ಕಾಬೂಲ್: ಪ್ರವಾಸಕ್ಕೆಂದು ಅಫ್ಘಾನಿಸ್ತಾನಕ್ಕೆ (Afghanistan) ತೆರಳಿದ್ದ ಮೂವರು ಸ್ಪ್ಯಾನಿಶ್ ಪ್ರವಾಸಿಗರು ಹೆಣವಾಗಿದ್ದಾರೆ. ಅಫ್ಘಾನಿಸ್ತಾನದ ಮಾರುಕಟ್ಟೆಗೆ ಭೇಟಿ ನೀಡುತ್ತಿದ್ದಾಗ ಮೂವರು ಸ್ಪ್ಯಾನಿಷ್ ಪ್ರವಾಸಿಗರು ಮತ್ತು ಮೂವರು ಆಫ್ಘನ್ನರ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಅವರ ಶವಗಳನ್ನು ರಾಜಧಾನಿ ಕಾಬೂಲ್‌ಗೆ ಸಾಗಿಸಲಾಯಿತು ಎಂದು ತಾಲಿಬಾನ್ ಸರ್ಕಾರ ಶನಿವಾರ ತಿಳಿಸಿದೆ.
ಶುಕ್ರವಾರ ರಾಜಧಾನಿ ಕಾಬೂಲ್‌ನಿಂದ ಸುಮಾರು 180 ಕಿಲೋಮೀಟರ್ ದೂರದಲ್ಲಿರುವ ಮಧ್ಯ ಅಫ್ಘಾನಿಸ್ತಾನದ ಪರ್ವತ ನಗರವಾದ ಬಾಮಿಯಾನ್‌ನಲ್ಲಿರುವ ಬಜಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುಂಪಿನ ಮೇಲೆ ಗುಂಡು ಹಾರಿಸಲಾಗಿದೆ. “ಎಲ್ಲಾ ಮೃತ ದೇಹಗಳನ್ನು ಕಾಬೂಲ್‌ಗೆ ಸ್ಥಳಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡವರು ಕೂಡ ಕಾಬೂಲ್‌ನಲ್ಲಿದ್ದಾರೆ. ಸತ್ತವರು ಮತ್ತು ಗಾಯಗೊಂಡವರಲ್ಲಿ ಮಹಿಳೆಯರೂ ಸೇರಿದ್ದಾರೆ” ಎಂದು ಸರ್ಕಾರದ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್ ಖಾನಿ AFPಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾದರೆ 6 ತಿಂಗಳೊಳಗೆ ಪಿಒಕೆ ಭಾರತಕ್ಕೆ ಸೇರಲಿದೆ; ಸಿಎಂ ಯೋಗಿ ಭರವಸೆ
8 ಗಾಯಾಳುಗಳ ಪೈಕಿ ನಾಲ್ವರು ವಿದೇಶಿಗರಾಗಿದ್ದಾರೆ. ಒಬ್ಬ ಹಿರಿಯ ವಿದೇಶಿ ಮಹಿಳೆ ಸ್ಥಿತಿ ಗಂಭೀರವಾಗಿದೆ. ಸಾವನ್ನಪ್ಪಿದವರಲ್ಲಿ ಇಬ್ಬರು ಅಫ್ಘಾನ್ ನಾಗರಿಕರು ಮತ್ತು ಒಬ್ಬ ತಾಲಿಬಾನ್ ಸದಸ್ಯ ಸೇರಿದ್ದಾರೆ ಎಂದು ಖಾನಿ ಹೇಳಿದ್ದಾರೆ.
3 Spanish tourists and 3 Afghans were killed by gunfire late Friday afternoon in Bamiyan, a tourist town in central Afghanistan pic.twitter.com/zSP7eU4sYO
— vijay banga (@kuku27) May 18, 2024
ಸತ್ತವರಲ್ಲಿ ಮೂವರು ಸ್ಪ್ಯಾನಿಷ್ ಪ್ರವಾಸಿಗರು ಎಂದು ಸ್ಪೇನ್ ಸರ್ಕಾರ ಶುಕ್ರವಾರ ಘೋಷಿಸಿದೆ. ಹಾಗೇ, ಒಬ್ಬ ಸ್ಪ್ಯಾನಿಷ್ ಪ್ರಜೆ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ಗಾಯಗೊಂಡವರಲ್ಲಿ ಒಬ್ಬರು ಈಗಾಗಲೇ ಕಾಬೂಲ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ