೀಡುತ್ತಿದ್ದಾಗ ಮೂವರು ಸ್ಪ್ಯಾನಿಷ್ ಪ್ರವಾಸಿಗರು ಮತ್ತು ಮೂವರು ಆಫ್ಘನ್ನರ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಅವರ ಶವಗಳನ್ನು ರಾಜಧಾನಿ ಕಾಬೂಲ್​ಗೆ ಸಾಗಿಸಲಾಯಿತು ಎಂದು ತಾಲಿಬಾನ್ ಸರ್ಕಾರ ಶನಿವಾರ ತಿಳಿಸಿದೆ.

ಶುಕ್ರವಾರ ರಾಜಧಾನಿ ಕಾಬೂಲ್‌ನಿಂದ ಸುಮಾರು 180 ಕಿಲೋಮೀಟರ್ ದೂರದಲ್ಲಿರುವ ಮಧ್ಯ ಅಫ್ಘಾನಿಸ್ತಾನದ ಪರ್ವತ ನಗರವಾದ ಬಾಮಿಯಾನ್‌ನಲ್ಲಿರುವ ಬಜಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುಂಪಿನ ಮೇಲೆ ಗುಂಡು ಹಾರಿಸಲಾಗಿದೆ. “ಎಲ್ಲಾ ಮೃತ ದೇಹಗಳನ್ನು ಕಾಬೂಲ್‌ಗೆ ಸ್ಥಳಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡವರು ಕೂಡ ಕಾಬೂಲ್‌ನಲ್ಲಿದ್ದಾರೆ. ಸತ್ತವರು ಮತ್ತು ಗಾಯಗೊಂಡವರಲ್ಲಿ ಮಹಿಳೆಯರೂ ಸೇರಿದ್ದಾರೆ” ಎಂದು ಸರ್ಕಾರದ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್ ಖಾನಿ AFPಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾದರೆ 6 ತಿಂಗಳೊಳಗೆ ಪಿಒಕೆ ಭಾರತಕ್ಕೆ ಸೇರಲಿದೆ; ಸಿಎಂ ಯೋಗಿ ಭರವಸೆ

8 ಗಾಯಾಳುಗಳ ಪೈಕಿ ನಾಲ್ವರು ವಿದೇಶಿಗರಾಗಿದ್ದಾರೆ. ಒಬ್ಬ ಹಿರಿಯ ವಿದೇಶಿ ಮಹಿಳೆ ಸ್ಥಿತಿ ಗಂಭೀರವಾಗಿದೆ. ಸಾವನ್ನಪ್ಪಿದವರಲ್ಲಿ ಇಬ್ಬರು ಅಫ್ಘಾನ್ ನಾಗರಿಕರು ಮತ್ತು ಒಬ್ಬ ತಾಲಿಬಾನ್ ಸದಸ್ಯ ಸೇರಿದ್ದಾರೆ ಎಂದು ಖಾನಿ ಹೇಳಿದ್ದಾರೆ.

ಸತ್ತವರಲ್ಲಿ ಮೂವರು ಸ್ಪ್ಯಾನಿಷ್ ಪ್ರವಾಸಿಗರು ಎಂದು ಸ್ಪೇನ್ ಸರ್ಕಾರ ಶುಕ್ರವಾರ ಘೋಷಿಸಿದೆ. ಹಾಗೇ, ಒಬ್ಬ ಸ್ಪ್ಯಾನಿಷ್ ಪ್ರಜೆ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ಗಾಯಗೊಂಡವರಲ್ಲಿ ಒಬ್ಬರು ಈಗಾಗಲೇ ಕಾಬೂಲ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್